ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರೇಯಸಿ ಕ್ಯಾರಿ ಸೈಮಂಡ್ಸ್ ತಮ್ಮ ಮಗನಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದಾರೆ. ಕೊರೊನ ಸೋಂಕಿನಿಂದ ತಮ್ಮನ್ನು ಕಾಪಾಡಿದ ಇಬ್ಬರು ವೈದ್ಯರಿಗೆ ಬೋರಿಸ್ ಈ ಮೂಲಕ ಗೌರವ ಸಲ್ಲಿಸಿದ್ದಾರೆ. ಮೂರು ದಿನದ ಮಗುವಿನ ಪೋಟೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೈಮಂಡ್ಸ್, ತಮ್ಮ ಮಗನ ಹೆಸರಿನ ಆಯ್ಕೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ತನ್ನ ಪತ್ನಿಯ ಹೆರಿಗೆ ಸಮಯದಲ್ಲಿ ಶುಶ್ರೂಷೆ ಮಾಡಿದ ಲಂಡನ್ […]

ನ್ಯೂಯಾರ್ಕ್ : ಸಾಮಾನ್ಯ ಕೊರೊನಾ ಸೋಂಕಿತರಿಗಿAತ ಕ್ಯಾನ್ಸರ್ ಇರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಶೋಧಕರ ತಂಡ ಹೇಳಿದೆ. ಅಮೆರಿಕದ ಆಲ್ಬರ್ಟ್ ಐನ್‌ಸ್ಟಿನ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ವಿಕಾಸ್ ಮೆಹ್ತಾ ”ನಾವು ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬರದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಕ್ಯಾನ್ಸರ್ ಇರುವವರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ […]

ನ್ಯೂಯಾರ್ಕ್ : ಕೊರೊನಾ ವೈರಸ್ ಹುಟ್ಟಿದ್ದು ವುಹಾನ್ ಪ್ರಯೋಗಾಲಯದಲ್ಲೇ ಎಂದು ಆರೋಪಿಸಿದ ಬೆನ್ನಲ್ಲೇ, ವುಹಾನ್ ನಗರದಲ್ಲಿ ಏಕಾಏಕಿ ಹರಡಿದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಚೀನಾ, ತಪ್ಪಾಗಿ ನಿರ್ವಹಿಸಿದೆ ಎಂದು ಶ್ವೇತಭವನ(ಡಬ್ಲೂಹೆಚ್‌ಒ) ಆರೋಪಿಸಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕೊರೊನಾ ವೈರಸ್, ಇದುವರೆಗೆ ೬೪,೦೦೦ ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ ಸುಮಾರು ೨,೪೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದಾದ್ಯಂತ ೩೪ […]

ಉತ್ತರ ಕೊರಿಯಾ :ತೀವ್ರ ಅನಾರೋಗ್ಯ, ಜೀವನ್ಮರಣ ಹೋರಾಟ ಮತ್ತು ನಿಗೂಢ ಕಣ್ಮರೆ ಸುದ್ದಿಗಳಿಂದಾಗಿ ಭಾರೀ ಚರ್ಚೆಗೆ ಕಾರಣರಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಿಮ್ ಹಠಾತ್ ಪ್ರತ್ಯಕ್ಷರಾಗಿರುವುದರಿಂದ ಎಲ್ಲ ವದಂತಿಗಳು ಮತ್ತು ಊಹಾಪೋಹಾಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ಮೂರು ವಾರಗಳಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಬಗ್ಗೆ ಕೆಲವು ಸುದ್ದಿಗಳು ವ್ಯಾಪಕವಾಗಿ ಹಬ್ಬಿತ್ತು. ಅವರು ಸರ್ಜರಿಗೆ ಒಳಗಾದ ಬಳಿಕ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಒಂದು […]

ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಹಲವರು ದೇಶಕ್ಕೆ ಬರಲಾರದೆ ವಿದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಅವರನ್ನು ಕರೆತರಲು ಸರ್ಕಾರ ಮುಂಚಿತವಾಗಿಯೇ ನೊಂದಣಿ ಮಾಡಿಸಿ ಎಂದು ಆಜ್ಞೆ ಹೊರಡಿಸಿತ್ತು. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ೩೨,೦೦೦ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಮರಳಲು ಇ-ನೊಂದಣಿಯನ್ನು ಮಾಡಿಸಿದ್ದಾರೆ.  ಇಂದಿಗೆ ೩೨,೦೦೦ಕ್ಕೂ ಹೆಚ್ಚು ನೊಂದಣಿಗಳನ್ನು ಸ್ವೀಕರಿಸಿದ್ದೇವೆ ಎಂದು ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ವಿಪುಲ್ ತಿಳಿಸಿದ್ದಾರೆ.

ನ್ಯೂಯಾರ್ಕ್: ವಿಶ್ವ ಸಂಸ್ಥೆಯಲ್ಲಿ ಭಾರತದ ಗೌರವ ಹಾಗೂ ಪ್ರತಿಷ್ಠೆಯನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಇಂದು ಸೇವೆಯಿಂದ ನಿವೃತ್ತಿಗೊಂಡರು. ಪ್ರಮುಖವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸುಳ್ಳು ಆರೋಪ ಮಾಡಿದ ಪ್ರತಿಬಾರಿಯೂ ಪಾಕಿಸ್ತಾನ ಪ್ರತಿನಿಧಿಯ ಬಾಯಿ ಮುಚ್ಚಿಸುವ ರೀತಿ ಸಮರ್ಥ ಉತ್ತರವನ್ನು ಅಕ್ಬರುದ್ದೀನ್ ನೀಡುತ್ತಿದ್ದರು. ೧೯೮೫ ತಂಡಕ್ಕೆ ಸೇರಿದ ಐ ಎಫ್ ಎಸ್ (ಭಾರತೀಯ ವಿದೇಶಾಂಗ ಸೇವೆ) […]

ವಾಷಿಂಗ್ಟನ್: ಭಾರತೀಯ ಮೂಲದ ೧೭ ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ. ಅಮೆರಿಕದ ಅಲಬಾಮಾದ ನಾರ್ತ್ಪೋರ್ಟ್ನ ಪ್ರೌಢ ಶಾಲಾಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವನೀಜಾ ರೂಪಾನಿ, ನಾಸಾದ “ನೇಮ್ ದಿ ರೋವರ್” ಸ್ಪರ್ಧೆಯಲ್ಲಿ ತನ್ನ ಪ್ರಬಂಧವನ್ನು ಸಲ್ಲಿಸಿದ್ದರು. ಇದೀಗ ನಾಸಾ ರೂಪಾನಿ ಸೂಚಿಸಿದ್ದ ಹೆಸರನ್ನೇ ಇಟ್ಟಿದೆ. ಮತ್ತೊಂದು ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ನಾಸಾದ ಮಾರ್ಸ್ ಹೆಲಿಕಾಪ್ಟರ್ ಪಾತ್ರವಾಗಲಿದ್ದು ಇದಕ್ಕೆ […]

ಕೋವಿಡ್-೧೯ ವಿರುದ್ಧದ ಹೋರಾಟಕ್ಕೆ ಪಿಎಂಜೆ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳಿಗೆ ಅನುಕೂಲವಾಗುವಂತೆ ಯುಎಸ್ ಆಡಳಿತ ೩ಮಿಲಿಯನ್ ಹಣವನ್ನು ಭಾರತಕ್ಕೆ ನೀಡಿದೆ. ಕೋವಿಡ್೧೯ ಹರಡಿಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯ ಪೀಡಿತರಿಗೆ ಸಹಾಯ ಮಾಡುವ ದೃಷ್ಠಿಯಿಂದ ಭಾರತಕ್ಕೆ ೩ ಮಿಲಿಯನ್ ಹಣವನ್ನು ಯುಎಸ್ ಹಸ್ತಾಂತರಿಸಿದೆ ಎಂದು ಯುಎಸ್ ರಾಯಭಾರಿ ಕಚೇರಿ ತಿಳಿಸಿದೆ. ಭಾರತಕ್ಕೆ ಸಹಾಯ ಮಾಡಲು ಯುಎಸ್ ಏಜೆನ್ಸಿ ಫಾರ್ ಇಂರ‍್ನ್ಯಾಷನಲ್ ಡೆವಲಪ್ಮೆಂಟ್ ಇದುವರೆಗೆ ೯ ೫.೯ ಮಿಲಿಯನ್ ಹಣದ ನೆರವು ನೀಡಿದ್ದು, […]

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿಯಿಬ್ಬರ ಸಾವಾಗಿದೆ. ಹಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಗರಿಮಾ ಕೊಠಾರಿ ಮೃತ ಮಹಿಳೆ. ಅಮೆರಿಕದ ಜರ್ಸಿಯ ಅಪಾರ್ಟಮೆಂಟನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಗರಿಮಾ ಐದು ತಿಂಗಳ ಗರ್ಭಿಣಿಯಾಗಿದ್ರು ಎಂದು ಜರ್ಸಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಮೃತಳ ಪತಿಯ ಶವ ಕೂಡ ಅಪಾರ್ಟಮೆಂಟ್ ನ ಸಮೀಪದಲ್ಲಿರುವ ಹಡ್ಸನ್ ನದಿಯ ಪಕ್ಕದಲ್ಲಿ ಪತ್ತೆಯಾಗಿದೆ.  ಮೇಲ್ನೋಟದಲ್ಲಿ ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಇನ್ನು ಪತಿ -ಪತ್ನಿ ಇಬ್ಬರು […]

ಅರುಣಾಚಲ ಪ್ರದೇಶ: ಜಾಗತಿಕ ಪಿಡುಗು ಕೋವಿಡ್-೧೯ ಸೋಂಕು ಭೀತಿಯಿಂದಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಆದರೂ ಅದನ್ನು ನಾವು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಿದ್ದೇವೆ. ಆದರೆ, ಕ್ರೀಡಾ ಸಚಿವ ಕಿರಣ್ ರಿಜುಜು ಹಂಚಿಕೊAಡಿರುವ ಮಂಗಗಳ ಚಿತ್ರವೊಂದು ನಮ್ಮ ತಪ್ಪಿನ ಅರಿವಾಗುವಂತೆ ಮಾಡುತ್ತಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಕಲ್ಲಂಗಡಿ ಮತ್ತು ಬಾಳೆ ಹಣ್ಣು ನೀಡುತ್ತಿದ್ದಾರೆ. ಈ ವೇಳೆ ಹಣ್ಣು ತಿನ್ನಲು […]

Advertisement

Wordpress Social Share Plugin powered by Ultimatelysocial