ಕೆನಡಾದ ನ್ಯಾಟೋ ಕಣ್ಗಾವಲು ಪಡೆಯ ಮಿಲಿಟರಿ ಹೆಲಿಕ್ಯಾಪ್ಟರ್ ಕಾಣೆಯಾಗಿದೆ ಎಂದು ಕೆನಡಾ ಸಶಸ್ತ್ರ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿ ಮತ್ತು ಗ್ರೀಸ್ ನಡುವಿನ ಸಮುದ್ರದ ಮೇಲೆ ಗಸ್ತು ಕೆಲಸ ನಿರ್ವಹಿಸುತ್ತಿತ್ತು. ಇದೇ ವೇಳೆ ಕಾರ್ಯಾಚರಣೆಯಲ್ಲಿ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಹೆಲಿಕ್ಯಾಪ್ಟರನ್ನು ಕೆನಡಾದ ಫ್ರೀಗೇಟ್ ಫ್ರೆಡೆರಿಕ್ಟನ್ ಗೆ ನಿಯೋಜನೆ ಮಾಡಲಾಗಿತ್ತು. ‘ನಮ್ಮ ಸಿಹೆಚ್-೧೪೮ ಸೈಕ್ಲೋನ್ ಹೆಲಿಕಾಪ್ಟರಗಳನ್ನು ಗುಣಮಟ್ಟ ಅಭಿವೃದ್ದಿ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಎಂಸಿಎಸ್ ಫ್ರೆಡೆರಿಕ್ಟನಲ್ಲಿ ನಿಯೋಜನೆ ಮಾಡಿದ್ವಿ. ಸದ್ಯ […]

ಲಂಡನ್: ಜಾಗತಿಕ ವಾಯುಯಾನದ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಬ್ರಿಟಿಷ್ ಏರ್‌ವೇಸ್‌ನ ಸುಮಾರು ೧೨,೦೦೦ ಉದ್ಯೋಗಿಗಳಿಗೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಉದ್ದೇಶಿತ ಪುನರ್ರಚನೆ ಮತ್ತು ಪುನರುಕ್ತಿ ಕಾರ್ಯಕ್ರಮದ ಬಗ್ಗೆ ಬ್ರಿಟಿಷ್ ಏರ್‌ವೇಸ್ ತನ್ನ ಕಾರ್ಮಿಕ ಸಂಘಗಳಿಗೆ ಔಪಚಾರಿಕ ಸೂಚನೆ ನೀಡಿದೆ ಎಂದು ಮಂಗಳವಾರ ಬಿಬಿಸಿ ವರದಿ ಮಾಡಿದೆ.ಇದನ್ನೂ ಓದಿ: ವಹಿವಾಟಿನ ನೆಪದಲ್ಲಿ ವ್ಯಾಪಾರಿ ವಸಾಹತು ಯೋಜನೆ; ಚೀನಾದ ಅಸಹನೆಗೆ ಕಾರಣವೇನು ಗೊತ್ತೇ?”ಈ ಪ್ರಸ್ತಾಪಗಳು ಸಮಾಲೋಚನೆಗೆ ಒಳಪಟ್ಟಿರುತ್ತವೆ. ಆದರೆ […]

ನ್ಯೂಯಾರ್ಕ್: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಆಧಾರ್ ಕಾರ್ಡ್ ಮೂಲಕ ನೇರ ಹಣ ವರ್ಗಾವಣೆ ಮಾಡುವ ಇಂಡಿಯಾ ಸ್ಟ್ಯಾಕ್ ಅಥವಾ ಇಂಟರೋಪಿರೇಬಲ್ ಸಾಫ್ಟ್ವೇರ್ ಕೊರೊನಾ ಭೀತಿಯ ನಡುವೆ ಜನರು ಧೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆದಿದೆ ಎಂದು ಮೈ ಗವರ್ನಮೆಂಟ್ ಮತ್ತು ಡಿಜಿಟಲ್ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಅರವಿಂದ್ ಗುಪ್ತಾ ತಿಳಿಸಿದ್ದಾರೆ. ಸದ್ಯ ಲಭ್ಯವಿರುವ ಅಂಕಿಅAಶಗಳ ಪ್ರಕಾರ, ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ […]

ಬೀಜಿಂಗ್: ಮೂರು ತಿಂಗಳ ಅವಧಿಯ ಸುದೀರ್ಘ ಲಾಕ್‌ಡೌನ್ ಮುಗಿಸಿ ಚೀನಾದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸ ಮಾಡಲಾದ ‘ಒಂದು ಮೀಟರ್ ಟೋಪಿ’ಗಳನ್ನು ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ. ಈ ಟೋಪಿಗಳನ್ನು ಕಾರ್ಡ್ಬೋರ್ಡ್ ಶೀಟ್, ಕಡ್ಡಿಗಳನ್ನು ಬಳಸಿ ಮಾಡಲಾಗಿವೆ. ಟೋಪಿಯ ಎರಡೂ ತುದಿಯಲ್ಲಿ ಉದ್ದದ ಕಡ್ಡಿಗಳನ್ನು ಸಿಕ್ಕಿಸಲಾಗಿದ್ದು, ಇದು ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಇಂತಹ ವಿಚಿತ್ರ ವಿನ್ಯಾಸದ ಟೋಪಿಗಳನ್ನು ತೊಟ್ಟು ಮಕ್ಕಳು ಶಾಲೆಯಲ್ಲಿ […]

ಜೋಹಾನ್ಸ್ ಬರ್ಗ: ದಕ್ಷಿಣ ಆಫ್ರಿಕಾದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾಸ್ಕ್ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಫುಲ್ ಟ್ರೋಲ್ ಆಗಿದ್ದಾರೆ.ಕೊರೊನಾ ಸೋಂಕು ತಡೆಯಲು ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೇ ೧ರ ನಂತರ ದೇಶದಲ್ಲಿ ಲಾಕ್‌ಡೌನ್ ಅನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗುವುದು ಎಂದು ಘೋಷಿಸಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.ತಮ್ಮ ಭಾಷಣ ಮುಗಿಯುತ್ತಿದ್ದಂತೆ ಮಾಸ್ಕ್ ಧರಿಸಲು ಮುಂದಾಗಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸಲಾಗದೆ ಕಷ್ಟಪಟ್ಟಿದ್ದಾರೆ. ಈ […]

ಟೋಕಿಯೋ (ಜಪಾನ್): ಅಪಹಾಸ್ಯ ಹಾಗೂ ಟೀಕೆಯ ಕಾರಣದಿಂದಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸಲು ಆರಂಭಿಸಿದ ಜನ, “ಅಬೆನೊಮಾಸ್ಕ್” ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದರು.ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ ೨ ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್ನ ಗುಣಮಟ್ಟ ಹಾಗೂ ಪರಿಣಾಮವನ್ನು ಅನುಮಾನಿಸಿದರು.ಮಾಸ್ಕ್ಗಳು ಬಟ್ಟೆಯಿಂದ […]

ಅಮೆರಿಕ: ಉತ್ತರ ಕೊರಿಯಾದ ಕ್ರೂರಿ ದೊರೆ ಕಿಮ್ ಜಾಂಗ್ ಉನ್ ಆನಾರೋಗ್ಯ ಹಿನ್ನಲೆ ಕಿಮ್ ಕ್ಷೇಮವಾಗಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ..ಈ ಟ್ರಂಪ್ ಹೇಳಿಕೆ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಂತಾಗಿದೆ. ಅವರ ಆರೋಗ್ಯದ ಬಗ್ಗೆ ನನಗೆ ತುಂಬಾ ಒಳ್ಳೆಯ ಮಾಹಿತಿ ಇದೆ. ಆದರೆ ಅದರ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವಿಲ್ಲ ಆತನಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುವೆ ಅಷ್ಟೇ, ಎಂದು ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ರು. ಕಿಮ್ ಜಾಂಗ್ […]

ವಾಷಿಂಗ್ಟನ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಸಾವು-ನೋವು, ನಷ್ಟಗಳಿಂದ ಮೊದಲ ಬಾರಿಗೆ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶಕ್ಕೀಡಾಗಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ. ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ ೧೪೦ ಶತಕೋಟಿ ಡಾಲರ್ ಪರಿಹಾರವನ್ನು ಜರ್ಮನಿ ಕೇಳಿದರೆ, ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರವನ್ನು ಅಮೆರಿಕಾ ಕೇಳಿದೆ.

ಮಡಗಾಸ್ಕರ್​ (ಪೂರ್ವ ಆಫ್ರಿಕಾ): ಕೊರೊನಾ ಹಿನ್ನಲೆ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಆಕಸ್ಮತ್ ಮಾಸ್ಕ್ ಧರಿಸದೇ ಹೊರ ಬಂದ್ರೆ ಕಸಗುಡಿಸೋ ಶಿಕ್ಷೆ ನೀಡಲಾಗುವುದು ಎಂದು ಪೂರ್ವ ಆಫ್ರಿಕ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಆದೇಶಿಸಿದ್ದಾರೆ. ರಾಜಧಾನಿ ಅಂಟಾನನರಿವೊದಲ್ಲಿ ಹಾಗೂ ಫಿಯಾನರಾಂಟ್ಸೊವಾ ಮತ್ತು ಟೊಮಾಸಿನಾ ನಗರಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿರು ಮಡಗಾಸ್ಕರ್‌ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿಯೋ ಅಥವಾ ಮಾಸ್ಕ್​ ಧರಿಸದೇ ಹೊರಗೆ ಬಂದವರಿಗೆ  ಕಸದ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಗುಡಿಸುವ ಕೆಲಸಕ್ಕೆ […]

ರಿಯಾಧ್: ಅಪ್ರಾಪ್ತರಾಗಿದ್ದಾಗ ನಡೆಸಿದ ಅಪರಾಧಗಳಿಗಾಗಿ ಯಾವುದೇ ವ್ಯಕ್ತಿಗೆ ಸೌದಿ ಅರೇಬಿಯಾ ಇನ್ನು ಮುಂದೆ ಮರಣದಂಡನೆ ವಿಧಿಸುವುದಿಲ್ಲ ಎಂದು ಸರಕಾರದ ಮಾನವ ಹಕ್ಕುಗಳ ಸಂಸ್ಥೆಯ ದೊರೆ ಸಲ್ಮಾನ್ ಅವರ ರಾಜಾಜ್ಞೆಯನ್ನು ಹೊರಡಿಸಿದೆ. ಈ ರಾಜಾಜ್ಞೆಯಂತೆ ಅಪ್ರಾಪ್ತರಿರುವಾಗ ಅಪರಾಧವೆಸಗಿದವರಿಗೆ ಮರಣದಂಡನೆ ವಿಧಿಸದೆ ಹತ್ತು ವರ್ಷ ಮೀರದ ಸೆರೆವಾಸ ಶಿಕ್ಷೆಯನ್ನು ವಿಧಿಸಲಾಗುವುದು. ಈ ಅವಧಿಯನ್ನು ಅವರು ಬಾಲಾಪರಾಧಿಗಳ ಕೇಂದ್ರಗಳಲ್ಲಿ ಕಳೆಯಬೇಕಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಅವ್ವದ್ ಅಲವ್ವದ್ ಹೇಳಿದ್ದಾರೆ. ಇರಾನ್ ಮತ್ತು […]

Advertisement

Wordpress Social Share Plugin powered by Ultimatelysocial