ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಜೂ.29ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಮುಗಿಬೀಳುತ್ತಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ 7 ಸ್ಥಾನಗಳ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ಪಾಲಿನ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಅಂತಿಮಗೊಳಿಸಲಿದೆ. ನಾಳೆ ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು, ಬಹುತೇಕ ಅಭ್ಯರ್ಥಿಗಳ ಪಟ್ಟಿ, ಅಂತಿಮಗೊಳಿಸುವ ಸಂಭವವಿದೆ ಎಂದು […]

ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುಮಾರು 1,500 ಆಟೋಗಳು ಚಾಲನೆಯಲ್ಲಿ ಇದ್ದು ಹೆಚ್ಚು ಅಪರಾಧ ಪ್ರಕರಣಗಳು, ಕಳವು, ಪ್ರಯಾಣಿಕರು ಲಗೇಜ್ ಕಳೆದುಕೊಳ್ಳೋದು ಸಾಮಾನ್ಯವಾಗಿ ಆಟೋಗಳಲ್ಲೇ ಆಗಿದ್ದು. ಆಟೋರಿಕ್ಷಾದ ನೊಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಬಹುತೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಆದ್ರೆ ಇನ್ನುಂದೆ ಹಾಗೆ ಆಗಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್​ಪೆಕ್ಟರ್ ಸೋಮಶೇಖರ್ ಅವರು ನೂತನ ಪ್ರಯೋಗ ಮಾಡಿದ್ದು, ಪಟ್ಟಣದ ಎಲ್ಲಾ ಆಟೋಗಳಿಗೆ ಯೂನಿಕ್ ನಂಬರ್ ನೀಡಿದ್ದಾರೆ. ಆಟೋಗಳಲ್ಲಿ ಚಾಲಕರು ಮತ್ತು ಆಟೋ […]

ಇಂದು ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಲಾಕ್‍ಡೌನ್ ಮತ್ತೆ ಜಾರಿಗೆ ತರುವುದು ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು. ಸರ್ಕಾರ ಜನರ ಮೇಲಿನ ಕಾಳಜಿ ಬಗ್ಗೆ ಜವಾಬ್ದಾರಿ ಹೊಂದಿದೆ. ಹಾಗೇ ಸಚಿವರು, ಅಧಿಕಾರಿಗಳು ಇದ್ದಾರೆ, ಅವರೆಲ್ಲಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ, ನೋಡುತ್ತೇವೆ. ನಮ್ಮದೇನಿದ್ದರೂ ಅವರು ನೀಡುವ ಪ್ರಸಾದ ಸ್ವೀಕರಿಸುವುದು ಅಷ್ಟೇ ಎಂದು ಕೆಪಿಸಿಸಿ […]

ಬಾಲ ಕಾರ್ಮಿಕ ಪದ್ಧತಿಯಂತಹ ಸಮಾಜ ವಿರೋಧಿ ಆಚರಣೆ ಕುರಿತು ಇರುವ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. 14 ವರ್ಷದೊಳಗಿನ ಯಾವುದೇ ಮಕ್ಕಳನ್ನು, ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ […]

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಅತ್ಯಮೂಲ್ಯ. ಹಿಗಾಗಿ ರಾಜ್ಯ ಸರ್ಕಾರದ ಸಹಕಾರ ಇಲಾಖೆ ವತಿಯಿಂದ ಕೋವಿಡ್ -19 ವಿರುದ್ಧ ಹೋರಾಡಿದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿತ್ತು. ಇದೀಗ ಆಶಾ  ಕಾರ್ಯಕರ್ತೆಯರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡದೆ. ಅದೇನೆಂದರೆ ಆಶಾ ಕಾರ್ಯಕರ್ತೆಯರಿಗೂ ಸಹಕಾರ ಇಲಾಖೆ ವತಿಯಿಂದ ಸಾಲ ಕೊಡಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು, […]

ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಮೆಚ್ಚುಗೆಗಳಿಸುತ್ತವೆ, ಹಾಗೆಯೇ ಕಳೆದ ಕೆಲ ವಾರಗಳಿಂದ ವಾನರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿವೆ. ಇದೀಗ ಚಿಂಪಾಂಜಿಯೊಂದು ಕಳೆದ ವಾರ ಕರ್ನಾಟಕದ ದಾಂಡೇಲಿಯಲ್ಲಿ ಗಾಯಗೊಂಡ ಬಳಿಕ ಅಲ್ಲಿನ ಪಾಟೀಲ್ ಆಸ್ಪತ್ರೆ ಬಳಿ ಹೋಗಿ ನಿಂತಿದ್ದನ್ನು ಕಂಡ ವೈದ್ಯರು ಅದಕ್ಕೆ ಆರೈಕೆ ಮಾಡಿದ್ದಾರೆ, ನಂತರ ಒಂದು ಪುಟ್ಟ ಕೊಳದ ಬ್ರಿಜ್​ ಮೇಲೆ ಕುಳಿತು ಚಿಂಪಾಂಜಿ ಮೀನುಗಳಿಗೆ ಆಹಾರ ನೀಡುವ ವಿಡಿಯೋ ವೈರಲ್​ ಆಗಿದೆ. […]

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸರ್ಕಾರಿ ಅಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರುಗಳು  ಒಂದು ತಿಂಗಳೊಳಗಾಗಿ ಹಿಂದಿರುಗಿಸಬೇಕು, ಇಲ್ಲದಿದ್ದರೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ ಅಥವಾ ದೂರು ಸ್ವೀಕೃತವಾದರೆ ಅಂತಹ ಸರ್ಕಾರಿ ಅಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ಹೂಡುವುದಲ್ಲದೇ ಅದರ ಜೊತೆಗೆ ಸರ್ಕಾರಕ್ಕೆ ಅವರಿಂದ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ರಾಜ್ಯ ಸರ್ಕಾರದ […]

ದೇಶಾದ್ಯಾಂತ ಕೊರೋನಾ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಒಂದೊಂದೆ ಉದ್ಯಮಗಳು ಕಾರ್ಯ ವಹಿಸುತ್ತಿವೆ ಹಾಗೂ ಜನಜೀವನ ಕೂಡ ಮಾಮೂಲಿ ಸ್ಥಿಥಿಯಲ್ಲಿ ನಡೆಯುತ್ತಿದೆ, ಅಕ್ಟೋಬರ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿತ್ತು, ಆದರೆ ಐಸಿಸಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ ಪ್ರತಿ ಬಾರಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಲ್ಲೂ ಚರ್ಚೆಗಳಾಗುತ್ತಿವೆ ಹೊರತು ಐಸಿಸಿ ಅಧಿಕಾರಿಗಳು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಿರುವಾಗ ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ […]

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಹೆಂಧಾಮ  ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ ಎಂದು ವರಿದಯಾಗಿದೆ. ಗುಂಡಿನ ಕಾಳಗದಲ್ಲಿ ಭಾರತೀಯ ಸೇನಾ ಪಡೆ ಇಬ್ಬರು ಭಯೋತ್ಪಾದಕರನ್ನು  ಎನ್‌ಕೌಂಟರ್‌ ಮೂಲಕ ಹತ್ಯೆಗೈದಿದ್ದು, ಇನ್ನು ಕಾರ್ಯಚರಣೆ ಪ್ರಗತಿಯಲ್ಲಿದೆ. ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್  ಜಂಟಿ ತಂಡ ಇಂದು ಬೆಳಿಗ್ಗೆ ಸುಗೂ ಹೆಂಧಮಾದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದು ಕಾರ್ಯಚರಣೆಗಿಳಿದಿದ್ದವು. ಈ ವೇಳೆ […]

ಜಿನೀವಾ: ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವಂತೆಯೇ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಎಚ್ಚರಿಕೆ ನೀಡಿದೆ. ಅತಿ ಹೆಚ್ಚು ಸೋಂಕು ತಗುಲಿದ ದೇಶಗಳ ಪೈಕಿ ಭಾರತ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ 24 ತಾಸಿನೊಳಗೆ 10,000ದಷ್ಟು ಹೊಸ ಪ್ರಕರಣಗಳು ದಾಖಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡಿಲ್ಲ. ಆದರೆ ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್ ನಿಮಯಗಳನ್ನು ಸಡಿಲಗೊಳಿಸಿರುವುದರಿಂದ ಅಪಾಯ […]

Advertisement

Wordpress Social Share Plugin powered by Ultimatelysocial