ಮೇಕೆದಾಟು ಪಾದಯಾತ್ರೆ ವೇಳೆ ಕಾಂಗ್ರೆಸ್ ನಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿರುವುದು ಬಂದಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದವರು ಎಷ್ಟೇ ದೊಡ್ಡ ನಾಯಕರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ. ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೋವಿಡ್ ನಿಯಮ ಉಲ್ಲಂಘಿಸುವ ಎಲ್ಲರ ವಿರುದ್ಧ ಕ್ರಮ ಖಚಿತ. ‌ಎಷ್ಟೇ ದೊಡ್ಡ ನಾಯಕ ಇರಲಿ ಅಥವಾ ಜನ ಸಾಮಾನ್ಯ ಇರಲಿ. ಕಾನೂನು ರೀತಿ ಕ್ರಮ ಖಚಿತ. […]

ಸಂಕ್ರಾಂತಿ  ,ಶಬರಿಮಲೆಯ ಯಾತ್ರೆ ಪ್ರಯುಕ್ತ ಬೆಂಗಳೂರಿನಿಂದ ಬೆಳಗಾವಿಗೆ ಒಂದು  ವಿಶೇಷ ರೈಲು  ಬಿಡುಗಡೆ ಜನಸಂಖ್ಯೆ ಹೆಚ್ಚಾಗಿ ಇರುವುದರಿಂದ ಯಶವಂತಪುರ- ಬೆಳಗಾವಿ-  ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಾಗುವುದು ಯಶವಂತಪುರ ನಿಲ್ದಾಣದಿಂದ ಜ.13ರಂದು ರಾತ್ರಿ 9.30 ಕ್ಕೆ ರೈಲು ಸಂಖ್ಯೆ 06597 ಹೊರಡುವ ರೈಲು ಮರುದಿನ 8.25ಕ್ಕೆ ಬೆಳಗಾವಿ ನಿಲ್ದಾಣ ಸೇರುತ್ತದೆ. ಪುನ: ಜ.16ರಂದು ರಾತ್ರಿ 9.20ಕ್ಕೆ ರೈಲು ಸಂಖ್ಯೆ 06598 ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ. […]

ಸುಸ್ತು, ಜ್ವರದಿಂದ ಬಳಲಿದ್ದ  ವಿಧಾನಸಭೆಯ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಬೆಂಗಳೂರಿಗೆ ವಾಪಾಸಾಗಿ ಕುಟುಂಬದ ವೈದ್ಯರಿಂದ ಚಿಕಿತ್ಸೆ ಪಡೆದು, ಅವರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದಾರೆ.. ಮಂಗಳವಾರದಿಂದ ಮತ್ತೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

 ಸಚಿವ ಎಸ್.ಟಿ.ಸೋಮಶೇರ್ಖ ಅವರ ಪುತ್ರ ನಿಶಾಂತ್ ಗೆ ಬ್ಲ್ಯಾಕ್ ಮೇಲ್ ಮಾಡಿದ ಸಂಬಂಧ ಶಾಸಕರ ಪುತ್ರಿಯ ಪಾತ್ರವಿದೆ ಎನ್ನಲಾಗುತ್ತಿತ್ತು. ಆದ್ರೇ.. ನನ್ನ ಮಗಳ ಯಾವುದೇ ಪಾತ್ರವಿಲ್ಲ. ಆಕೆ ವಿದೇಶದಲ್ಲಿ ಓದುತ್ತಾ ಇದ್ದಾಳೆ. ಸಿಸಿಬಿಗೆ ಎಲ್ಲಾ ಮಾಹಿತಿ ತಿಳಿಸಿರೋದಾಗಿ ಇಂಡಿ ಶಾಸಕರ ಯಶವಂತರಾಯಗೌಡ ಪಾಟೀಲ್ ಸ್ಪಷ್ಟ  ಹೇಳಿಕೆ ನೀಡಿದ್ದಾರೆ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆ ಬಳಸುತ್ತಿದ್ದಂತ ಸಿಮ್ ಅನ್ನು ಅವಳ ಸ್ನೇಹಿತನ ಕ್ಲೈಂಟ್ ಗೆ […]

ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣದ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ  ಆರೋಪಿ. ಈತ ತನ್ನ ಪತ್ನಿಯಾದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದಾನೆ ಕೊಣನೂರು ಗ್ರಾಮದ ಆರ್. ನಾರಪ್ಪ ಬಂಧಿತ. ಈತ ತನ್ನ ಪತ್ನಿ ಸುಮಾ  ಅವರನ್ನು ಕೊಲೆ ಮಾಡಿದ್ದ. ಶವ ಪತ್ತೆಯಾದ […]

ಅಗತ್ಯ ಬಿದ್ದರೆ ಕೋವಿಡ್-19 ಶಿಷ್ಠಾಚಾರ ಪಾಲಿಸುವುದರೊಂದಿಗೆ  ಸ್ವಯಂ ಸೇವಕರು ಮತ್ತು ಅರಣ್ಯ ವಿದ್ಯಾರ್ಥಿಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಬಹಳಷ್ಟು ಚರ್ಚೆಯ ನಂತರ ಸ್ವಯಂ ಸೇವಕರನ್ನು ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಆದರೆ, ಗಂಭೀರ ಕೆಲಸದಲ್ಲಿ ಉತ್ಸುಕರಾಗಿರುವವರು ತೊಡಗಿಸಿಕೊಂಡಿದ್ದಾರೆಯೇ ಹೊರತು ಸಾಮಾಜಿಕ ಮಾಧ್ಯಮಕ್ಕಾಗಿ ಛಾಯಾಚಿತ್ರಗಳನ್ನು ತೆಗೆಯುವವರಲ್ಲ ಎಂಬುದನ್ನು  ಖಚಿತಪಡಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ   . ಮಾಂಸಾಹಾರಿ ಪ್ರಾಣಿಗಳನ್ನು ಹೊರತುಪಡಿಸಿ. ಆನೆ, ಕರಡಿ, ಕಾಡುಹಂದಿ, ಸಾಂಬಾರ್ […]

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್‌ ಗಳು​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಮಾತ್ತು ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ […]

ಕೇಂದ್ರ ಸರ್ಕಾರವು ʻಪ್ರಧಾನಮಂತ್ರಿ ಕಿಸಾನ್ ಯೋಜನೆʼ ಯಲ್ಲಿ  ರೈತರಿಗೆ 10,000 ರೂ.ನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಈ ವರ್ಷದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು 10ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಿದರು. ಹೊಸ ವರ್ಷದ ಉಡುಗೊರೆಯಾಗಿ   ʻಪ್ರಧಾನಮಂತ್ರಿ ಕಿಸಾನ್ ಯೋಜನೆʼ ರೈತರ ಖಾತೆಗೆ 2000 ರೂ. ಹಾಕಿದ್ದಾರೆ. ಆದರೆ ಇನ್ನೂ ಕೆಲ ರೈತರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು […]

Advertisement

Wordpress Social Share Plugin powered by Ultimatelysocial