ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೊರೈಸಿದೆ.ಈ ಅವಧಿಯಲ್ಲಿ ಯಡಿಯೂರಪ್ಪ ನವರ ನಾಯಕತ್ವದಲ್ಲಿ ಉತ್ತಮ ಆಡಳಿತ ಮತ್ತು ಜನರ ಕೈ ಹಿಡಿಯುವ ಕೆಲಸ ಮಾಡಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅನಾವೃಷ್ಠಿ , ಅತಿವೃಷ್ಠಿಯೂ ಆಗಿದೆ.ಉಪ ಚುನಾವಣೆ ನಡೆಯಿತು. ಈಗ ಕೋವಿಡ್ ಸವಾಲು ಎದುರಿಸುತ್ತಿದ್ದೇವೆ.ಇಂತಹ ಸಂದರ್ಭದಲ್ಲೂ ಹಲವು ಸುಧಾರಣೆ , ಉತ್ತಮ ಕಾರ್ಯಕ್ರಮ ನೀಡಿದ್ದೇವೆ ಎಂದು ಹೇಳಿದ್ದಾರೆ.

ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯವರು ಟೊಮ್ಯಾಟೋ ತಾಜ್ಯವನ್ನು ರಾತ್ರಿ ವೇಳೆ ಜನರ ಕಣ್ಣುತಪ್ಪಿಸಿ ಪ್ರಮುಖ ರಸ್ತೆಗಳ  ಅಕ್ಕ-ಪಕ್ಕದಲ್ಲಿ  ಸುರಿದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ನಗರದಲ್ಲಿ ಸಾಕ್ರಾಮಿಕ ರೋಗಗಳು ಮಿತಿ ಮಿರುತ್ತಿದ್ದು, ಅಧಿಕಾರಿಗಳು ತಮ್ಮ ಕುರ್ಚಿಗಳಿಗಷ್ಟೇ ಸೀಮಿತವಾಗಿದ್ದಾರೆ ಎಂದು  ಯುವ ಮುಖಂಡ ಚಂದ್ರಮೌಳಿ ಅವರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ 1000 ಸಂಖ್ಯೆ ಹಂಚಿಗೆ ಬಂದಿದ್ದು, ತಮಗೆ ತಿಳಿಯೇ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅಂತ. ಇಲ್ಲಿ ನಗರಸಭೆಯಿಂದ ದಂಡ ವಿಡಿಸಲಾಗುವುದು ಅಂತ […]

ಬಿಮ್ಸ್ ಆವರಣದಲ್ಲಿದ್ದ ಆ್ಯಂಬುಲೆನ್ಸ್ ಸುಟ್ಟು, ಜಿಲ್ಲಾಸ್ಪತ್ರೆಗೆ ಕಲ್ಲು ಎಸೆದ ದುಷ್ಕರ್ಮಿಗಳು ದೇಶದ್ರೋಹಿಗಳು ಎಂದು ಸಚಿವ ಸುರೇಶ ಅಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಮ್ಸ್ ಎದುರು ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿರುವ ಕೃತ್ಯ ಪೂರ್ವನಿಯೋಜಿತ. ರೋಗಿ ಮೃತಪಟ್ಟ ಅರ್ಧಗಂಟೆಯಲ್ಲಿ ಅಷ್ಟೊಂದು ಜನ ಸೇರಿರುವುದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತದೆ. ಇದರ ಹಿಂದೆ ಯಾವ ಶಕ್ತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು. ಪೊಲೀಸರ, ಇಂಟೆಲಿಜೆನ್ಸ್ ಈ ಕೆಲಸ […]

ರಾಮನಗರ ಜಿಲ್ಲೆಯ ರೇಷ್ಮೆ ರೀಲರ್ ಗಳ ಸಮಸ್ಯೆಯನ್ನು ಆದಷ್ಟು ಶೀಘ್ರ ಬಗೆಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಜಿಲ್ಲೆಯ ವ್ಯಾಪ್ತಿಯ ರೇಷ್ಮೆ ರೀಲರ್‌ಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ವೀಡಿಯೊ ಸಮಾಲೋಚನೆ ನಡೆಸಿದರು. ರೀಲರ್‌ಗಳು ಹಲವರು ಸಮಸ್ಯೆಗಳನ್ನು ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡರು. ಸರ್ಕಾರ ತಮ್ಮ ಕಡೆ ನೋಡುತ್ತಿಲ್ಲ ಎಂದು ಅಳಲು ತೋಡಿಗೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರೀಲರ್‌ಗಳ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ […]

ರಾಜ್ಯ ಸರ್ಕಾರ ಜನ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು, ಗಣಿ ಹಗರಣಕ್ಕಿಂತ ದೊಡ್ಡ ಹಗರಣಗಳನ್ನು ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಮಾಡಿದೆ. ಬಳ್ಳಾರಿ ಗಣಿ ಹಗರಣ ವಿರೋಧಿಸಿ ಮಾಡಿದ್ದ ಹೋರಾಟದ ಮಾದರಿಯಲ್ಲಿಯೇ ರಾಜ್ಯ ಸರ್ಕಾರದ ವಿರುದ್ಧ ಹಳ್ಳಿ-ಹಳ್ಳಿಗಳಲ್ಲಿ ಚಳುವಳಿ ಮಾಡುತ್ತೇವೆ ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ ಭೂ ಸುಧಾರಣಾ ಕಾನೂನಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುರಿAದ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ ಎಂದು. ಸುಗ್ರೀವಾಜ್ಞೆ […]

ಕೊರೊನಾ ಹಿನ್ನೆಲೆ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ೬೫ ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವ ಕೈಬಿಡಲು ಚುನಾವಣಾ ಆಯೋಗ ಗುರುವಾರ ನಿರ್ಧರಿಸಿದೆ.ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ೬೫ ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವಪ್ರಸ್ತಾವ ಕೈಬಿಡಲು ಚುನಾವಣಾ ಆಯೋಗ ಗುರುವಾರ ನಿರ್ಧರಿಸಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಈ ನಿಯಮ ಜಾರಿಗೆ ತಂದಿದ್ದೆ ಆದಲ್ಲಿ ಸಿಬ್ಬಂದಿ ಕೊರತೆಯಿಂದ ಅನೇಕ ಸವಾಲುಗಳು […]

ಕೊರೊನಾ ಮಾಹಾಮಾರಿ ವೈರಸ್ ಕಾಟದಿಂದ ವಿದೇಶಗಳಲ್ಲಿ ಸಿಲುಕಿಕೂಂಡಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇ ಮಿಷನ್ ಕೈಕೂಂಡಿತ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಬರೋಬ್ಬರಿ ೬.೮೭ಲಕ್ಷ ಮಂದಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನಾಲ್ಕು ಹಂತಗಳಲ್ಲಿ ವಿದೇಶದಲ್ಲಿ ಸಿಲುಕಿಕೂಂಡಿದ್ದವರನ್ನ ವಾಪಸ್ ಕರೆದುಕೂಂಡು ಬರಲಾಗುತ್ತಿದೆ. ಮೊದಲ ಹಂತz ಮೇ ೭ ರಿಂದ ೧೫ರವರೆಗೆ ನಡೆದಿತ್ತು. ಎರಡನೇ ಬಾರಿ ಮೇ ೧೭ ರಿಂದ ೨೨ರವರೆಗೆ,ಹಾಗೂ ಜೂನ್ ೧೧ರಿಂದ […]

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವದರಿಂದ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಎಸ್ಎಸ್ಎಲ್ ಸಿ ಮೌಲ್ಯಮಾಪನಕ್ಕೆ ತೆರಳಬೇಕಿದ್ದ ಶಿಕ್ಷಕರು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಮೌಲ್ಯಮಾಪನ ನಡೆದಿದೆ. ಆದರೆ ಇಂದು ಧಾರವಾಡಕ್ಕೆ ತೆರಳುವ ಶಿಕ್ಷಕರಿಗೆ ಬಸ್ ಇಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಮಾಡಬೇಕಿತ್ತು. ಹುಬ್ಬಳ್ಳಿಯ ೨೦೦ಕ್ಕೂ ಹೆಚ್ಚು ಶಿಕ್ಷಕರು ಧಾರವಾಡದ ಸೆಂರ‍್ಗೆ ತಲುಪಿಸುವ ವ್ಯವಸ್ಥೆ ಮಾಡಬೇಕಿತ್ತು. ಆದರೆ ಬಸ್ ಇಲ್ಲದೆ ಹುಬ್ಬಳ್ಳಿಯ ಹಳೆ […]

ದಲಿತರ ಮೇಲೆ ದೌರ್ಜನ್ಯ ಅಥವಾ ಅಸ್ಪೃಶ್ಯತೆ ಆಚರಣೆಯಂತಹ ದೂರುಗಳು ಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪಿಎಸ್‌ಐ ಕಾಂತರಾಜು ತಿಳಿಸಿದರು. ಮಧುಗಿರಿಯಲ್ಲಿ ಪೋಲಿಸ್ ಠಾಣಾ ಆವರಣದಲ್ಲಿ ಕರೆಯಲಾಗಿದ್ದ ಪ.ಜಾತಿ/ ಪ.ಪಂಗಡದ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲೂ ದಲಿತರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ದಲಿತ ಮುಖಂಡರು ಸಹ ನಮ್ಮೊಡನೆ ಸಹಕರಿಸಬೇಕು ಸಮಸ್ಯೆಗಳ […]

ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಉಪಟಳ ಮತ್ತೆ ಹೆಚ್ಚಾಗಿದ್ದು ಭದ್ರತಾ ಪಡೆಗಳು ಎನ್‌ಕೌಂಟರ್ ಕಾರ್ಯಚರಣೆಯನ್ನ ಶುರುಮಾಡಿವೆ ಎಂದು ಪೋಲಿಸರು ಮಾಹಿತಿಯನ್ನ ನೀಡಿದ್ದಾರೆ. ಬೆಳಗ್ಗೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಮಾಡಿದ್ದರು , ನಂತರ ಪೋಲಿಸರು ಹಾಗು ಭದ್ರತಾ ಪಡೆಯ ಯೋಧರು ಕಾರ್ಯಚರಣೆಯನ್ನ ಆರಂಭಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ. ಬೆಳಗ್ಗೆ ಸುಮಾರು ೬.೪೦ ರಿಂದ ಕಾರ್ಯಚರಣೆ ಶುರುವಾಗಿದ್ದು , ಇತ್ತೀಚಿನ ಕಳೆದ ೧೦ ದಿನಗಳಲ್ಲಿ ಸುಮಾರು ೨೦ಕ್ಕೂ ಹೆಚ್ಚಿನ […]

Advertisement

Wordpress Social Share Plugin powered by Ultimatelysocial