ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಮನೆಯಿಂದ ಹೊರ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದೆ. ಇನ್ನು ಮುಂದೆ ಮಾಸ್ಕ್ ಇಲ್ಲದವರಿಗೆ ಪೆಟ್ರೋಲ್ ಹಾಕದಿರಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ನೋ ಮಾಸ್ಕ್ ನೋ ಫ್ಯೂಯಲ್ ಅಭಿಯಾನ ಕೈಗೊಳ್ಳಲಾಗಿದೆ.

ಫ್ರಾನ್ಸ್ ಕರೊನಾ ಸಂಕಷ್ಟಕ್ಕೆ ತತ್ತರಿಸಿದೆ. ಈವರೆಗೆ ಅಲ್ಲಿ ೧,೫೪,೦೯೮ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೧೯,೭೭೮ ಜನರು ಮೃತಪಟ್ಟಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕೆ ಸಿಗದ ಕಾರಣ ಅಲ್ಲಿ ದೇಶಾದ್ಯಂತ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಇದೀಗ ಆಘಾತಕಾರಿ ಸುದ್ದಿಯೊಂದು ಪ್ಯಾರಿಸ್ ನಗರದಿಂದ ವರದಿಯಾಗಿದೆ. ಅಲ್ಲಿನ ನೀರಿನಲ್ಲೂ ಕರೊನಾ ವೈರಸ್ ಪತ್ತೆಯಾಗಿದೆ. ನೀರಿನಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ವೈರಸ್ ಕಣಗಳಿರುವುದು ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಪ್ರಮಾಣ ತೀರಾ ಕಡಿಮೆಯಿದ್ದು, ನಗರದಲ್ಲಿ ಸ್ವಚ್ಛತಾ […]

ದೇಶದಲ್ಲಿ ಮಾರಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಲಾಕ್ ಡೌನ್‌ನ್ನು ಮೇ.೩ರವರೆಗೆ ವಿಸ್ತರಿಸಲಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಲಾಕ್ ಡೌನ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಯಾಕೆ ಆಗುತ್ತಿಲ್ಲ. ವಾಹನಗಳ ಸಂಚಾರ ಹೆಚ್ಚಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದೆ. ಕಳೆದ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಆರೋಗ್ಯ ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಾಗೂ ಪೊಲೀಸರ ಮೇಲೆ ನಡೆದ ದಬ್ಬಾಳಿಕೆಯ ಬೆನ್ನಲ್ಲೇ ಕೇಂದ್ರ ಸರ್ಕಾರ […]

ಕೋವಿಡ್ ೧೯ ಲಾಕ್‌ಡೌನ್ ಮಧ್ಯೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಇಂದಿನಿಂದ ಪುನರಾರಂಭಗೊಂಡಿದೆ. ಸ್ಥಗಿತಗೊಂಡ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಭಾರತವು ಇಂದಿನಿಂದ ಕೊರೋನಾವೈರಸ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸುತ್ತಿರುವ ಭಾಗವಾಗಿ ಈ ಉಪಕ್ರಮ ಜಾರಿಯಾಗಿದೆ. ಮಾರ್ಚ್ ೨೪ ರಂದು ೨೧ ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿತ್ತು. ಮುಂಬೈನ ವಾಶಿ, ನಾಗ್ಪುರದ ಬೋರ್ಖೆಡಿ, […]

ಕೋವಿಡ್-೧೯ ಸವಾಲಿನ ಮಧ್ಯೆ ಭಾರತದ ಇಂಧನ ಸುರಕ್ಷತೆಯನ್ನು ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದ್ದು, ಮೇ ಮೊದಲ ವಾರದಲ್ಲಿ ಮಂಗಳೂರು ಮತ್ತು ಪಾದೂರು ಕಚ್ಚಾತೈಲ ಸಂಗ್ರಹಾರಗಳನ್ನು ಭರ್ತಿ ಮಾಡುವಂತೆ ಕೇಂದ್ರ ಪೇಟ್ರೋಲಿಯಂ ಸಚಿವಾಲಯ ನಿರ್ಧರಿಸಿದೆ.

ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜೂನ್ ೩೦ರವರೆಗೆ ಎಟಿಎಂ ಸೇವಾಶುಲ್ಕ ಮನ್ನಾ ಮಾಡಲಾಗುವುದು. ಮೂರು ತಿಂಗಳವರೆಗೆ ಯಾವುದೇ ಬ್ಯಾಂಕ್ ಎಟಿಎಂನಿAದ ಹಣ ಪಡೆದುಕೊಂಡರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದರು. ಅಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಕೆಲವು ಬ್ಯಾಂಕುಗಳು ಜೂನ್ ೩೦ರವರೆಗೆ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸದಿರಲು ನಿರ್ಧರಿಸಿವೆ. ಈಗಾಗಲೇ ಎಸ್.ಬಿ.ಐ. ಮೆಟ್ರೋ ನಗರಗಳಲ್ಲಿ ಮೂರು ಉಚಿತ […]

ರಾಯಚೂರು: ಕೊರೋನಾ ಮಹಮಾರಿಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಳ್ಳವರು ನಾವಾಯ್ತು ನಮ್ಮ ಮನೆಯಾಯ್ತು ಎಂದು ಕುಳಿತಿರುವಾಗ ಇಲ್ಲೊಬ್ಬ ಜನನಾಯಕಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಗಳಿಗೆ ತೆರಳಿ ಹಸಿದ ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ತರಕಾರಿಗಳನ್ನು ಸಹ ನೀಡುವ ಮೂಲಕ ನೊಂದವರ ಬದುಕಿಗೆ ಆಶಾಕಿರಣವಾಗುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ ಅವರು ದಿವಂಗತ ಮಾಜಿ ಸಂಸದ ಎ.ವೆಂಕಟೇಶ ನಾಯಕರ […]

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ೫೯ ಮಂದಿಯನ್ನು ಬಂಧಿಸಲಾಗಿದ್ದು, ೫ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫೯ ಮಂದಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ. ಇನ್ನೂ ಕರ‍್ಯಾಚರಣೆ ಮುಂದುವರೆದಿದ್ದು, ಎಲ್ಲರ ಮೇಲೆ ಕಠಿಣ ಕ್ರಮ […]

ಬೆಂಗಳೂರು: : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಶೀಘ್ರವಾಗಿ ತಪಾಸಣೆ ನಡೆಸಲು ಈ ತಿಂಗಳ ೩೦ರ ಒಳಗಾಗಿ ಪ್ರತಿ ಜಿಲ್ಲೆಗೊಂದು ಕೋವಿಡ್ ಪ್ರಯೋಗಾಲಯ ಹಾಗೂ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ ಒದಗಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಿಯೋಗದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು ರ‍್ಕಾರವು ಕಟ್ಟಡ ಕರ‍್ಮಿಕರಿಗೆ ಸಹಾಯಧನ ಘೋಷಣೆ ಮಾಡಿದೆ. ಆದರೆ ಇತರೆ ಕರ‍್ಮಿಕರ ಬದುಕು ಸಂಕಷ್ಟದಲ್ಲಿದ್ದು ಸಂಘಟಿತ […]

ನಿನ್ನೆ ಜೀವನ್ ಭೀಮಾನಗರದಲ್ಲಿ ಪೊಲೀಸರ ಜೊತೆ ಕುಡಿದು ಯುವತಿಯರು ರಂಪಾಟ ಮಾಡಿದ್ದು ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.. ಬೆಳಗ್ಗೆ ಪಾಸ್ ಇಲ್ಲದೇ ಬರುತ್ತಿದ್ದ ಮಹಿಳೆಯನ್ನು  ಪೊಲೀಸರು ಹಿಡಿದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಕೆಂಡಮಂಡಲಳಾದ ಮಹಿಳೆ ದೊಡ್ಡ ಅವಾಂತರ ಸೃಷ್ಠಿಸಿದ್ದಾಳೆ . ಪೊಲೀಸರ ಮೇಲೆ ಗಲಾಟೆ ತೆಗೆದ ಮಹಿಳೆ ಕೂಗ್ಗಾಡಿ ರಂಪಾಟ ಮಾಡಿರೋ ಘಟನೆ ಕೆ.ಆರ್. ಸರ್ಕಲ್ ನಡೆದಿದೆ…  ಪಾಸ್ ಇಲ್ಲದೇ ಆಟೋ ಕರೆದುಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ […]

Advertisement

Wordpress Social Share Plugin powered by Ultimatelysocial