ಕೇಂದ್ರದಿಂದ ಕರ್ನಾಟಕಕ್ಕೆ “ಹೆದ್ದಾರಿ” ನಿರ್ಮಾಣಕ್ಕೆ ಅನುಮೋದನೆ

ವದೆಹಲಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾಗಲಿರುವ ಕರ್ನಾಟಕದ ವಿವಿಧ ಭಾಗಗಳಿಗೆ ಕೇಂದ್ರ ಸಾರಿಗೆ ಸಚಿವಾಲಯ ಹಲವಾರು ಹೆದ್ದಾರಿಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದ ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ.

ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೇ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕನಮಾಡಿ-ಬಿಜ್ಜರಗಿ-ತಿಕೋಟಾಸಂಪರ್ಕ ಮಾಡುವ ಎನ್‌ ಎಚ್‌ 166ಇ ಹೆದ್ದಾರಿ ವಿಸ್ತರಣೆಗಾಗಿ 196.05 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ.

ಹಾಗೆಯೇ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಎನ್‌ಎಚ್‌ 548 ಬಿ ನಲ್ಲಿರುವ ಮುರ್ರಮ್‌ನಿಂದ ವಿಜಯಪುರದ ಐಬಿ ವೃತ್ತದವರೆಗಿನ ರಸ್ತೆ ವಿಸ್ತರಣೆಗಾಗಿ 957.09 ಕೋಟಿ ರೂ. ಅನುದಾನ ನೀಡಲಾಗುತ್ತದೆ.

ಕೊಪ್ಪಳ-ಗದಗ ಜಿಲ್ಲೆಯ ಭಾನಾಪುರ ಗದ್ದನಕೇರಿ ವಲಯದ ಎನ್‌ ಎಚ್‌ 367ರಲ್ಲಿ ಬರುವ ಕುಕುನೂರ್‌, ಯೆಲಬುರ್ಗಾ, ಗಜೇಂದ್ರಗಡದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕಾಗಿ 333.96 ಕೋಟಿ ರೂ.

ಇದೇ ವಲ ಯದ ಸರ್ಜಾಪುರದಿಂದ ಪಟ್ಟದಕಲ್ಲಿಗೆ ತೆರಳುವ ರಸ್ತೆ ವಿಸ್ತರಣೆಗಾಗಿ 445.62 ಕೋಟಿ ರೂ. ನೀಡಲು ಹೆದ್ದಾರಿ ಸಚಿವಾಲಯ ಒಪ್ಪಿಗೆ ನೀಡಿದೆ. ಇನ್ನು ಮೈಸೂರಿನಿಂದ ಕುಶಾಲ ನಗರದ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕಾಗಿ 1,649.25 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಕುಶಾಲನಗರ ಬಳಿ ಇರುವ ಗುಡ್ಡೆ ಹೊಸೂರಿನಿಂದ ಮೈಸೂರು ಬಳಿ ಇರುವ ಇಲವಾಲ-ಕೆ.ಆರ್‌. ನಗರ ಜಂಕ್ಷನ್‌ಗೆ ಸಂಪರ್ಕಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

108 ಕೆಜಿ ಕಡಿಮೆಯಾಗಿದ್ದ ಅನಂತ್‌ ಅಂಬಾನಿ ದಪ್ಪಗಾಗಲು ಕಾರಣವೇನು?.

Thu Feb 9 , 2023
ಮಗ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿರುವುದನ್ನು ಗಮನಿಸಿದ ನೀತಾ ತುಂಬಾ ನೋವು ಪಟ್ಟು ‘ ನನ್ನ ಮಗನನ್ನು ಟ್ರೋಲ್ ಮಾಡ್ಬೇಡಿ, ನನ್ನ ಮಗನ ಮೈ ತೂಕ ಹೆಚ್ಚಾಗಲು ಅವನ ಆರೋಗ್ಯ ಸ್ಥಿತಿ ಕಾರಣ’ ಎಂಬುವುದಾಗಿ ತಿಳಿಸಿದ್ದರು. ನೀತಾ ಅಂಬಾನಿ ತಮ್ಮ ಮಗ ಅನಂತ್‌ ಅಂಬಾನಿಗೆ ಅಸ್ತಮಾ ಸಮಸ್ಯೆಗೆ ಸ್ಟಿರಾಯ್ಡ್ ನೀಡಲಾಗುತ್ತಿತ್ತು, ಹೀಗಾಗಿ ಮೈ ತೂಕ ಹೆಚ್ಚಾಗಿದೆ ಎಂದು ತಿಳಿಸಿದ್ದರು. ಮೈ ತೂಕ ಕಳೆದುಕೊಂಡ ಶೇ. 94ರಷ್ಟು ಜನರ ಮೈ ತೂಕ ಮತ್ತೆ […]

Advertisement

Wordpress Social Share Plugin powered by Ultimatelysocial