ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ.

ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ.

ಫಿರೋಜಾಬಾದ್‌: ಮದುವೆಯ ಹೆಸರಿನಲ್ಲಿ ನಡೆಯುವ ಮೋಸಗಳಿಗಂತೂ ಲೆಕ್ಕವೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳೂ ಹಿಂದೆ ಬಿದ್ದಿಲ್ಲ. ಭಾವಿ ಪತಿ ಹಾಗೂ ಆತನ ಮನೆಯವರನ್ನು ವಂಚಿಸಿ ಮದುಮಗಳು ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.

ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಭಾರಿ ಆಘಾತ ಉಂಟಾಗಿರುವುದು ಒಂದೆಡೆಯಾದರೆ, ಮುಂದೆ ಈ ಘಟನೆ ಟ್ವಿಸ್ಟ್‌ ಕೂಡ ಪಡೆದುಕೊಂಡು ಮದುಮಗಳ ತಂಗಿಯ ಜತೆ ಮದುವೆಯಾಗಿರುವ ಘಟನೆಯೂ ನಡೆದೇ ಹೋಗಿದೆ.

ಆಗಿದ್ದೇನೆಂದರೆ, ಮದುಮಗಳು ಅಂದರೆ ಅಕ್ಕ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಆಕೆ ತನ್ನ ಪ್ರೀತಿಯ ವಿಷಯವನ್ನು ಮನೆಯವರಿಂದ ಗುಟ್ಟಾಗಿ ಇಟ್ಟಿದ್ದಳು. ಇದಕ್ಕೆ ಕಾರಣ, ಪ್ರಿಯಕರನ್ನು ಮದುವೆಯಾಗಲು ಅವಳಿಗೆ ಒಂದಿಷ್ಟು ದುಡ್ಡು ಬೇಕಿತ್ತು. ಆತನಿಗೆ ಸರಿಯಾದ ಉದ್ಯೋಗ ಇಲ್ಲದ ಕಾರಣ, ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಅವಳಿಗೆ ತಿಳಿದಿತ್ತು. ಇದನ್ನು ಅರಿಯದ ಆಕೆಯ ಪಾಲಕರು ಬೇರೆ ವರನ ಜತೆ ಮದುವೆಯನ್ನು ಗೊತ್ತು ಮಾಡಿದ್ದರು.

ಮದುವೆಗೆ ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಮದುವೆ ಖರ್ಚಿಗೆಂದು ಹಣ, ಮದುಮಕ್ಕಳಿಗೆ ಹಾಕುವ ಚಿನ್ನಾಭರಣ ಎಲ್ಲವೂ ಮನೆಯನ್ನು ಸೇರಿತ್ತು. ಮದುವೆಯ ಹಿಂದಿನ ದಿನದ ಶಾಸ್ತ್ರ ನಡೆಯುತ್ತಿದ್ದಾಗ ಈ ಮದುಮಗಳು ವರನಿಗೆ ಹಾಗೂ ಅಲ್ಲಿದ್ದವರಿಗೆ ಚಹಾ ಮಾಡಿಕೊಟ್ಟಿದ್ದಾಳೆ. ವೈಯಾರದಿಂದ ಆಕೆ ಕೊಟ್ಟ ಚಹವನ್ನು ಎಲ್ಲರೂ ಖುಷಿಯಿಂದ ಕುಡಿದಿದ್ದಾರೆ. ಆದರೆ ಈ ವಧು ಅದರಲ್ಲಿ ನಿದ್ದೆ ಮಾತ್ರೆ ಹಾಕಿಕೊಟ್ಟಿದ್ದು ಯಾರಿಗೂ ತಿಳಿಯಲೇ ಇಲ್ಲ! ಇದನ್ನು ಅರಿಯದ ಎಲ್ಲರೂ ಚಹಾ ಕುಡಿದು ನಿದ್ದೆಗೆ ಜಾರಿದ್ದಾರೆ.

ಮೊದಲೇ ಮಾಡಿದ ಪ್ಲ್ಯಾನ್‌ನಂತೆ ವಧು ಅಲ್ಲಿರುವ ಎಲ್ಲಾ ಚಿನ್ನಾಭರಣ, ಹಣ ದೋಚಿಕೊಂಡು ಪ್ರಿಕಕರನ ಜತೆ ಪರಾರಿಯಾಗಿದ್ದಾಳೆ. ಎಲ್ಲರಿಗೂ ಎಚ್ಚರವಾದಾಗ ಮೋಸದ ಅರಿವಾಗಿದೆ. ಇದರಿಂದ ವಧುವಿನ ಪಾಲಕರಿಗೆ ಭಾರಿ ಅವಮಾನವೂ ಆಗಿದೆ. ಆದರೆ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಗಂಡಿನ ಮನೆಯವರ ಬಳಿ ಕ್ಷಮೆಯಾಚಿಸಿದ್ದೂ ಅಲ್ಲದೇ ತಮ್ಮ ಕಿರಿಯ ಮಗಳನ್ನು ಮದುವೆಯಾಗುವಂತೆ ವರ ಹಾಗೂ ಆತನ ಮನೆಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಅವರೂ ಒಪ್ಪಿದ ಹಿನ್ನೆಲೆಯಲ್ಲಿ ಅಕ್ಕನ ಬದಲು ವರ ತಂಗಿಗೆ ತಾಳಿ ಕಟ್ಟಿದ್ದು, ಮದುವೆ ಸುಸೂತ್ರವಾಗಿ ನೆರವೇರಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದಿಂದ 39 ಹುದ್ದೆಗಳಿಗೆ ಆಹ್ವಾನ: ಲಕ್ಷ ರೂ.ವರೆಗೆ ಸಂಬಳ

Wed Dec 22 , 2021
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳು: 39 ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಎಲ್ಲ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1, 2ಎ, 2ಬಿ, 3ಎ, 3ಬಿ, ಇತರೆ, ಮಹಿಳಾ, ಮಾಜಿ ಸೈನಿಕ, ಗ್ರಾಮೀಣ, ಕನ್ನಡ […]

Advertisement

Wordpress Social Share Plugin powered by Ultimatelysocial