ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜ.20ಕ್ಕೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ.

ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರ ಕೊಪ್ಪಲು ಬಳಿ ಜ.20ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿ 25ಸಾವಿರ ಜನರನ್ನು ಸೇರಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕೆ.ಮರಿಗೌಡ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಹಲವು ನಾಯಕರು ಯಾವುದೇ ಷರತ್ತಿಲ್ಲದೇ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿನ ಸೋಲಿನಿಂದ ಸಿದ್ದರಾಮಯ್ಯ ಅವರಿಗೆ ನೋವಾಗಿದೆ. ಅದನ್ನು ಸರಿಪಡಿಸಲು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 50ಸಾವಿರ ಅಂತರದಿಂದ ಗೆಲ್ಲುವಂತೆ ಮಾಡಬೇಕು ಎಂದರು.
ಹಿನಕಲ್‍ನ ಗಣಪತಿ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ. 2ಸಾವಿರ ಬೈಕ್‍ಗಳಲ್ಲಿ ಕಾರ್ಯಕರ್ತರು, 1,001 ಕುಂಭ ಹೊತ್ತು ಮಹಿಳೆಯರು ಹಾಗೂ 180 ಕಲಾತಂಡದವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪಕ್ಷದ ಮುಖಂಡರಾದ ಪಟೇಲ್ ಜವರೇಗೌಡ, ಕೂರ್ಗಳ್ಳಿ ಮಹಾದೇವ್, ಅರುಣ್‍ಕುಮಾರ್, ಕೃಷ್ಣಕುಮಾರ್ ಸಾಗರ್, ಜೆ.ಜೆ.ಆನಂದ್, ಕೆಂಚಪ್ಪ, ಕೋಟೆಹುಂಡಿ ಮಹದೇವ, ಟಿ.ಬಿ.ಚಿಕ್ಕಣ್ಣ, ಬಸವರಾಜು, ಶ್ರೀಕಂಠ ತೊಂಡೇಗೌಡ, ನಾಗವಾಲ ನರೇಂದ್ರ, ಹೊಸಹುಂಡಿ ರಘು, ಮೆಲ್ಲಹಳ್ಳಿ ಮಹಾದೇವಸ್ವಾಮಿ, ನಾರಾಯಣ, ಬೆಳವಾಡಿ ಲಕ್ಷ್ಮಣ್, ಲೋಕೇಶ್, ಧನಗಳ್ಳಿ ಬಸವರಾಜು, ಹಿನಕಲ್ ಪ್ರಕಾಶ್, ಉಮಾಶಂಕರ್, ಸಿದ್ದರಾಜು, ಹಂಚ್ಯಾ ಸಣ್ಣಸ್ವಾಮಿ, ರವಿಗೌಡ,ಜಿ.ಕೆ. ಬಸವಣ್ಣ, ನಾಡನಹಳ್ಳಿ ರವಿ, ರಫಿಕ್‍ಪಾಷ, ವಿಜಯಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಆದ್ಯಕ್ಷ ಬಿ. ಗುರುಸ್ವಾಮಿ, ಸತೀಶ್‍ಕುಮಾರ್ ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಕಾಲದಲ್ಲಿ ಕೊತ್ತಂಬರಿ ಸೊಪ್ಪನ್ನು ಕಾಮೊತ್ತೇಜನಕ್ಕಾಗಿ ಬಳಸುತ್ತಿದ್ದರಂತೆ.

Sun Jan 22 , 2023
  ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲದಿದ್ದರೆ ಅಡುಗೆಯಲ್ಲಿ ಸ್ವಾದ ಬರುವುದಿಲ್ಲ ಎನ್ನಲಾಗುತ್ತದೆ, ಆದರೆ, ವಿಶ್ವದ ಒಂದು ಭಾಗದಲ್ಲಿ ಕೊತ್ತಂಬರಿ ಸೊಪ್ಪನ್ನು ದ್ವೇಷಿಸಲಾಗುತ್ತದೆ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾಗಬಹುದು, ಅಷ್ಟೇ ಅಲ್ಲ ಇನ್ನೂ ಆಶ್ಚರ್ಯಕಾರಕ ಸಂಗಟಿ ಎಂದರೆ ಆ ಜನರು ಫೆಬ್ರವರಿ 24 ಅನ್ನು ಕೊತ್ತಂಬರಿ ದ್ವೇಷಿಗಳ ದಿನವನ್ನಾಗಿ ಆಚರಿಸುತ್ತಾರಂತೆ. ಇದರಂತೆಯೇ ಕೊತ್ತಂಬರಿ ಸೊಪ್ಪಿನ ಹೆಸರು ಕೂಡ ಹೀಗೆ ಬಳುವಳಿಗೆ ಬಂದಿದೆ. ಕೊತ್ತಂಬರಿ ಹೆಸರು ಗ್ರೀಕ್ ಪದ ಕೊರೊಸ್ ನಿಂದ ಬಂದಿದೆ, […]

Advertisement

Wordpress Social Share Plugin powered by Ultimatelysocial