chandigar:ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ಬಹುದೊಡ್ಡ ಭದ್ರತಾ ಲೋಪ – ಭೇಟಿ ರದ್ದು;

ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ಬಹುದೊಡ್ಡ ಭದ್ರತಾ ಲೋಪ - ಭೇಟಿ ರದ್ದು\

ಚಂಡೀಗಢ: ಪ್ರಮುಖ ಭದ್ರತಾ ಉಲ್ಲಂಘನೆಯ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರಕ್ಕೆ ತಮ್ಮ ನಿಗದಿತ ಭೇಟಿಯನ್ನು ಬುಧವಾರ ರದ್ದುಗೊಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರಕ್ಕೆ ಭೇಟಿ ನೀಡಿ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಈ ವೇಳೆ ಜನತೆಯನ್ನುದ್ದೇಶಿಸಿ ಭಾಷಣ ಮಾಡಲು ತೀರ್ಮಾನಿಸಲಾಗಿತ್ತು.

ಇಂದು ಪ್ರಧಾನಿಯವರು ಬಟಿಂಡಾಕ್ಕೆ ಬಂದಿಳಿದಿದ್ದರು. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಫಿರೋಜ್‌ಪುರ ಜಿಲ್ಲೆಯತ್ತ ತೆರಳಿದ್ದರು.

ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಟಿಂಡಾಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಾಗಿತ್ತು. ಸುಧಾರಿತ ಹವಾಮಾನ ಇಲ್ಲದ ಕಾರಣ, ಅವರು ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ತೀರ್ಮಾನಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Arjun Gowda Movie Review: 'ಅರ್ಜುನ್ ಗೌಡ';

Wed Jan 5 , 2022
ಯೋಚನೆ ಒಳ್ಳೆಯದಿದ್ದರೆ ಮಾತ್ರ ಸಾಲದು ಆ ಯೋಚನೆಯನ್ನು ಕತೆಯ ಚೌಕಟ್ಟಿನೊಳಗೆ ಬಂಧಿಸಿ ಅದಕ್ಕೆ ಸಿನಿಮಾ ರೂಪ ನೀಡಿ ಪ್ರೇಕ್ಷಕರಿಗೆ ದಾಟಿಸುವುದು ಬಹಳ ಅವಶ್ಯಕ. ಪ್ರಜ್ವಲ್ ದೇವರಾಜ್ ನಟಿಸಿ, ಲಕ್ಕಿ ಶಂಕರ್ ನಿರ್ದೇಶನ ಮಾಡಿರುವ ‘ಅರ್ಜುನ್ ಗೌಡ’ ಸಿನಿಮಾದ ಆರಂಭದಲ್ಲಿ ಗಾಂಧಿ ಹತ್ಯೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರುಗಳ ಹತ್ಯೆಯ ಉಲ್ಲೇಖವನ್ನು ನಿರ್ದೇಶಕರು ಮಾಡುತ್ತಾರೆ. ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಬೋಳ್ಕರ್ ಹತ್ಯೆಯ ಬಗ್ಗೆಯೂ ಮಾತನಾಡುತ್ತಾರೆ. ವ್ಯಕ್ತಿಯನ್ನು ಕೊಲ್ಲುವ […]

Advertisement

Wordpress Social Share Plugin powered by Ultimatelysocial