ಸಿನಿಮಾ ಹಾಗೂ ರಾಜಕಾರಣ ಜೊತೆ-ಜೊತೆಯಾಗಿ ಸಾಗುತ್ತಿರುವ ರಂಗಗಳು. ನಟರು ರಾಜಕಾರಣಿಗಳಾಗುವುದು!

ಸಿನಿಮಾ ಹಾಗೂ ರಾಜಕಾರಣ ಜೊತೆ-ಜೊತೆಯಾಗಿ ಸಾಗುತ್ತಿರುವ ರಂಗಗಳು. ನಟರು ರಾಜಕಾರಣಿಗಳಾಗುವುದು, ರಾಜಕಾರಣಿಗಳು ಸಿನಿಮಾ ನಿರ್ಮಾಪಕರು, ನಟರಾಗುವುದು ಬಹುಕಾಲದಿಂದ ನಡದೇ ಇದೆ.ಕರ್ನಾಟಕದಲ್ಲಿಯೂ ಈ ಪದ್ಧತಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರಾಗಿ ಮೆರೆದ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ.ಈಗಲೂ ಹಲವು ನಟ-ನಟಿಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.ಕೆಲವು ದಿನಗಳ ಹಿಂದಷ್ಟೆ ಎನ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದರು. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಅಚಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.ಪಂಚ ರಾಜ್ಯಗಳ ಚುನಾವಣೆ ಇರುವ ಕಾರಣ ಸಿದ್ದರಾಮಯ್ಯ ಅವರು ಗೋವಾಕ್ಕೆ ಭೇಟಿ ನೀಡಿದ್ದರು. ಈ ಸಮಯ ಗೋವಾದಲ್ಲಿಯೇ ನಟ ಚಿಕ್ಕಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಕೆಲ ಕಾಲ ಮಾತುಕತೆ ನಡೆಸಿದ್ದಾರೆ.ಗೋವಾದಲ್ಲಿ ಸಿದ್ದರಾಮಯ್ಯರ ಭೇಟಿಯಾದ ಚಿಕ್ಕಣ್ಣಕೆಲವು ದಿನಗಳ ಹಿಂದಷ್ಟೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕನ್ನಡದಲ್ಲಿಯೂ ನಟಿಸಿರುವ ತೆಲುಗಿನ ಹಾಸ್ಯನಟ ಆಲಿ ಗೋವಾದಲ್ಲಿಯೇ ಭೇಟಿ ಆಗಿದ್ದರು. ಶೂಟಿಂಗ್‌ಗಾಗಿ ಗೋವಾಕ್ಕೆ ಹೋಗಿದ್ದ ಆಲಿ ಅಲ್ಲಿಯೇ ಸಭೆಯೊಂದಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ಹಂಚಿಕೊಂಡಿದ್ದರು.ನಟ ಚಿಕ್ಕಣ್ಣ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಗೋವಾಕ್ಕೆ ತೆರಳಿದ್ದರು. ಅಲ್ಲಿಯೇ ಸಿದ್ದರಾಮಯ್ಯ ಅವರನ್ನು ಕಂಡು ಚಿಕ್ಕಣ್ಣ ಮಾತನಾಡಿಸಿದ್ದಾರೆ. ಚಿಕ್ಕಣ್ಣ ಅವರು ತಮ್ಮನ್ನು ಗೋವಾದಲ್ಲಿ ಭೇಟಿಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ”ಗೋವಾದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣನವರೊಂದಿಗೆ ಒಂದಷ್ಟು ಹೊತ್ತು ಆತ್ಮೀಯ ಮಾತಕತೆ” ಎಂದು ಬರೆದುಕೊಂಡಿದ್ದಾರೆ. ಆದರೆ ಗೋವಾದಲ್ಲಿ ಎಲ್ಲಿ ಅವರಿಬ್ಬರೂ ಭೇಟಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಕಾರಣಕ್ಕಾಗಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಿಂದ ಅಮಿತಾಬ್ ಬಚ್ಚನ್ ನಾಪತ್ತೆಯಾಗಿದ್ದಾರೆಯೇ?

Tue Feb 8 , 2022
ಭಾನುವಾರ (ಫೆಬ್ರವರಿ 6) ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಚಿತ್ರರಂಗಕ್ಕೆ ಮಾತ್ರವಲ್ಲದೆ ಜಗತ್ತಿನಾದ್ಯಂತದ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟು ಮಾಡಿದೆ. ಅಂದಿನಿಂದ, ಸಾಮಾಜಿಕ ಮಾಧ್ಯಮಗಳು ಪೌರಾಣಿಕ ಗಾಯಕನಿಗೆ ಸಂತಾಪ ಸಂದೇಶಗಳು ಮತ್ತು ಶ್ರದ್ಧಾಂಜಲಿಗಳಿಂದ ತುಂಬಿವೆ. 92 ವರ್ಷದ ಲತಾ ಮಂಗೇಶ್ಕರ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಅವರು ನಿಧನರಾದ ದಿನದಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಬಾಲಿವುಡ್ […]

Advertisement

Wordpress Social Share Plugin powered by Ultimatelysocial