ಚೀನೀ ಹೊಸ ವರ್ಷದ ಪಾರ್ಟಿ.

 

 

 

 

ಕ್ಯಾಲಿಫೋರ್ನಿಯಾ, ಜನವರಿ, 22: ಅಮೆರಿಕಾದ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.

ಲಾಸ್ ಏಂಜಲೀಸ್ ಡೌನ್‌ಟೌನ್‌ನಿಂದ ಪೂರ್ವಕ್ಕೆ ಸುಮಾರು 13 ಕಿಮೀ ದೂರದಲ್ಲಿರು ಪ್ರದೇಶದಲ್ಲಿ ಚಂದ್ರಮಾನ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಜನರು ಸೇರಿದ್ದರು.

ಈ ವೇಳೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾಗಿ ವರದಿಯಾಗಿದೆ.

ಏಷ್ಯನ್ ಜನಸಂಖ್ಯೆಯನ್ನು ಹೊಂದಿರುವ ಸುಮಾರು 60,000 ಜನರಿರುವ ನಗರವಾದ ಮಾಂಟೆರಿ ಪಾರ್ಕ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಹೊಸ ವರ್ಷಾಚರಣೆಯ ಒಂದು ಗಂಟೆಯ ನಂತರ ನೃತ್ಯ ನಡೆಯುತ್ತಿದ್ದ ಸ್ಥಳದಲ್ಲಿ ದುರ್ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಶಂಕಿತ ವ್ಯಕ್ತಿಯ ಬಗ್ಗೆ ಪೊಲೀಸರು ಹೆಚ್ಚು ಮಾಹಿತಿ ನೀಡಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ ತುರ್ತು ಸಿಬ್ಬಂದಿಯು ಗಾಯಾಳುಗಳನ್ನು ಸ್ಟ್ರೆಚರ್‌ಗಳಲ್ಲಿ ಆಂಬ್ಯುಲೆನ್ಸ್‌ಗೆ ಸಾಗಿಸುತ್ತಿರುವುದನ್ನು ಕಾಣಬಹುದಾಗಿದೆ. ಸಾವು ನೋವಿನ ಬಗ್ಗೆ ಅಧಿಕಾರಿಗಳು ಇನ್ನು ಸರಿಯಾಗಿ ಉತ್ತರಿಸದ ಕಾರಣ ಅನೇಕ ಮಂದಿಗೆ ಗಾಯಗಳಾಗಿರುವ ಸಾಧ್ಯತೆಯಿದೆ.

ಗುಂಡಿನ ದಾಳಿ ನಡೆಸಿರುವ ಆರೋಪಿಯು ಹಲವಾರು ಸುತ್ತಿನ ಮದ್ದುಗುಂಡುಗಳನ್ನು ಹೊಂದಿರುವ ಮೆಷಿನ್ ಗನ್ ಅನ್ನು ಹೊಂದಿದ್ದಾಗಿ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಡಮಾನ್​-ನಿಕೋಬಾರ್​ನ 21 ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರು.

Sun Jan 22 , 2023
  ನವ ದೆಹಲಿ: ಅಂಡಮಾನ್​ ಮತ್ತು ನಿಕೋಬಾರ್  ​​ನಲ್ಲಿರುವ 21 ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಯವರು ಜನವರಿ 23ರಂದು ನಾಮಕರಣ ಮಾಡಲಿದ್ದಾರೆ. ಈ ಎಲ್ಲ ದ್ವೀಪಗಳೂ ದೊಡ್ಡದೊಡ್ಡ ದ್ವೀಪಗಳೇ ಆಗಿದ್ದು, ಯಾವಕ್ಕೂ ಹೆಸರಿಲ್ಲ. ಜನವರಿ 23ರಂದು ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನದಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ದ್ವೀಪಗಳಿಗೆ ನಾಮಕರಣ ಮಾಡುವರು. ಅಂದಹಾಗೇ, ಸೇನಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ಪರಮ ವೀರ ಚಕ್ರ […]

Advertisement

Wordpress Social Share Plugin powered by Ultimatelysocial