ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿಯೇ ಅಮಿತ್‌ ಶಾಗೂ ಆಗಲಿದೆ ಅಮೃತ್‌ಪಾಲ್‌ ಸಿಂಗ್‌ ಬೆದರಿಕೆ.

ಖಲಿಸ್ತಾನ ಚಳವಳಿಯನ್ನು ಮೇಲೇಳಲು ಬಿಡುವುದಿಲ್ಲಎಂದು ಅಮಿತ್‌ ಶಾ ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಆದ ಗತಿಯೇ ನಿಮಗೂ ಆಗಲಿದೆ. ಅಂಥದ್ದೇ ಕ್ಲಿಷ್ಟತೆಯನ್ನು ಎದುರಿಸುತ್ತೀರಿ,” ಎಂದು ಖಲಿಸ್ತಾನಿ ಮುಖಂಡ ಹಾಗೂ ‘ವಾರಿಸ್‌ ಪಂಜಾಬ್‌ ಕೇ’ ತೀವ್ರಗಾಮಿ ಸಂಘಟನೆ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌ ಬೆದರಿಕೆ ಹಾಕಿದ್ದಾರೆ.” ನಮ್ಮ ಚಳವಳಿಯನ್ನು ಹತ್ತಿಕ್ಕುವ ಎಚ್ಚರಿಕೆ ನೀಡಿದಂತೆಯೇ, ‘ಹಿಂದೂ ರಾಷ್ಟ್ರ’ ಕ್ಕೆ ಆಗ್ರಹಿಸುತ್ತಿರುವವರಿಗೂ ಅಮಿತ್‌ ಶಾ ಎಚ್ಚರಿಸಿಕೆ ಕೊಟ್ಟರೆ ಅವರು ಕೇಂದ್ರ ಗೃಹ ಸಚಿವರಾಗಿ ಉಳಿಯಲ್ಲ. ಅದರ ಅರಿವು ಅವರಿಗಿದೆ,” ಎಂದು ಅಮೃತ್‌ ಪಾಲ್‌ ಸಿಂಗ್‌ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ಇಂದಿರಾ ಗಾಂಧಿ ಅವರು ಖಲಿಸ್ತಾನ ಚಳವಳಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಫಲಿತಾಂಶ ಏನಾಯಿತು ಗೊತ್ತಲ್ಲ. ನೀವು ಅದನ್ನೇ ಮಾಡಲು ಪ್ರಯತ್ನಿಸಿ, ಅವರಿಗಾದಂತೆ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಯಾವುದೇ ಬಂಧನಗಳಿಗೆ ಹೆದರುವುದಿಲ್ಲ. ನಮ್ಮ ಸಭೆ, ನಮ್ಮ ಪ್ರಯಾಣವನ್ನು ನಿಲ್ಲಿಸಲು ಸರ್ಕಾರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಆದರೆ, ಯಾರಿಂದಲೂ ಸಿಖ್ಖರನ್ನು ತಡೆಯಲಾಗದು. ನಾವು ಹುಟ್ಟು ಹೋರಾಟಗಾರರು, ಸರ್ಕಾರಗಳು ನಮ್ಮನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿವೆ. ಆದರೆ, ನಾವು ಒಂದು ಗುಂಪಿನೊಂದಿಗೆ ಇದ್ದೇವೆ ಎಂಬುದನ್ನು ಅವರು ತಿಳಿದಿರಬೇಕು ಎಂದು ಅಮಿತ್‌ ಶಾಗೆ ಅಮೃತ್‌ ಪಾಲ್‌ ಎಚ್ಚರಿಸಿದ್ದಾರೆ.
ಅಪಹರಣ ಕೇಸ್‌ವೊಂದಕ್ಕೆ ಸಂಬಂಧಿಸಿದಂತೆ ಅಮೃತ್‌ಪಾಲ್‌ನ ಆಪ್ತ ಲವ್‌ಪ್ರೀತ್‌ ತೂಫಾನ್‌ ಸಿಂಗ್‌ನನ್ನು ಪಂಜಾಬ್‌ನ ಅಮೃತಸರ ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ, ಅಮೃತ್‌ಪಾಲ್‌ ಬೆಂಬಲಿಗರು ಹಾಗೂ ಖಲಿಸ್ತಾನ ಹೋರಾಟಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಬ್ಯಾರಿಕೇಡ್‌ಗಳನ್ನು ಪುಡಿಪುಡಿ ಮಾಡಿ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದರು. ಇವರೆಲ್ಲರೂ ಕೈಗಳಲ್ಲಿ ಬಂದೂಕು, ಖಡ್ಗ ಹಾಗೂ ಇತರ ಆಯುಧಗಳನ್ನು ಹಿಡಿದು ಪೊಲೀಸರನ್ನು ಹಿಮ್ಮೆಟ್ಟಿಸಲು ಯತ್ನಿಸಿ ಸಮರ ಸದೃಶ ಘಟನೆ ಗುರುವಾರ ಸಂಭವಿಸಿತು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.ಅಮೃತಸರ ಪಟ್ಟಣ ಹಾಗೂ ಸುತ್ತಲಿನ ಪಟ್ಟಣಗಳಲ್ಲಿ ಕಾನೂನು ವ್ಯವಸ್ಥೆ ಹದಗೆಡುವ ಭಯದಿಂದ ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿ ಗುರುವಾರ ಸಂಜೆ ವೇಳೆ ಲವ್‌ಪ್ರೀತ್‌ ತೂಫಾನ್‌ ಸಿಂಗ್‌ನನ್ನು ಬಿಡುಗಡೆ ಮಾಡಲು ತೀರ್ಮಾನಿಸಿದರು. ಇದರ ಘೋಷಣೆ ಆಗುತ್ತಿದ್ದಂತೆ ಖಲಿಸ್ತಾನಿ ಹೋರಾಟಗಾರರು ಶಾಂತರಾದರು. ಗಲಭೆ-ದಾಳಿ ಪ್ರಕರಣದ ತನಿಖೆ ಎಸ್‌ಐಟಿ ರಚನೆ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುಸ್ಥಿತಿಗೆ ತಲುಪಿದ 'ರಾಯಬಾಗ ಉನ್ನತ ಮಟ್ಟದ ಕಾಲುವೆ.

Fri Feb 24 , 2023
ಕಾಲುವೆ ನಿರ್ಮಾಣ ಮಾಡಿ 50 ವರ್ಷ ಕಳೆದಿದರೂ ಇನ್ನೂ ನೀರು ಹರಿಸಿಲ್ಲ. ಜತೆಗೆ ಕಾಲುವೆ ಎಲ್ಲಿದೆ ಎಂದು ಹುಡುಕುವಂಥ ಸ್ಥಿತಿ. ಕಾಲುವೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ಇದು ಘಟಪ್ರಭಾ ಎಡದಂಡೆ ಕಾಲುವೆಯ ವ್ಯಾಪ್ತಿಯ ರಾಯಬಾಗ ಉನ್ನತ ಮಟ್ಟದ ಕಾಲುವೆ (ಆರ್‌ಎಚ್‌ಎಲ್‌ಡಿ) ದುಸ್ಥಿತಿ.ರಾಯಬಾಗ ತಾಲೂಕಿನ ಕೆಂಪಟ್ಟಿ, ನಂದಿಕುರಳಿ ಮತ್ತು ಚಿಕ್ಕೋಡಿ ತಾಲೂಕಿನ ಕಾಡಾಪುರ, ಕೇರೂರ, ಕೇರೂರವಾಡಿ, ಅರಭ್ಯಾಣವಾಡಿ, ರುಪಿನಾಳ, ನಣದಿ, ನಣದಿವಾಡಿ, ಸಿದ್ದಾಪೂರವಾಡಿ ಸೇರಿದಂತೆ ಇತರ ಗ್ರಾಮಗಳ […]

Advertisement

Wordpress Social Share Plugin powered by Ultimatelysocial