‘ಆಚಾರ್ಯ’ ಸಿನಿಮಾ ರಿಲೀಸ್ ಏಪ್ರಿಲ್ 29ಕ್ಕೆ

 

ಕೊರಟಾಲ ಶಿವ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ‘RRR’ ಸಿನಿಮಾ ಮಾರ್ಚ್ 25ರಂದು ತೆರೆಮೇಲೆ ಬರಲಿದ್ದು,’ಆಚಾರ್ಯ’ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ಸೋನು ಸೂದ್‌, ಸೌರವ್ ಕಿಶೋರ್ ಸೇರಿದಂತೆ ಕನ್ನಡದ ಭಜರಂಗಿ ಲೋಕಿ ಅಭಿನಯಿಸಿದ್ದಾರೆ.ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಹಾಗೂ ಮ್ಯಾಟಿನಿ ಎಂಟರ್ಟೇನ್ಮೆಂಟ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PETROL RATE:ಇಂದು ಪೆಟ್ರೋಲ್ ದರ;

Wed Feb 2 , 2022
 ನಿಮ್ಮ ಮನೆಯಿಂದ ದೂರದ ಸ್ಥಳಗಳಿಗೆ ವಾಹನಗಳಲ್ಲಿ ಹೋಗೋಕೆ ಇಂಧನ ಬೇಕೇ ಬೇಕು ಅಲ್ವಾ..? ಇನ್ನು, ಪೆಟ್ರೋಲ್‌, ಡೀಸೆಲ್‌ ದರ(Petrol-Diesel Price) ಪ್ರತಿನಿತ್ಯ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ನೀವು ನಿಮ್ಮ ವಾಹನಗಳಿಗೆ ಇಂಧನ ಹಾಕಿಸಿಕೊಳ್ಳಲು ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅನ್ನೋ ಕುತುಹಲ ಸಾಮಾನ್ಯವಾಗಿ ಹಲವರಿಗೆ ಇದ್ದೇ ಇರುತ್ತದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 […]

Advertisement

Wordpress Social Share Plugin powered by Ultimatelysocial