ಬ್ಯಾರಿ ಕ್ಯಾಲೆಬಾಟ್ ಚಾಕೊಲೇಟ್​ ಕಾರ್ಖಾನೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ!

ಬೆಲ್ಜಿಯಂ: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಎನಿಸಿರುವ ಬೆಲ್ಜಿಯಂನಲ್ಲಿರುವ ಬ್ಯಾರಿ ಕ್ಯಾಲೆಬಾಟ್ ಚಾಕೊಲೇಟ್​ ಕಾರ್ಖಾನೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ.

ಈ ಬ್ಯಾಕ್ಟೀರಿಯಾ ಅನ್ನು ಹಾನಿಕಾರಕ ಸಲ್ಮೊನೆಲ್ಲಾ ಎಂದು ಗುರುತಿಸಲಾಗಿದೆ, ಕಾರ್ಖಾನೆಯಲ್ಲಿ ಚಾಕೊಲೇಟ್​​ ಉತ್ಪಾದನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಚಾಕೊಲೇಟ್​​ ಕಾರ್ಖಾನೆ ಎನಿಸಿದೆ. ಈ ಕಾರ್ಖಾನೆಯಿಂದ ವಿಶ್ವದ ಬಹುತೇಕ ಕಡೆಗಳಿಂದ ಚಾಕೊಲೇಟ್​ ರಫ್ತಾಗುತ್ತಿವೆ.

ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ. ಬ್ಯಾಕ್ಟೀರಿಯಾ ಪತ್ತೆಯಾಗುವ ಮುನ್ನ ವಿಶ್ವದ ಹಲವು ಕಡೆಗಳಲ್ಲಿ ಚಾಕೊಲೇಟ್​ಗಳನ್ನು ಸರಬರಾಜು ಮಾಡಲಾಗಿದ್ದು, ಈ ಬಗ್ಗೆ ಕಾರ್ಖಾನೆ ಆತಂಕ ವ್ಯಕ್ತಪಡಿಸಿದೆ. ಆದರೂ ಸ್ಪಷ್ಟನೆ ನೀಡಿರುವ ಕಾರ್ಖಾನೆ, ಈ ಸಮಯದಲ್ಲಿ ನಾವು ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿಯಾದ ನಟಿ ಶರ್ಮಿಳಾ ಮಾಂಡ್ರೆ !

Fri Jul 1 , 2022
  ಸಧ್ಯ ಗಾಳಿಪಟ 2 ಸಿನಿಮಾ ಬಿಡುಗಡೆಯ ಹಿನ್ನೆಲೆ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಚಂದನವನದಲ್ಲಿ ಗಾಳಿಪಟ 2, ದಸರಾ ಹಾಗೂ ಮಂಡಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ಶಿರಡಿ ಸಾಯಿ ಬಾಬಾನ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶ್ವೇತ ವರ್ಣದ ಕುರ್ತಾ ಹಾಗೂ ದುಪ್ಪಟ್ಟಾ ಧರಿಸಿರುವ ನಟಿ […]

Advertisement

Wordpress Social Share Plugin powered by Ultimatelysocial