ಮಹಾಪೂರ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ.

ವಿಭಿನ್ನತೆಗೆ ಹೆಸರಾದಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಸಹ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವಾನದ ಕಚಗುಳಿಯನ್ನಿಡುವ ಉದ್ದೇಶದಿಂದ ಹುಟ್ಟಿಕೊಂಡ ಮಹಾವೇದಿಕೆ ಕಾಮಿಡಿ ಕಿಲಾಡಿಗಳು. “ನಿಮ್‌ ಟೆನ್ಶನ್‌ಗಳನ್ನು ಬದಿಗೊತ್ತಿ ಮುಖದಲ್ಲಿ ನಗು ತರಿಸಲು ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಅನ್ನೋ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಪ್ರತಿ ಸೀಸನ್ನಿನ ವಾಡಿಕೆಯಂತೆ ಕರ್ನಾಟಕದ 31 ಜಿಲ್ಲೆಗಳಿಗೆ ಹೋಗಿ, 60 ಸಾವಿರಕ್ಕು ಹೆಚ್ಚು ಪ್ರತಿಭೆಗಳನ್ನ ಆಡಿಷನ್‌ ಮಾಡಿ, ಅವರಲ್ಲಿ ಅತ್ಯುತ್ತಮರಾದಂತ 16 ಹಾಸ್ಯ ರತ್ನಗಳನ್ನ ನಮ್ಮ ತ್ರಿವಳಿ ತೀರ್ಪುಗಾರರು ಮೆಗಾ ಆಡಿಷನ್‌ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿ ವೇದಿಕೆಗೆ ಪ್ರೀತಿಯ ಸ್ವಾಗತ ಕೋರಿದರು. ಇನ್ನು “ನಗುವೇ ನಮ್ಮ ಸಿದ್ದಾಂತ, ನಗ್ಸೋದಷ್ಟೇ ನಮ್ಮ ವೇದಾಂತ” ಅನ್ನೋ ಸೂತ್ರಕ್ಕೆ ಬದ್ದರಾದಂತ 16 ಜನ ಕಿಲಾಡಿಗಳು, ರಂಗಭೂಮಿಯ ನುರಿತ ನಿರ್ದೇಶಕರುಗಳ ಸಾರಥ್ಯದೊಂದಿಗೆ ಪ್ರತಿದಿನ ರಂಗ ತಾಲೀಮಿನಲ್ಲಿ ತೊಡಗಿಸಿಕೊಂಡು, ನಟನೆಯ ವೈಖರಿ, ಭಾಷೆಯ ಮೇಲಿನ ಹಿಡಿತಗಳು, ಆಂಗೀಕ ಅಭಿನಯದ ಆಯಾಮಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅಭಿನಯದ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗನ್ನ ನೀಡಿ, ಕರುನಾಡಿನ ವೀಕ್ಷಕರೆಲ್ಲರು ಇದು ನಮ್ಮ ನೆಚ್ಚಿನ ಕಾರ್ಯಕ್ರಮ ಎಂದು ಕಾತುರದಿಂದ ಕಾಯುವಂತೆ ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ ನಮ್ಮ ಸೀಸನ್‌ 4ನ ಕಿಲಾಡಿಗಳು.ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ ಈ ಸೀಸನ್‌ನ ಮತ್ತೊಂದು ವಿಶೇಷತೆಯ ಹೊಸ ಪ್ರಯೋಗಸ್ಟ್ಯಾಂಡಪ್‌ ಕಾಮಿಡಿ.ತಮ್ಮ ಮಾತಿನ ವೈಖರಿಯ ಮೂಲಕ ವೀಕ್ಷಕರನ್ನ ತಾಸುಗಟ್ಟಲೇ ರಂಜಿಸುವ ನೈಪುಣ್ಯತೆಯಿರುವುದು ಸ್ಟ್ಯಾಂಡಪ್‌ ಕಮೆಡಿಯನ್‌ಗಳಿಗೆ, ಅದರಂತೆ ಈ ಒಂದು ಸಂಚಿಕೆಯಲ್ಲಿ ನಮಗೆ ಸಿಕ್ಕಂತ ಅಪರೂಪದ ಪ್ರತಿಭೆ ರಾಯಚೂರಿನ ಹಾಟ್‌ ಹುಡುಗ ರಾಘವೇಂದ್ರ ಆಚಾರ್ಯ. ಮೆಗಾ ಆಡಿಷನ್‌ ಮೂಲಕ ಶುರುವಾದಂತ ಕಾರ್ಯಕ್ರಮ ಸರಿ ಸುಮಾರು 22 ವಾರಗಳ ಸುಧೀರ್ಘ ಸಂಚಿಕೆಯಲ್ಲಿ, ಸೆಮಿಫಿನಾಲೆ ಹಂತದವರೆಗೆ ಒಟ್ಟು 150ಕ್ಕೂ ಹೆಚ್ಚು ಸ್ಕಿಟ್‌ಗಳ ಮೂಲಕ ಭಿನ್ನ, ವಿಭಿನ್ನ ಗೆಟಪ್‌ಗಳ ಮೂಲಕ, ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳು ಹಾಗೂ ಪ್ರಯೋಗಾತ್ಮಕ ಸ್ಕಿಟ್‌ಗಳನ್ನ ಅಭಿನಯಿಸುವುದರ ಮೂಲಕ ಕನ್ನಡಿರನ್ನ ರಂಜಿಸುವಲ್ಲಿ ನಮ್ಮ ಕಿಲಾಡಿಗಳು ಹಾಗೂ ನಗುವಿನ ಮಹಾವೇದಿಕೆ ಸೈ ಎನಿಸಿಕೊಂಡು, ಮನರಂಜನೆಯ ಮೂಲಕ ನಾಡಿನ ಮೆಚ್ಚುಗೆಗೆ ಪಾತ್ರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 4 ಮಹಾವೇದಿಕೆ ಈಗ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇನ್ನು ಎಂದಿನಂತೆ ನಮ್ಮ ಕಾರ್ಯಕ್ರಮದ ಹೆಮ್ಮೆಯ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್‌, ಕ್ರೇಜಿಕ್ವೀನ್‌ ರಕ್ಷಿತಾ ಹಾಗೂ ಲವ್ಲೀ ಸ್ಟಾರ್‌ ಪ್ರೇಮ್‌ರವರು ಗ್ರ್ಯಾಂಡ್‌ ಫಿನಾಲೆಯ ಮೆರುಗನ್ನು ಹೆಚ್ಚಿಸಿದರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಾರಥಿ, ಕರ್ನಾಟಕದ ನೆಚ್ಚಿನ ನಿರೂಪಕ ಮಾಸ್ಟರ್‌ ಆನಂದ್‌ರವರು ಗ್ರ್ಯಾಂಡ್‌ ಫಿನಾಲೆಯನ್ನು ಮುನ್ನಡೆಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ 3 ತಿಂಗಳಲ್ಲಿ ಚೀನಾದ ಶೇ 60%ರಷ್ಟು ಮಂದಿ 'ಕೋವಿಡ್'ಗೆ ಒಳಗಾಗಬಹುದು.

Thu Feb 9 , 2023
ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಅಲ್ಲಿನ ಆಸ್ಪತ್ರೆಗಳು ಮತ್ತು ಶವಾಗಾರಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇದರ ನಡುವೆ ಸಾಂಕ್ರಾಮಿಕ ರೋಗ ತಜ್ಞರು, ಮುಂದಿನ ಮೂರು ತಿಂಗಳಲ್ಲಿ ಚೀನಾದ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಕರೋನವೈರಸ್‌ನಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಲಕ್ಷಾಂತರ ಕೋವಿಡ್ ಸಂಬಂಧಿತ ಸಾವುಗಳಿಗೆ ಸಂಭವಿಸಲಿವೆ ಎಂದು ಅಂದಾಜಿಸಿದ್ದಾರೆ. ಎಪಿಡೆಮಿಯಾಲಜಿಸ್ಟ್ ಅಂದಾಜಿನ ಪ್ರಕಾರ ಚೀನಾದ ಶೇ.60% ಜನಸಂಖ್ಯೆಯ ಮುಂದಿನ 90 ದಿನಗಳಲ್ಲಿ ಸೋಂಕಿಗೆ ಒಳಗಾಗಬಹುದು. ಸಾವುಗಳು […]

Advertisement

Wordpress Social Share Plugin powered by Ultimatelysocial