ಪ್ರಧಾನಿಗೆ ಪತ್ರ ಬರೆದ ಮಧುಮಗಳು:ಮದುವೆ ಮುಂದುಡಿದಕ್ಕೆ ಬೇಸರ

ಪ್ರಧಾನಿಗೆ ಪತ್ರ ಬರೆದ ಮದುಮಗಳು! ನನ್ನ ಮದುವೆ 3 ಬಾರಿಗೆ ಮುಂದೂಡಬೇಕಾಗಿದೆ. ಏನ್ ಮಾಡ್ಬೇಕು ನೀವೇ ಹೇಳಿ!

ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳಿಂದಾಗಿ ರಕ್ಷಿಸಿಕೊಳ್ಳಲು ಹಲವು ದೇಶಗಳು ಕೆಲವು ಕಾನೂನು ನಿರ್ಬಂಧಗಳನ್ನು ಹೊರಡಿಸಿದೆ. ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಬ್ರಿಟಿಷ್ ಸರ್ಕಾರ ಕೂಡ ಲಾಕ್‌ಡೌನ್  ಹೇರಲು ಯೋಜನೆ ಹಾಕಿಕೊಂಡಡಿದೆ.

ಏತನ್ಮಧ್ಯೆ, ಬ್ರಿಟನ್‌ನಲ್ಲಿ  ಯುವತಿಯೊಬ್ಬಳು ತನ್ನ ದೇಶದ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ತನ್ನ ವಿವಾಹದ (Wedding) ಕುರಿತಾಗಿ ಪತ್ರವೊಂದನ್ನು (Letter) ಬರೆದಿದ್ದು, ಆ ಪತ್ರ ವೈರಲ್ ಆಗಿದೆ. ಯುವತಿ ಪ್ರಧಾನಿಗೆ ಬರೆದ ಪತ್ರದಲ್ಲಿ ನನ್ನ ಮದುವೆ ಮೂರನೇ ಬಾರಿಗೆ ಮುಂದೂಡಬೇಕಾದ ಪ್ರಸಂಗ ಎದುರಾಗಿದೆ ಎಂದು ಹೇಳಿದ್ದಾಳೆ. ಜೊತೆಗೆ ಪತ್ರದಲ್ಲಿ ಕಾರಣವನ್ನೂ ನೀಡಿದ್ದಾಳೆ.

ಪ್ರಧಾನಿಗೆ ಬೋರಿಸ್​ ಜಾನ್ಸನ್​ಗೆ ಪತ್ರ ಬರೆದ ಹುಡುಗಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಈಕೆಗೆ ಮದುವೆ ನಿಶ್ಚಯವಾಗಿತ್ತು. ಕರೋನಾ ನಿರ್ಬಂಧಗಳಿಂದಾಗಿ ಕ್ಯಾಟ್ ಆಕೆಯ ಮದುವೆಯನ್ನು ಈ ಹಿಂದೆ ಎರಡು ಬಾರಿ ಮುಂದೂಡಿದ್ದರಿಂದ ಮೂರನೇ ಬಾರಿಗೆ ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದಳು. ಈಗ ಆಕೆಯ ವಿವಾಹ ಹತ್ತಿರವಾಗುತ್ತಿದ್ದಂತೆ ಓಮಿಕ್ರಾನ್​ ಭೀತಿ ಶುರುವಾಗಿದೆ. ಜೊತೆಗೆ ಕಾನೂನು ಮತ್ತು ನಿರ್ಬಂಧಗಳನ್ನು ಆಕೆ ಎದುರಿಸಬೇಕಾದ ಪರಿಸ್ಥಿತಿ ಒದಗಿಸಿದೆ.

ಕ್ಯಾಟ್ ತನ್ನ ಸಮಸ್ಯೆಯ ಬಗ್ಗೆ ನೇರವಾಗಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಪತ್ರ ಬರೆದಿದ್ದಾಳೆ. ತನ್ನ ತಂದೆ ಮತ್ತು ಭಾವಿ ಅತ್ತೆಯ ವಯಸ್ಸಿನವರಾಗಿದ್ದು, ಕರೋನಾ ಅಮಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಕರೆದುಕೊಂಡು ಹೋಗಲು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಅವರೂ ಕೂಡ ಮದುವೆಗೆ ಬರುವುದನ್ನು ತಪ್ಪಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾಳೆ. ಎಲ್ಲಾ ವಯಸ್ಸಾದವರು ಓಮಿಕ್ರಾನ್ ರೂಪಾಂತರಕ್ಕೆ ಹೆದರುತ್ತಿದ್ದಾರೆ. ವಿವಾಹ ಕಾರ್ಯಕ್ರಮದಲ್ಲೂ ಸೀಮಿತ ವ್ಯಕ್ತಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಅತಿಥಿಗಳು ಬರದಿದ್ದರೆ ನಷ್ಟವಾಗುತ್ತದೆ ಎಂದು ಕ್ಯಾಟ್​ ಪತ್ರದಲ್ಲಿ ಹೇಳಿದ್ದಾಳೆ.

ವಿವಾಹಕ್ಕೆಂದೇ ಹೂವುಗಳನ್ನು ಆರ್ಡರ್ ಮಾಡಲಾಗಿದೆ. ಸಂಗೀತಗಾರರನ್ನು ಸಹ ಬುಕ್ ಮಾಡಲಾಗಿದೆ ಎಂದು ಕ್ಯಾಟ್ ತನ್ನ ಪತ್ರದಲ್ಲಿ ಬರೆದಿದ್ದಾಳೆ. ಅತಿಥಿಗಳ ಆಗಮನಕ್ಕೆ ಬಸ್‌ಗಳನ್ನು ಸಹ ಕಾಯ್ದಿರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ಪಾವತಿಸಿಯೂ ಆಗಿದೆ.

ಪ್ರಧಾನಿಗಳೇ.. ಒಂದೋ ಹೆಚ್ಚು ಜನರು ಹಾಜರಾಗಲು ಅವಕಾಶ ನೀಡಬೇಕು ಅಥವಾ ನಾವು ಹೇಗೆ ಮದುವೆಯಾಗಬೇಕು ಎಂದು ನೀವೇ ತಿಳಿಸಬೇಕು. ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧಗಳನ್ನು ಹಾಕುವ ಮೂಲಕ ಸರ್ಕಾರವು ನನ್ನ ಮದುವೆಗೆ ಅಡ್ಡಿ ಪಡಿಸುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾಳೆ. ಇದರಿಂದ ಬಹಳಷ್ಟು ಹಣ ವ್ಯರ್ಥವಾಗುತ್ತದೆ. ನಾನು ಮೂರನೇ ಬಾರಿಗೆ ನನ್ನ ಮದುವೆಯನ್ನು ಮುಂದೂಡಬೇಕೆ? ನೀವೆ ಹೇಳಿ ಎಂದಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ

Fri Dec 24 , 2021
ಸಾಮಾನ್ಯವಾಗಿ ಶನಿವಾರ(Saturday) ಆಂಜನೇಯನ (Lord Hanuman) ಆರಾಧನೆ ಮಾಡಲಾಗುತ್ತದೆ. ತನ್ನನ್ನ ನಿಷ್ಕಲ್ಮಶ ಹೃದಯದಿಂದ ಪೂಜಿಸಿದರೆ ಹನುಮಂತನು ಬೇಗನೆ ತನ್ನ ಭಕ್ತನನ್ನು ಮೆಚ್ಚಿ ಆಶೀರ್ವದಿಸುತ್ತಾನೆ ಎಂದು ಹೇಳಲಾಗುತ್ತದೆ. ಆದರೂ ಭಗವಾನ್‌ ಹನುಮನ ಆಶೀರ್ವಾದ ಪಡೆಯಲು ಏನನ್ನು ಅರ್ಪಿಸಬೇಕು ಎನ್ನುವುದರ ಮಾಹಿತಿ ಇಲ್ಲಿದೆ. ಕುಂಕುಮ ಒಮ್ಮೆ ಸೀತಾದೇವಿಯ ಬೈತಲೆಯ ಮೇಲೆ ಹಚ್ಚಿರುವ ಕುಂಕುಮವನ್ನು ನೋಡಿ ಆಂಜನೇಯನು ಯಾಕೆ ಕುಂಕುಮ ಹಚ್ಚಬೇಕು ಎಂದು ಕೇಳಿದಾಗ ಸೀತಾದೇವಿಯು ಇದು ರಾಮನ ಮೇಲಿರುವ ಪ್ರೀತಿಯ ಸಂಕೇತ ಎನ್ನುತ್ತಾಳೆ. […]

Advertisement

Wordpress Social Share Plugin powered by Ultimatelysocial