ಯುವ ಕಾಂಗ್ರೆಸ್‌ ಕಚೇರಿ ಇಸ್ಲಾಂ ಧರ್ಮದ ರೀತಿಯಲ್ಲಿ ಉದ್ಘಾಟನೆ ಎಂಬ ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

ಕಾಂಗ್ರೆಸ್ ಭವನದಲ್ಲಿ ವಿವಿಧ ಧರ್ಮಗಳ ವಿಧಿ ವಿಧಾನಗಳ ಮೂಲಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೆಪಿವೈಸಿಸಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುತ್ತಿರುವ ಚಿತ್ರವನ್ನು ಇಸ್ಲಾಮಿಕ್ ವಿಧಿ ವಿಧಾನಗಳ ಪ್ರಕಾರ ಹೊಸ ಯೂತ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗಿದೆ  ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಕಚೇರಿಯ   ಉದ್ಘಾಟನಾ ಸಮಾರಂಭದಲ್ಲಿನ ಚಿತ್ರ ಎಂದು ಪುರುಷರ ಗುಂಪೊಂದು ಕೋಣೆಯೊಳಗೆ ದುವಾ  ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.ಇವರಿರುವ ಕೋಣೆಯ ಗೋಡೆಯ ಮೇಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಭಾವಚಿತ್ರಗಳನ್ನೂ ಕಾಣಬಹುದು. ಇದು ಮದರಸದ ಉದ್ಘಾಟನೆಯಲ್ಲ, ಕಾಂಗ್ರೆಸ್ ಕಚೇರಿಯ ಉದ್ಘಾಟನೆ ಎಂದು ಪ್ರತೀಶ್ ವಿಶ್ವನಾಥ್ ಎಂಬವರು ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಹಲವರು ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದು ಫೇಸ್​​ಬುಕ್ ನಲ್ಲಿ ಕಪಿಲ್ ಮಿಶ್ರಾ ಫ್ಯಾನ್ ಪೇಜ್ ನಲ್ಲಿಯೂ ಈ ಫೋಟೊ ಶೇರ್ ಆಗಿದೆ. ಮುಸ್ಲಿಂ ಧರ್ಮದ ರೀತಿಯಲ್ಲಿ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತೇ? ವೈರಲ್ ಫೋಟೊದ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿಯಲು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ. ಈ ಬಗ್ಗೆ   ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಡೆಕ್ಕನ್ ಹೆರಾಲ್ಡ್​​​ನಲ್ಲಿರುವ ಸುದ್ದಿ ಸಿಕ್ಕಿದೆ. ಈ ಸುದ್ದಿ ಪ್ರಕಾರ ಜನವರಿ 31 ರಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹ್ಯಾರಿಸ್ ತಮ್ಮ ಕಚೇರಿಯನ್ನು ಉದ್ಘಾಟಿಸಿದರು ಎಂದು ವರದಿಯಲ್ಲಿ ಹೇಳಿದೆ.
Please follow and like us:

Leave a Reply

Your email address will not be published. Required fields are marked *

Next Post

POLITICS:ನೀವು ಯಾವಾಗ ನಿವೃತ್ತರಾಗುತ್ತೀರಿ? ಟಿಎಂಸಿ ಸಂಸದ ಸೌಗತ ರಾಯ್ ಅವರೊಂದಿಗೆ ಪ್ರಧಾನಿ ಮೋದಿ ಅವರ ಹಾಸ್ಯದ ತಮಾಷೆ;

Wed Feb 2 , 2022
ಪ್ರಧಾನಿಯವರು ಕೆಲವು ವಿರೋಧ ಪಕ್ಷದ ನಾಯಕರೊಂದಿಗೆ ಆಸಕ್ತಿದಾಯಕ ಸಂವಾದ ನಡೆಸಿದರು. ಅವರು ಸದನದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಸೌಗತ ರಾಯ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಎ ರಾಜಾ ಮತ್ತು ದಯಾನಿಧಿ ಮಾರನ್ ಮತ್ತು ಆರ್‌ಎಸ್‌ಪಿ ಸದಸ್ಯ ಎನ್‌ಕೆ ಪ್ರೇಮಚಂದ್ರನ್ ಮತ್ತು ಮಹಾರಾಷ್ಟ್ರದ ಅಮರಾವತಿಯನ್ನು ಪ್ರತಿನಿಧಿಸುವ ಸ್ವತಂತ್ರ ಸಂಸದೆ ನವನೀತ್ ಕೌರ್ ರಾಣಾ ಅವರನ್ನು ಭೇಟಿ ಮಾಡಿದರು. ಅವರು […]

Advertisement

Wordpress Social Share Plugin powered by Ultimatelysocial