ಭೂಮಿಯಲ್ಲಿ ವೈರಸ್‌ಗಳೇ ಇಲ್ಲವಾಗಿಬಿಟ್ಟರೆ ಮನುಕುಲವೂ ಉಳಿಯುವುದಿಲ್ಲ ಎನ್ನುತ್ತಾರೆ ವಿಜ್ಞಾನ ಲೇಖಕ ಪ್ರಣಯ್‌ ಲಾಲ್‌

ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡ ಬಳಿಕ ಸೃಷ್ಟಿಯಾದ ಬಿಕ್ಕಟ್ಟುಗಳು, ಅದರ ರೂಪಾಂತರ ತಳಿ ಓಮೈಕ್ರಾನ್‌ ಹರಡುವಿಕೆಯಿಂದ ಎದುರಾಗಿರುವ ತಲ್ಲಣಗಳಿಂದಾಗಿ ವೈರಸ್‌ಗಳನ್ನು ಹಲುಬುವವರ ಸಂಖ್ಯೆ ಜಾಸ್ತಿ ಆಗಿರಬಹುದು. ಆದರೆ, ಭೂಮಿಯಲ್ಲಿ ವೈರಸ್‌ಗಳೇ ಇಲ್ಲವಾಗಿಬಿಟ್ಟರೆ ಮನುಕುಲವೂ ಉಳಿಯುವುದಿಲ್ಲ ಎನ್ನುತ್ತಾರೆ ವಿಜ್ಞಾನ ಲೇಖಕ ಪ್ರಣಯ್‌ ಲಾಲ್‌.ಲೇಖಕ ಪ್ರಣಯ್‌ ಲಾಲ್‌ ತಮ್ಮ ‘ಇನ್‌ವಿಸಿಬಲ್‌ ಎಂಪೈರ್: ಎ ನ್ಯಾಚುರಲ್‌ ಹಿಸ್ಟರಿ ಆಫ್‌ ವೈರಸಸ್‌’ ಕೃತಿಯ ಕುರಿತು ರಾಹುಲ್‌ ಮಥಾನ್‌ ಜೊತೆ ನಡೆಸಿದ ಚರ್ಚೆಯಲ್ಲಿ ವೈರಸ್‌ಗಳ ಮಹತ್ವ ಹಾಗೂ ಅವುಗಳ ನಿಗೂಢ ಜಗತ್ತಿನ ರೋಚಕ ಸಂಗತಿಗಳನ್ನು ತೆರೆದಿಟ್ಟರು.

ವೈರಸ್‌, ಬ್ಯಾಕ್ಟೀರಿಯಾ ಸೇರಿದಂತೆ 1.3 ಲಕ್ಷ ಕೋಟಿ ಸೂಕ್ಷ್ಮಾಣುಜೀವಿಗಳು ಮನುಷ್ಯನ ದೇಹದಲ್ಲಿರುತ್ತವೆ. ಅವುಗಳಿಂದ ಸೃಷ್ಟಿಯಾಗಿರುವ ಮೈಕ್ರೊ ಬಯೋಮ್‌ಗಳೂ ನಮ್ಮದೇಹದ ಕಾರ್ಯನಿರ್ವಹಣೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಭೂಮಿಯ ಹುಟ್ಟು ಮತ್ತು ಜೀವವಿಕಾಸದ ಹಾದಿಯಲ್ಲೂ ಅವುಗಳ ಪಾತ್ರ ಮಹತ್ತರವಾದುದು ಎಂದರು.ಜೀವ ಸಂಕುಲಗಳು ಎದುರಿಸುವ ಎಲ್ಲ ಸಮಸ್ಯೆಗಳಿಗೂ ನಿಸರ್ಗದಲ್ಲೇ ಪರಿಹಾರವೂ ಇದೆ. ವೈರಾಣು ಸೋಂಕುಗಳನ್ನು ಎದುರಿಸಲು ಅಗತ್ಯವಿರುವ ಪ್ರತಿರೋಧ ಶಕ್ತಿಯು ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಬೆಳವಣಿಗೆ ಹೊಂದಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂಇಎಸ್ ಪುಂಡರ ದರ್ಪಕ್ಕೆ ನಟ ದರ್ಶನ್ ತೀವ್ರ ವಿರೋಧ

Sun Dec 19 , 2021
ಎಂಇಎಸ್ ಪುಂಡರ ದರ್ಪಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಅದರಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು.ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಟ ದರ್ಶನ್ […]

Advertisement

Wordpress Social Share Plugin powered by Ultimatelysocial