ಕೊರೊನಾ ಸಮಯದಲ್ಲಿ ವಹಿಸಬೇಕಾದ ಮುನ್ನೇಚ್ಚರಿಕಾ ಕ್ರಮಗಳ ಬಗ್ಗೆ ಶಾಲಾ ಮಕ್ಕಳಿಗೆ ಸೂಚನೆ

ಶತಮಾನದ ಅಭಿಮಾನ ಬೆಳವಾಡಿ ಶಾಲೆಗೆ ಕಾಂಗ್ರೆಸ್ ಮುಖಂಡರು ಮತ್ತು ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ದಿನೇಶ್ ಭೈರೇಗೌಡ ಭೇಟಿನೀಡಿ , ಮಕ್ಕಳ ಮನೆಯ ಪುಟಾಣಿಗಳಿಗೆ ಕಪ್ಪು-ಬಿಳುಪು VKC ಶೂಗಳು ಹಾಗೂ‌ ಓಆರ್ ಸ್‌ ಉಡುಗೊರೆಯಾಗಿ ನೀಡಿದರು.ಶಾಲೆಯ ಕಾರ್ಯಚಟುವಟಿಕೆಗಳ ಮತ್ತು ಪ್ರಗತಿ ಸಂಬಂಧಿಸಿದಂತೆ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ಸುದೀರ್ಘ ಸಂವಾದ ನಡೆಸಿದ ಅವರು, ಕೊರೋನಾದ ಈ ಕಾಲದಲ್ಲಿ ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಮನದಟ್ಟಾಗುವಂತೆ ಸರಳವಾಗಿ ಮಕ್ಕಳಿಗೆ ತಿಳಿ ಹೇಳಿದರು. ಅಂಗಡಿ ಮತ್ತು ಬೇಕರಿಗಳಲ್ಲಿ ಸಿಗುವ ರಾಸಾಯನಿಕಯುಕ್ತ ಪ್ಯಾಕ್ಡ್ ಜ್ಯೂಸ್ , ಚಿಪ್ಸ್ , ಕುರ್ಕರೆ ಇತ್ಯಾದಿಗಳ ಬಿಟ್ಟು, ಆರೋಗ್ಯಕರವಾದ ಹಣ್ಣು-ಹಂಪಲು, ಸೊಪ್ಪು-ತರಕಾರಿಗಳನ್ನು ಸಾಕಷ್ಟು ತಿನ್ನುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆದು, ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯವಾದ ಪ್ರಜೆಗಳಾಗಿ ಮಕ್ಕಳು ರೂಪುಗೊಳ್ಳಬೇಕು ಎಂದು ಆಷಿಸಿದ ಅವರು, ಶಾಲೆಯ ಕಾರ್ಯಚಟುವಟಿಕೆಗಳೊಂದಿಗೆ ತಾನೂ ಆದಷ್ಟು ಕೈ ಜೋಡಿಸುವುದಾಗಿ ಭರವಸೆ ನೀಡಿದರು.

ಮಕ್ಕಳ ಮನೆಯ ಮಕ್ಕಳಿಗೆಲ್ಲಾ ಮರೆಯದೇ ಆರೋಗ್ಯಕರ ಕಿತ್ತಳೆ ಹಣ್ಣಿನ ORS ಜ್ಯೂಸ್ ತಂದಿದ್ದ, ಮಕ್ಕಳೊಂದಿಗೆ ನಗುಮೊಗದೀ ಮಗುವಿನಂತಿದ್ದ ಮಕ್ಕಳ ಡಾಕ್ಟರ್ ದಿನೇಶ್ ಅವರಿಗೆ ಪುಟಾಣಿಗಳು ಔಷಧಿಯ ಮರವಾದಂತಹ ಸಮುದ್ರ ಫಲದ ಗಿಡವನ್ನು ಉಡುಗೊರೆಯಾಗಿ ಕೊಟ್ಟು ಪ್ರೀತಿಯಿಂದ ಬೀಳ್ಕೊಟ್ಟರು.ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಗುರಪ್ಪ ..ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ. ಅಲ್ಪಸಂಖ್ಯಾತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಹಬಾಜ್ ಯುವಮುಖಂಡರಾದ ಲೋಕೇಶ್ . ಎಸ್ ಡಿ ಎಮ್ ಸಿ ಅಧ್ಯಕ್ಷರು . ಮುಖ್ಯೋಪಾಧ್ಯಾಯರು .ಶಿಕ್ಷಕರು .. ಹಳೆ ವಿದ್ಯಾರ್ಥಿಗಳು ಪೋಷಕರು ಗ್ರಾಮಸ್ಥರು ಹಾಜರಿದ್ದರು

Please follow and like us:

Leave a Reply

Your email address will not be published. Required fields are marked *

Next Post

ಮಲಗಿದ್ದ ಗೆಳತಿಯ ಕಣ್ಣಿನ ರೆಪ್ಪೆ ಅರಳಿಸಿ ಮೊಬೈಲ್​ ಲಾಕ್​ ಓಪನ್​ ಮಾಡಿ 18 ಲಕ್ಷ ರೂ ದೋಚಿದ ಯುವಕ

Fri Dec 17 , 2021
ಫೇಸ್​ ಲಾಕ್​ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್​ ಮಾಡಿ ಮೊಬೈಲ್​ ಲಾಕ್​ ಓಪನ್ ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದೆ. ಫೋನಿನ ಸುರಕ್ಷತೆಗಾಗಿ ಫೇಸ್ ಲಾಕ್​ ಇಟ್ಟುಕೊಳ್ಳುವುದು ಸಾಮಾನ್ಯ . ಆದರೆ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುತ್ತದೆ . ಮೊಬೈಲ್​ಗೆ ಇಟ್ಟುಕೊಳ್ಳುವ ಲಾಕ್​ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತಹ ಘಟನೆ ಚೀನಾದಲ್ಲಿ ನಡೆದಿದೆ . ಫೇಸ್​ ಲಾಕ್​ ಇದ್ದರೂ […]

Advertisement

Wordpress Social Share Plugin powered by Ultimatelysocial