VAXIN:ಶೀಘ್ರವೇ ಮೆಡಿಕಲ್ ಶಾಪ್‌ಗಳಲ್ಲಿ ಸಿಗುತ್ವೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ;

ನವದೆಹಲಿ: ಭಾರತದಲ್ಲಿ ತುರ್ತು ಬಳಕೆಯ ದೃಢೀಕರಣ (EUA) ನೀಡಲಾದ ಕೋವಿಶೀಲ್ಡ್(Covishield) ಮತ್ತು ಕೋವ್ಯಾಕ್ಸಿನ್(Covaxin) ಎಂಬ ಎರಡು ಕೋವಿಡ್-19 ಲಸಿಕೆಗಳ ಬೆಲೆಯನ್ನ 150 ರೂ.ಗಳ ಹೆಚ್ಚುವರಿ ಸೇವಾ ಶುಲ್ಕದೊಂದಿಗೆ(Additional Service Charge) ಪ್ರತಿ ಡೋಸ್ʼಗೆ 275 ರೂ.ಗಳಿಗೆ ಮಿತಿಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅದ್ರಂತೆ, ಎರಡು ಕೋವಿಡ್-19 ಲಸಿಕೆಗಳು ಶೀಘ್ರದಲ್ಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ನಿಂದ ನಿಯಮಿತ ಮಾರುಕಟ್ಟೆ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ, ಲಸಿಕೆಗಳನ್ನು ಕೈಗೆಟುಕುವಂತೆ ಮಾಡಲು ಬೆಲೆಯನ್ನ ಮಿತಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ನಿರ್ದೇಶಿಸಲಾಗಿದೆ.

ಸದ್ಯಕ್ಕೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಬೆಲೆ ಪ್ರತಿ ಡೋಸ್ʼಗೆ ರೂ 1,200 ಮತ್ತು ಪ್ರತಿ ಡೋಸ್ʼಗೆ ರೂ.780 ಆಗಿದ್ದು, ಖಾಸಗಿ ಸೌಲಭ್ಯಗಳಲ್ಲಿ 150 ರೂ.ಗಳ ಸೇವಾ ಶುಲ್ಕವನ್ನ ಸೇರಿಸಲಾಗಿದೆ.

ಜನವರಿ 19 ರಂದು, ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ (CDSCO) ಕೋವಿಡ್-19ರ ವಿಷಯ ತಜ್ಞರ ಸಮಿತಿಯು ಕೆಲವು ಷರತ್ತುಗಳಿಗೆ ಒಳಪಟ್ಟು ವಯಸ್ಕರಲ್ಲಿ ಬಳಸಲು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ʼಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನ ನೀಡಲು ಶಿಫಾರಸು ಮಾಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ ಫುಡ್‌ ರಿಲೀಫ್

Wed Jan 26 , 2022
ಮಧ್ಯಾಹ್ನದ ಊಟದ ಕಾರ್ಯಕ್ರಮ ತರಗತಿಯ ಹಸಿವಿನ ಸರಪಳಿಯನ್ನು ಮುರಿಯಿರಿ ಮಧ್ಯಾಹ್ನದ ಊಟದ ಕಾರ್ಯಕ್ರಮ: INR 1,500 ಒಂದು ಮಗುವಿಗೆ ಶಾಲಾ ವರ್ಷದ ಊಟಕ್ಕೆ ಬೆಂಬಲ ನೀಡುತ್ತದೆ ಅಕ್ಷಯ ಪಾತ್ರ ಫೌಂಡೇಶನ್ ಅಪೌಷ್ಟಿಕತೆಯನ್ನು ಪರಿಹರಿಸಲು ಶ್ರಮಿಸುತ್ತದೆ ಮತ್ತು ಮಧ್ಯಾಹ್ನದ ಊಟ (MDM) ಕಾರ್ಯಕ್ರಮದ ಮೂಲಕ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣದ ಹಕ್ಕನ್ನು ಬೆಂಬಲಿಸುತ್ತದೆ. ಇದು ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ವಿದ್ಯಾರ್ಥಿಗಳು ಶಾಲಾ ಸಮಯದಲ್ಲಿ ಹಸಿವಿನಿಂದ ಬಳಲುತ್ತಿಲ್ಲ ಎಂದು […]

Advertisement

Wordpress Social Share Plugin powered by Ultimatelysocial