“ಸ್ಕಿಡ್‌ ಗೇಮ್”‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್

ಈಗಿನ ಪೀಳಿಗೆಯ ಯುವಕ ಹಾಗು ಯುವತಿಯರು “ಕೊರಿಯನ್‌ ಸೀರೀಸ್”‌ ಗೆ ಅಡಿಕ್ಟ್‌ ಆಗಿರೋದು ಕಾಮನ್‌ ಅಂತಾನೇ ಹೇಳಬಹುದು. ಇತ್ತೀಚಿಗೆ ಪ್ರಪಂಚದಾದ್ಯಂತ “ಸ್ಕಿಡ್‌ ಗೇಮ್‌” ಅನ್ನೋ ಕೊರಿಯನ್‌ ಸೀರೀಸ್‌ ಎಲ್ಲೆಡೆ ಸೌಂಡ್ ಮಾಡಿತ್ತು. ನೆಟ್‌ ಫ್ಲಿಕ್ಸ್‌ ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೋಟಿ ಕೋಟಿ ಬಾಚುವ ಮೂಲಕ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಇದೀಗ ಈ ಸೀರೀಸ್‌ ನ ಬಾಗ-೨ ಕೂಡ ಬಿಡುಗಡೆ ಆಗಲು ಎಲ್ಲಾ ಸಿದ್ದತೆಯನ್ನು ನಡೆಸಿದೆ. ಈ ವಿಷಯ ಕೇಳಿದ “ಸ್ಕಿಡ್‌ ಗೇಮ್”‌ ಅಭಿಮಾನಿಗಳು ಮಾತ್ರ ತ್ರಿಲ್‌ ಆಗಿದ್ದಾರೆ. ಮಕ್ಕಳಾಡೋ ಆಟಗಳು ಈ ಸೀರೀಸ್‌ ನ ಹೈಲೈಟ್ಸ್‌, ಪ್ರತಿಯೊಂದು ಗೇಮ್‌ ನಲ್ಲಿ ಗೆದ್ದೋನೆ ಕೋಟ್ಯಾಧಿಪತಿ. ಹಣಕ್ಕಾಗಿ ಒದ್ದಾಡೋ ವ್ಯಕ್ತಿಗಳೇ ಈ ಗೇಮಿನ ಟಾರ್ಗೆಟ್‌ ಕಂಟೆಸ್ಟೆಂಟ್ಸ್.‌ ಲೆಕ್ಕವಿಲ್ಲದಷ್ಟು ದುಡ್ಡನ್ನ ಸುರಿದು, ಗೇಮ್‌ ಆಡಿಸ್ತಾ ಸೋತವರನ್ನು ಸಾಯಿಸಿ ಮಜಾ ತೊಕೊಳೋನೆ ಒಬ್ಬ ಮಾಸ್ಕ್‌ ಹಿಂದೆ ಇರೋ ಅನಾಮಧ್ಯೇಯ ವ್ಯಕ್ತಿ. ಸೀಸನ್-‌೨ ಗಾಗಿ ಇಡೀ ಪ್ರಪಂಚಾನೆ ಕಾಯುತ್ತಾ ಕುಳಿತಿದೆ ಅಂದ್ರೂ ತಪ್ಪಾಗಲ್ಲಾ.

Please follow and like us:

Leave a Reply

Your email address will not be published. Required fields are marked *

Next Post

ಕಳೆದ ಸೆಪ್ಟೆಂಬರ್‌ನಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದ ಕೋವಿಡ್ ಪ್ರಕರಣಗಳು 1,000 ದಾಖಲಾಗಿದೆ...

Sun Jan 2 , 2022
ಕಳೆದ ಸೆಪ್ಟೆಂಬರ್‌ನಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದ ಕೋವಿಡ್ ಪ್ರಕರಣಗಳು 1,000 ದಾಟಿದೆ ಜನವರಿ 2ರಂದು  ರಾಜ್ಯ ಆರೋಗ್ಯ ಇಲಾಖೆ ದಾಖಲಿಸಿರುವ ಐದು ಸಾವುಗಳಲ್ಲಿ ಇಬ್ಬರು ಬೆಂಗಳೂರಿನವರು ಮತ್ತು ತುಮಕೂರು  ಮಂಡ್ಯ ಮತ್ತು ಉತ್ತರ ಕನ್ನಡದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ  ಕರ್ನಾಟಕ ಒಂದೇ ದಿನದ ಸ್ಪೈಕ್‌ನಲ್ಲಿ ಸಾವಿರದ ಗಡಿಯನ್ನು ಮೀರಿದೆ ರಾಜ್ಯದಲ್ಲಿ ಶನಿವಾರ 1,033 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 810 ಪ್ರಕರಣಗಳು ವರದಿಯಾಗಿವೆ […]

Advertisement

Wordpress Social Share Plugin powered by Ultimatelysocial