ಗೂಡ್‌ ನ್ಯೂಸ್‌, ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆ

ನವದೆಹಲಿ: ಕೋವಿಡ್‌-19 ಮೂರನೇ ಅಲೆ ಎದುರಿಸುತ್ತಿರುವ ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸೋಮವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್ ದೃಢಪಟ್ಟ 83,876 ಹೊಸ ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಯಲ್ಲಿ 1,99,054 ಮಂದಿ ಗುಣಮುಖರಾಗಿದ್ದಾರೆ ಹಾಗೂ 895 ಮಂದಿ ಕೋವಿಡ್‌ ಸಂಬಂಧಿತ ಕಾರಣಗಳಿಂದ ಮೃತಪಟ್ಟಿದ್ದು, ಈವರೆಗೂ 5,02,874 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4.22 ಕೋಟಿ ದಾಟಿದೆ.

ದೇಶದಲ್ಲಿ ಪ್ರಸ್ತುತ 11,08,938 ಸಕ್ರಿಯ ಪ್ರಕರಣಗಳಿದ್ದು, ಸಕ್ರಿಯ ಪ್ರಕರಣ ಪ್ರಮಾಣ ಶೇಕಡ 2.62ರಷ್ಟಿದೆ. ಕೋವಿಡ್‌ ದೃಢ ಪ್ರಮಾಣ ಶೇಕಡ 7.25ಕ್ಕೆ ಇಳಿಕೆಯಾಗಿದೆ ಹಾಗೂ ಚೇತರಿಕೆ ಪ್ರಮಾಣ ಶೇಕಡ 96.19ರಷ್ಟಿದೆ.

ದೇಶದಾದ್ಯಂತ ಒಟ್ಟು 169.63 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ (ಎಎಸ್‌ಐ)ಯಿಂದ ಗುರುತಿಸಿರುವ ಸ್ಮಾರಕಗಳು.

Mon Feb 7 , 2022
ದಾವಣಗೆರೆ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ (ಎಎಸ್‌ಐ)ಯಿಂದ ಗುರುತಿಸಿರುವ ಸ್ಮಾರಕಗಳು ಕೇವಲ ನಾಲ್ಕು. ಹರಿಹರದ ಹರಿಹರೇಶ್ವರ ದೇವಾಲಯ, ಚನ್ನಗಿರಿಯ ಚನ್ನಮ್ಮಾಜಿ ಕೋಟೆ, ಷಹಾಜಿ ಸಮಾಧಿ ಹಾಗೂ ಸಂತೇಬೆನ್ನೂರಿನ ಪುಷ್ಕರಿಣಿ ಹಾಗೂ ಮುಸಾಫಿರ್‌ ಖಾನ್‌.ಹರಿಹರದ ಹರಿಹರೇಶ್ವರ ದೇವಾಲಯ, ಚನ್ನಗಿರಿಯ ಚನ್ನಮ್ಮಾಜಿ ಕೋಟೆ, ಷಹಾಜಿ ಸಮಾಧಿ ಹಾಗೂ ಸಂತೇಬೆನ್ನೂರಿನ ಪುಷ್ಕರಿಣಿ ಹಾಗೂ ಮುಸಾಫಿರ್‌ ಖಾನ್‌.ಜಿಲ್ಲೆಯಲ್ಲಿ ನೂರಾರು ವರ್ಷಗಳಷ್ಟು ಹಳೆಯ ಸ್ಮಾರಕಗಳು ಹಲವು ಇವೆ. ಕೆಲವನ್ನು ತಜ್ಞರು, ಸ್ಥಳೀಯರು ಗುರುತಿಸಿದ್ದರೆ, ಇನ್ನೂ ಎಷ್ಟೋ ಬೆಳಕಿಗೆ […]

Advertisement

Wordpress Social Share Plugin powered by Ultimatelysocial