ರಾಜ್ಯದಲ್ಲಿ ಕೊರೊನಾ ಬ್ಲಾಸ್ಟ್‌ : ಬೆಂಗಳೂರಿನಲ್ಲಿ 6,812, ರಾಜ್ಯದಲ್ಲಿ 8,449 ಹೊಸ ಕೇಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 8,449 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ.

ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಅವರು, ಕಳೆದ 24 ಗಂಟೆಯಲ್ಲಿ 2,03,260 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರಲ್ಲಿ ಬೆಂಗಳೂರಿನಲ್ಲಿ 6,812 ಸೇರಿದಂತೆ ರಾಜ್ಯಾಧ್ಯಂತ 8,449 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ 8,449 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 4.15%ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

◾ರಾಜ್ಯದಲ್ಲಿ ಹೊಸ ಪ್ರಕರಣಗಳು:8,449
◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 6,812
◾ರಾಜ್ಯದಲ್ಲಿ ಧನಾತ್ಮಕತೆಯ ದರ: 4.15%
◾ಇಂದು ಹೊಸ ಒಮೈಕ್ರಾನ್ ಪ್ರಕರಣಗಳು: 107
◾ರಾಜ್ಯದಲ್ಲಿ ಒಟ್ಟು ಒಮೈಕ್ರಾನ್ ಪ್ರಕರಣಗಳು: 333
◾ಸಾವುಗಳು:04 (ಬೆಂಗಳೂರು- 03)
◾ಟೆಸ್ಟ್ʼಗಳು: 2,03,260

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾನು ಕರಣ್ ಕುಂದ್ರಾ ಅವರನ್ನು ಬೆಂಬಲಿಸಲಿದ್ದೇನೆ;

Fri Jan 7 , 2022
ಬಿಗ್ ಬಾಸ್ OTT ವಿನ್ನರ್ ದಿವ್ಯಾ ಅಗರ್ವಾಲ್ ವೀಕೆಂಡ್ ಕಾ ವಾರ್ ನಲ್ಲಿ ಬಿಗ್ ಬಾಸ್ 15 ರಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ಮನೆಗೆ ಹಿಂತಿರುಗಿ, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರ ಹೋರಾಟ ಮತ್ತು ಕಾರ್ಯಕ್ರಮಕ್ಕೆ ತಾನು ತರಲು ಉದ್ದೇಶಿಸಿರುವ ಬಗ್ಗೆ ಅವರು ETimes ಟಿವಿಯೊಂದಿಗೆ ಮಾತನಾಡಿದರು. ದಿವ್ಯಾ ಹಂಚಿಕೊಂಡಿದ್ದಾರೆ, “ಅದೊಂದು ಅದ್ಭುತ ಅನುಭವ ಏಕೆಂದರೆ ನಾನು ಅದನ್ನು ಅನುಭವಿಸಿದ್ದೇನೆ. ಮನೆಗೆ ಹಿಂತಿರುಗುವುದು ಸುಂದರವಾಗಿರುತ್ತದೆ. ಅದು […]

Advertisement

Wordpress Social Share Plugin powered by Ultimatelysocial