CRIME : ಅಮೂಲ್ ಹಾಲಿನ ಡಬ್ಬದಲ್ಲಿ ಹೊಸ ವರ್ಷದ ಪಾರ್ಟಿಗೆ ಡ್ರಗ್ಸ್!

ಅಮೂಲ್ ಹಾಲಿನ ಡಬ್ಬದಲ್ಲಿ ಹೊಸ ವರ್ಷದ ಪಾರ್ಟಿಗೆ ಡ್ರಗ್ಸ್!

ಹೊಸ ವರ್ಷದ ಪಾರ್ಟಿ ವೇಳೆ ಪೂರೈಸಲು ವಿದೇಶದಿಂದ ಅಮೂಲ್ ಹಾಲಿನ ಡಬ್ಬದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

ನ್ಯೂ ಇಯರ್ ಪಾರ್ಟಿಗೆಂದು ದೇಶ ವಿದೇಶಗಳಿಂದ ಸಿಂಥಟಿಕ್ ಡ್ರಗ್ಸ್ ಭಾರೀ ಪ್ರಮಾಣದಲ್ಲಿ ದೇಶದೊಳಗೆ ಬರುತ್ತಿದ್ದು, ಎಂಡಿಎಂಎ ಕ್ರಿಸ್ಟಲ್, ಗಾಂಜಾ ಸೇರಿದಂತೆ 10 ಲಕ್ಷ ರೂ.

ಮೌಲ್ಯದ ಡ್ರಗ್​ ಗಳನ್ನು ಗೋವಿಂದಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋವಿಂದಪುರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆ ಒಕೇಚುಕು ಎಂಬಾತನನ್ನು ಬಂಧಿಸಿದ್ದಾರೆ.

ಯಾರಿಗೂ ಆನುಮಾನ ಬರಬಾರದು ಎಂದು ಅಮೂಲ್ ಪ್ಯಾಕೆಟ್ ಮತ್ತು ಡಬ್ಬಗಳಲ್ಲಿ ಸಿಂಥಟಿಕ್ ಡ್ರಗ್ಸ್ ಗಳನ್ನು ಇರಿಸಿ ಸಾಗಿಸುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 260 ಎಂಡಿಎಂಎ ಕ್ರಿಸ್ಟಲ್ ಸೇರಿದಂತೆ 110 ಗ್ರಾಂ ಹೈ ಎಂಡ್ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಯನ್ನ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

MYSORE ; ಫೋನ್ ಮಾಡಿ ಕರೆಸಿಕೊಂಡು ಜೆಸಿಬಿ ಚಾಲಕನ ಭೀಕರ ಹತ್ಯೆ

Fri Dec 17 , 2021
ಜೆಸಿಬಿ ಚಾಲಕನನ್ನು ಫೋನ್ ಮಾಡಿ ಕರೆಸಿಕೊಂಡ ದುಷ್ಕರ್ಮಿಗಳು ಅಟ್ಟಾಡಿಸಿ ಇರಿದಿದ್ದೂ ಅಲ್ಲದೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ನಗರದ ಹೊರವಲಯದ ರಮ್ಮನಹಳ್ಳಿಯಲ್ಲಿ ಅರ್ಜುನ್ (24) ಕೊಲೆಯಾದ ಯುವಕ. ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ ನನ್ನು ಕಳೆದ ರಾತ್ರಿ ಫೋನ್ ಮಾಡಿ ಕರೆಸಿಕೊಂಡ ಪರಿಚಯಿಸ್ಥರೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಚಾಕುವಿನಿಂದ ಮನಬಂದಂತೆ ಚುಚ್ಚಿ ಅಟ್ಟಾಡಿಸಿ ಕೊಲೆಗೆ ಯತ್ನಿಸಿರುವ ದುಷ್ಕರ್ಮಿಗಳು, ಕೊನೆಗೆ […]

Advertisement

Wordpress Social Share Plugin powered by Ultimatelysocial