ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!.

 

ಕಲರ್ಸ್ ಕನ್ನಡವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.ಧಾರಾವಾಹಿಯಲ್ಲಿ ಲಕ್ಷ್ಮಿ ಮದುವೆ ನಡೆಯುತ್ತಿದೆ. ಲಕ್ಷ್ಮಿಗೆ ಬಳೆ ತೊಡಿಸುವ ಶಾಸ್ತ್ರ ನಡೆಯುತ್ತಿದೆ. ಆದ್ರೆ ಈ ಮದುವೆ ವೈಷ್ಣವ್‍ಗೆ ಇಷ್ಟ ಇಲ್ಲ. ಆದ್ರೂ ಅಮ್ಮನ ಬಲವಂತಕ್ಕೆ ಈ ಶಾಸ್ತ್ರಗಳನ್ನು ಮಾಡುತ್ತಿದ್ದಾನೆ.ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಆಗಿ ನಟಿಸಿದ್ದ ರಶ್ಮಿ ಪ್ರಭಾಕರ್ ಅವರು ಬಂದಿದ್ದಾರೆ. ಲಕ್ಷ್ಮಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.ಇನ್ನೂ ಅದೇ ಧಾರಾವಾಹಿಯ ಗೊಂಬೆ ಖ್ಯಾತಿಯ ನೇಹಾ ಗೌಡ ಅವರು ಲಕ್ಷ್ಮಿ ಬಳೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಲಕ್ಷ್ಮಿಗೆ ಬಳೆ ತೊಡಿಸಿ ಖುಷಿ ಪಟ್ಟಿದ್ದಾರೆ.ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಅಕ್ಕ ಭಾಗ್ಯ ತನ್ನ ತಂಗಿ ಲಕ್ಷ್ಮಿಗೆ ಶ್ರೀರಾಮನಂತ ಹುಡುಗ ಬೇಕು ಎಂದು ಗಂಡ ಹುಡುಕುತ್ತಿದ್ದಳು. ಅಂತೆಯೇ ವೈಷ್ಣವ್ ಸಿಕ್ಕಿದ್ದಾನೆ. ಲಕ್ಷ್ಮಿಯೂ ಖುಷಿಯಾಗಿದ್ದಾಳೆ.ಲಕ್ಷ್ಮಿ ಮದುವೆ ಸಂಭ್ರಮದಲ್ಲಿ ಇತರೆ ಧಾರಾವಾಹಿ ಕಲಾವಿದರು ಸಹ ಭಾಗಿಯಾಗ್ತಾ ಇದ್ದಾರೆ. ಅದೇ ರೀತಿ, ನೇಹಾಗೌಡ ಮತ್ತು ರಶ್ಮಿ ಪ್ರಭಾಕರ್ ಬಳೆ ಶಾಸ್ತ್ರಕ್ಕೆಬಂದಿದ್ದಾರೆ. ಲಕ್ಷ್ಮಿಯನ್ನ ಕರೆದುಕೊಂಡು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಲಕ್ಷ್ಮಿ ಸಹ ಖುಷಿಯಾಗಿದ್ದರು. ಎಲ್ಲರೂ ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ.ಆದ್ರೆ ವೈಷ್ಣವ್ ಮಾತ್ರ ಮದುವೆ ಬೇಡ ಎನ್ನುತ್ತಿದ್ದು, ಮದುವೆ ಆಗುತ್ತೋ, ಇಲ್ವೋ ಎನ್ನುವ ಗೊಂದಲಗಳು ಹೆಚ್ಚಾಗಿವೆ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ.

Fri Mar 3 , 2023
   ಕರ್ನಾಟಕದ ಪದವಿಪೂರ್ವ ಕಾಲೇಜು ಪರೀಕ್ಷೆಗೆ ಹಾಜರಾಗುವಾಗ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಹೋಳಿ ಹಬ್ಬದ ನಂತರ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.ಮಾರ್ಚ್ 9ರಿಂದ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಹಾಲ್‌ಗೆ ಹಿಜಾಬ್ ಧರಿಸಲು ಅನುಮತಿ ಇಲ್ಲದೇ ಇರೋದ್ರಿಂದ ಅನುಮತಿ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಸುಪ್ರೀಂಗೆ ಮನವಿ ಸಲ್ಲಿಸಿದ್ದಾರೆ.ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, […]

Advertisement

Wordpress Social Share Plugin powered by Ultimatelysocial