ದಯವಿಟ್ಟು ಶಿವಮೊಗ್ಗ ಜನತೆ ಶಾಂತಿ ಕಾಪಾಡಿ, ಮುಲಾಜಿಲ್ಲದೆ ಆರೋಪಿಗಳನ್ನ ಬಂಧಿಸ್ತೀವಿ: ಸಿಎಂ ಮನವಿ

 

ಬೆಂಗಳೂರು: ದಯವಿಟ್ಟು ಶಿವಮೊಗ್ಗದ ಜನತೆ ಯಾವುದೇ ಉದ್ವೇಗ, ಪ್ರಚೋದನೆಗೆ ಒಳಗಾಗದೇ ಶಾಂತಿ ಕಾಪಾಡಬೇಕು. ನಿನ್ನೆ(ಭಾನುವಾರ) ರಾತ್ರಿ ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿರುವುದು ಮನಸ್ಸಿಗೆ ಬೇಸರವಾಗಿದೆ. ತನಿಖೆ ಈಗಾಗಲೇ ಪ್ರಾರಂಭವಾಗಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ.ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸಲಾಗುವುದು. ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶಿವಮೊಗ್ಗ ಜನತೆಯೂ ಸಹಕರಿಸಬೇಕು. ಹರ್ಷ ಅವರ ಹತ್ಯೆ ಕೇಸ್​ ಅನ್ನು ನ್ಯಾಯಸಮ್ಮತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ.ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿಯಾದ ಡಿಜಿಪಿ ಪ್ರವೀಣ್​ ಸೂದ್​ ಅವರಿಗೆ ಆರೋಪಿಗಳನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಿ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಂದೋಬಸ್ತ್​ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ವಿಶಾಖಪಟ್ಟಣಂನಲ್ಲಿ ನೌಕಾ ನೌಕಾಪಡೆಯ ಪರಿಶೀಲನೆ!

Mon Feb 21 , 2022
ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 60 ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಮತ್ತು 55 ವಿಮಾನಗಳನ್ನು ಒಳಗೊಂಡಿರುವ ನೌಕಾ ಪಡೆಯನ್ನು ಪರಿಶೀಲಿಸಲಿದ್ದಾರೆ. ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ರಾಷ್ಟ್ರಪತಿಗಳ ಫ್ಲೀಟ್ ರಿವ್ಯೂ, ವಿಸ್ಮಯಕಾರಿ ಮತ್ತು ಬಹುನಿರೀಕ್ಷಿತ ಕಾರ್ಯಕ್ರಮವನ್ನು ಸೋಮವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಸಲಾಗುವುದು. ಇದು ಹನ್ನೆರಡನೇ ಫ್ಲೀಟ್ ರಿವ್ಯೂ ಆಗಿರುತ್ತದೆ ಮತ್ತು ಭಾರತದ ಸ್ವಾತಂತ್ರ್ಯದ […]

Related posts

Advertisement

Wordpress Social Share Plugin powered by Ultimatelysocial