‘ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾನಿಗೆ ಕಿವಿ ಕೇಳೋದಾ?’;

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಸರಿ ಕಲಿಗಳು ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳಲು ವಿಜಯಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಆದ್ರೆ ಇದೇ ಯಾತ್ರೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ವಿವಾದದ ಕಿಡಿ ಹೊತ್ತಿಸಿದ್ದಾರೆ. ಆಜಾನ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಯಾವಾಗಲೂ ಒಂದಿಲ್ಲೊಂದು ಹೇಳಿಕೆ ಕೊಡ್ತಾನೋ ಅಥವಾ ತಮ್ಮ ನಡೆಯಿಂದಾನೋ ಚರ್ಚೆಗೆ ಗ್ರಾಸವಾಗೋ. ವಿವಾದಗಳನ್ನು ಸೃಷ್ಟಿಸೋ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಮತ್ತೊಂದು ಕಿಡಿ ಹೊತ್ತಿಸಿದ್ದಾರೆ.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕಡಲನಗರಿ ಹಿಂದುತ್ವದ ಪ್ರಯೋಗಶಾಲೆ ಅಂತಾನೇ ಕರೆಸಿಕೊಳ್ಳುವ ಮಂಗಳೂರಲ್ಲಿ ಸದ್ಯ ಕೇಸರಿ ಪತಾಕೆಗಳು ರಾರಾಜಿಸಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಮಲ ಕಲಿಗಳು ಮತಬೇಟೆಗಾಗಿ ಮಂಗಳೂರಿನಲ್ಲಿ ವಿಜಯಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಆದ್ರೆ ಈ ಕಾವೂರಿನ ಶಾಂತಿನಗರದಲ್ಲಿ ನಡೆದ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಆಡಿದ ಮಾತೊಂದು ಸದ್ಯ ವಿವಾದದ ಕಿಡಿ ಹೊತ್ತಿಸಿದೆ. ಭಾಷಣ ವೇಳೆ ಮಸೀದಿಯ ಆಜಾನ್​ಗೆ ಈಶ್ವರಪ್ಪ ಅಸಮಾಧಾನ

ಕಾರ್ಯಕ್ರಮ ಉದ್ದೇಶಿಸಿ ಈಶ್ವರಪ್ಪ ಮಾತನಾಡುವಾಗ ಆಜಾನ್ ಕೇಳಿ ಬಂದಿದೆ. ಇದರಿಂದ ಸಿಡಿಮಿಡಿಯಾದ ಈಶ್ವರಪ್ಪ, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಅಂತ ಹೇಳಿದ್ದಾರೆ.

ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಮೈಕ್​​​ನಲ್ಲಿ ಕೂಗಿದ್ರೆ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ‌. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂಥಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡಿದುಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ ಅಂತ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಅಂತಾನೂ ಹೇಳಿದ್ದಾರೆ.

‘ಇದೊಂದು ತಲೆನೋವು’ ನಿಮ್ಮ ಊರಲ್ಲಿರುವ ರಸ್ತೆ, ಕಟ್ಟಡ ಕಟ್ಟಲು, ಮೋರಿ ಮಾಡೋಕೆ ಸ್ವಾತಂತ್ರ್ಯ ತಂದ್ರಾ?. ನಾನು ಎಲ್ಲಿ ಹೋದರು ಇದೊಂದು ತಲೆ ನೋವು ನನಗೆ. ಸುಪ್ರೀಂ ಕೋರ್ಟ್​ ಜಡ್ಜ್​ಮೆಂಟ್​ ಇದೆ. ಇತ್ತಲ್ಲ ನಾಳೆ ಇದು ಖತಂ ಆಗುತ್ತೆ. ಇದರಲ್ಲಿ ಅನುಮಾನ ಬೇಡ. ಸಭೆ, ಸಮಾರಂಭ ನಡೆಯುತ್ತಿರುವ ವೇಳೆ ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಎಲ್ಲ ಧರ್ಮಕ್ಕು ಗೌರವ ಕೊಡಿ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

ಮೈಕ್​ ಇಟ್ಟುಕೊಂಡು ಕೂಗಿದರೆ ಅಲ್ಲಾಗೆ ಕಿವಿ ಕೇಳೋದು. ನಮ್ಮ ದೇವಸ್ಥಾನದಲ್ಲು ಪೂಜೆ ಮಾಡುತ್ತೇವೆ. ಅಲ್ಲು ಶ್ಲೋಕ ಹೇಳುತ್ತೇವೆ. ಭಜನೆ ಮಾಡುತ್ತೇವೆ. ಅವರಿಗಿಂತ ಜಾಸ್ತಿ ಭಕ್ತಿ ನಮ್ಮದು. ಪ್ರಪಂಚದಲ್ಲಿ ಧರ್ಮವನ್ನು ಉಳಿಸುತ್ತಿರುವ ದೇಶ ಭಾರತ. ಆದ್ರೆ ಈ ರೀತಿ ಮೈಕ್​ನಲ್ಲಿ ಕೂಗಿ ಹೇಳಿದ್ರೆ ಮಾತ್ರ ಅಲ್ಲಾಗೆ ಕಿವುಡ ಅಂತ ಹೇಳಬೇಕು ಆಗುತ್ತೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರ ಆಗಬೇಕು.

ಕೆ.ಎಸ್​ ಈಶ್ವರಪ್ಪ, ಮಾಜಿ ಸಚಿವ

ಪ್ರಧಾನಿ ಮೋದಿ ಎಲ್ಲಾ ಧರ್ಮಗಳನ್ನೂ ಗೌರವಿಸಿ ಅಂತ ಹೇಳ್ತಾರೆ. ಆದ್ರೆ ಚುನಾವಣೆ ಸಮೀಪಿಸುತ್ತಿದ್ದಂತೆ ಈಶ್ವರಪ್ಪ ಮಾತ್ರ ಒಂದು ಧರ್ಮದ ಬಗ್ಗೆ ವಿವಾದಾತ್ಮ ಹೇಳಿಕೆ ಕೊಟ್ಟಿದ್ದಾರೆ. ಇದು ಸಮಾಜದಲ್ಲಿ 2 ಧರ್ಮಗಳ ನಡುವೆ ಕೋಮು ಸೌಹಾರ್ದ ಹಾಳು ಮಾಡಿದ್ರೆ ಹಾಳಾಗೋದು ಜನಸಾಮಾನ್ಯನೇ ಹೊರತು ಜನಪ್ರತಿನಿಧಿಗಳಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಳ್ಳೆಯ ಪೊಲೀಸ್ ಸ್ಟೋರಿ ಫೀಲ್ ಕೊಡುವ ಸಿನಿಮಾ ‘ಹೊಯ್ಸಳ’

Mon Mar 13 , 2023
ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ‘ಹೊಯ್ಸಳ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್, ಹಾಡುಗಳಿಂದ ಪ್ರೇಕ್ಷಕರ ಹೃದಯ ಗೆದ್ದಿರುವ ‘ಹೊಯ್ಸಳ’ ತಂಡದಿಂದ ಸದ್ಯದಲ್ಲಿಯೇ ಟ್ರೇಲರ್ ಕೂಡ ಬಿಡುಗಡೆ ಆಗಲಿದೆ. ಚಿತ್ರದ ಪ್ರಮೋಷನ್ ಜೋರಾಗಿದ್ದು, ನಾಯಕ ಡಾಲಿ ಧನಂಜಯ್ ಉತ್ತರ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾರೆ. ಇತ್ತೀಚೆಗೆ ನಡಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧನಂಜಯ್ […]

Advertisement

Wordpress Social Share Plugin powered by Ultimatelysocial