ಹಸನಲ್ ಬೊಲಿಕಿಯಾ:ಈ ʼಸುಲ್ತಾನʼನ ಬಳಿಯಿವೆ 600 ರೋಲ್ಸ್-ರಾಯ್ಸ್;

ಜಗತ್ತಿನಲ್ಲಿರುವ ಆನೇಕನೇಕ ಶ್ರೀಮಂತರಿದ್ದಾರೆ. ಅವ್ರಲ್ಲಿ ಈ ಸುಲ್ತಾನನು ಒಬ್ಬ. ಈತನ ಬಳಿ ಒಂದಲ್ಲಾ ಎರಡಲ್ಲ ಸರಿಸುಮಾರು 7,000 ಕಾರುಗಳಿವೆ. ಈ ಕಾರು ಸಂಗ್ರಹದಲ್ಲಿ ರೋಲ್ಸ್ ರಾಯ್ಸ್, ಮರ್ಸಿಡಿಸ್, ಫೆರಾರಿ, ಬೆಂಟ್ಲಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಸೇರಿವೆ.

ವಿಶ್ವದ ಶ್ರೀಮಂತ ಸುಲ್ತಾನ್..!
7,000 ಕಾರುಗಳನ್ನ ಹೊಂದಿರುವ ಅಗಾಧ ಆಸ್ತಿಯ ಮಾಲೀಕನ ಹೆಸರು ಹಸ್ಸನಲ್ ಬೊಲ್ಕಿಯಾ ಬ್ರೂನೈ ಅಂತಾ. ಬ್ರೂನೈಯ ದ್ವೀಪದ ಪ್ರಧಾನಮಂತ್ರಿ. ಅವರನ್ನ ವಿಶ್ವದ ಶ್ರೀಮಂತ ಆಡಳಿತಗಾರರಲ್ಲಿ ಒಬ್ಬರಾಗಿ ಪರಿಗಣಿಸಲಾಗುತ್ತದೆ. 50 ವರ್ಷಗಳಿಗೂ ಹೆಚ್ಚು ಸಮಯದಿಂದ ಆಳ್ವಿಕೆ ನಡೆಸುತ್ತಿದ್ದು, 1980ರ ಹೊತ್ತಿಗೆ, ಹಸ್ಸನಲ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.

ಕೆಲವು ಸಮಯದ ಹಿಂದೆ, ಅವರು ತಮ್ಮ ಆಡಳಿತದ 50ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದು, ಇದ್ರಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅಂದ್ಹಾಗೆ, ಬ್ರೂನೈ ಕುಟುಂಬವು ಕಳೆದ 600 ವರ್ಷಗಳಿಂದ ದ್ವೀಪವನ್ನ ಆಳ್ತಿದ್ದು, ಹಸ್ಸನಲ್‌ ಅವ್ರಿಗೆ 21 ವರ್ಷದವರಾಗಿದ್ದಾಗ, 1967ರಲ್ಲಿ ಸಿಂಹಾಸನದ ಮೇಲೆ ಏರಿಸಲಾಯಿತು.

ಸುಲ್ತಾನ್ʼನ ಕಾರು ಸಂಗ್ರಹ ಮತ್ತು ವಿಮಾನ..!
ಹಸ್ಸನಲ್ ಬೊಲ್ಕಿಯಾ ಅವ್ರ ಕಾರು ಸಂಗ್ರಹವು 7,000 ಕಾರುಗಳನ್ನ ಒಳಗೊಂಡಿದೆ ಎಂದು ಅನೇಕ ವರದಿಗಳು ಸೂಚಿಸುತ್ತವೆ. ಇದರಲ್ಲಿ 600ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570ಕ್ಕೂ ಹೆಚ್ಚು ಮರ್ಸಿಡಿಸ್-ಬೆಂಜ್, 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್1ಎಸ್, ಪೋರ್ಷೆಯಂತಹ ಹಲವಾರು ಐಷಾರಾಮಿ ಕಾರುಗಳು ಸೇರಿವೆ. ಅವರ ಬಳಿ ಚಿನ್ನದ ಪದರವನ್ನ ಹೊಂದಿರುವ ಕಾರು ಸಹ ಇದೆ. ಅವರು ಈ ಕಾರಿನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.

ಒಂದು ವರದಿಯ ಪ್ರಕಾರ, ಹಸ್ಸನಲ್ ಬೊಲ್ಕಿಯಾ ಹಲವಾರು ಖಾಸಗಿ ಜೆಟ್ʼಗಳಾದ ಬೋಯಿಂಗ್ 747-400, ಬೋಯಿಂಗ್ 767-200 ಮತ್ತು ಏರ್ ಬಸ್ ಎ340-200 ಐಷಾರಾಮಿ ಸೌಲಭ್ಯಗಳನ್ನ ಹೊಂದಿದೆ. ಇನ್ನವ್ರ ಬೋಯಿಂಗ್ 747-400 ಜೆಟ್ ಹಡಗು ಚಿನ್ನದ ಪದರ ಹೊಂದಿದೆ. ಇದು ಲಿವಿಂಗ್ ರೂಮ್ ಮತ್ತು ಮಲಗುವ ಕೋಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನ ಸಹ ಹೊಂದಿದೆ.

ಸುಲ್ತಾನನ ಒಟ್ಟು ಆಸ್ತಿ ಮತ್ತು ಅರಮನೆ..!
ವರದಿಯೊಂದರ ಪ್ರಕಾರ ಹಸ್ಸನಲ್ ಬೊಲ್ಕಿಯಾ 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವು ಅವರ ಆದಾಯದ ಅತಿದೊಡ್ಡ ಮೂಲವಾಗಿದೆ. ನಾವು ಅವರ ರಾಜಮನೆತನದ ಬಗ್ಗೆ ಮಾತನಾಡೋದಾದ್ರೆ, ಅವರ ಅರಮನೆಯ ಹೆಸರು ‘ಇಸ್ತಾನಾ ನೂರುಲ್ ಇಮಾನ್ ಅರಮನೆ’ ಮತ್ತು ಅದರ ಮೌಲ್ಯ 2550ಕೋಟಿ ರೂ. ಎಂದು ಹೇಳಲಾಗುತ್ತದೆ.

ಅವರು ವಾಸಿಸುವ ಅರಮನೆ ಬಹುಭಾಗ ಚಿನ್ನದಿಂದ ನಿರ್ಮಿಸಲ್ಪಟ್ಟಿದ್ದು, ಇದನ್ನ 1984ರಲ್ಲಿ ನಿರ್ಮಿಸಲಾಯಿತು. ಇದು 2 ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ ಹರಡಿದೆ. ಈ ಅರಮನೆಯ ಗುಮ್ಮಟವು 22 ಕ್ಯಾರೆಟ್ ಚಿನ್ನದಿಂದ ಕೂಡಿದೆ ಮತ್ತು 1700ಕ್ಕೂ ಹೆಚ್ಚು ಕೋಣೆಗಳು, 257 ಸ್ನಾನ ಗೃಹಗಳು ಮತ್ತು ಐದು ಈಜುಕೊಳಗಳನ್ನ ಹೊಂದಿದೆ. ಅರಮನೆಯು 110 ಗ್ಯಾರೇಜ್ʼಗಳು ಮತ್ತು ಲಾಯಗಳನ್ನ ಹೊಂದಿದ್ದು, 200 ಕುದುರೆಗಳಿಗೆ ಹವಾನಿಯಂತ್ರಕಗಳನ್ನ ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

D.RAVI:ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ;

Sat Jan 29 , 2022
ಬೆಂಗಳೂರು: ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ತಡೆಹಿಡಿದಿದೆ. ಜನವರಿ 27ರಂದು ಸರ್ಕಾರ ರವಿ ಚನ್ನಣ್ಣವರ್​ ಸೇರಿದಂತೆ 9 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿಯಾಗಿರುವ ರವಿ ಚನ್ನಣ್ಣವರ್​ ಅವರನ್ನು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಇದೀಗ ಸರ್ಕಾರ ವರ್ಗಾವಣೆ ಆದೇಶವನ್ನು ಏಕಾಏಕಿ ತಡೆಹಿಡಿದಿದ್ದು, ಈ ಬಗ್ಗೆ […]

Advertisement

Wordpress Social Share Plugin powered by Ultimatelysocial