ಪ್ರಮೋದ್ ಮುತಾಲಿಕ್ ಬೀದರ್ ಭೇಟಿಗೆ ನಿರ್ಬಂಧ ಹೇರಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ :

ಬೀದರ್ : ಜೂನ್ 12 ರಂದು ಮಠಾಧೀಶರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೀದರ್ ಗೆ ಬರಬೇಕಿದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಬೀದರ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಕುರಿತು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಅಂದೋಲ ಶ್ರೀ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೀದರ್ ಜಿಲ್ಲಾಡಳಿತ ಎಷ್ಟೇ ನಿರ್ಬಂಧ ಹೇರಿದರೂ ಕೂಡಾ ಜೂನ್ 12 ಕ್ಕೆ ಕಲ್ಯಾಣದಲ್ಲಿ ನಡಯುವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮಕ್ಕೆ ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗಿಯಾದರೆ ಕೋಮು ಸೌಹಾರ್ದ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ನೆಪವನ್ನು ಹೇಳಿ ಜಿಲ್ಲಾಡಳಿತ ನಮ್ಮನ್ನು ಬ್ಯಾನ್ ಮಾಡಿದೆ. ಇದು ಖಂಡನೀಯವಾಗಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ ಇಂದು ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೂನ್ 12 ರಂದುಉ ಬಸವಕಲ್ಯಾಣದ ಘನ ರುದ್ರಮುನಿ ಮಠಾಧೀಶರ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗುವುದು ನಿಗದಿಯಾಗಿತ್ತು. ಆದರೆ ಕೋಮು ಸೌಹರ್ದತೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಗೆ ಬೀದರ್ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೂರು ಜನ್ಮವೆತ್ತಿ ಬಂದ್ರು JDS ಮುಗಿಸೋದಕ್ಕೆ ಆಗಲ್ಲ - ಮಾಜಿ ಸಿಎಂHDK

Sat Jun 4 , 2022
ಹುಬ್ಬಳ್ಳಿ: ಯಾರಿಂದಲೂ ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ. ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ( JDS Party ) ಮುಗಿಸೋದಕ್ಕೂ ಆಗೋದಿಲ್ಲ. ಮೂಲೆ ಗುಂಪು ಆಗೋದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ   ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಒಂದೇ ಕಲ್ಲಿನಿಂದ 2 ಹಕ್ಕಿ ಹೊಡೆದಿದ್ದಾರೆ ಎಂಬುದಾಗಿ ಭಾವಿಸಿರಬಹುದು. ಆದ್ರೇ.. ಅದು ಸಾಧ್ಯವಾಗಿಲ್ಲ. ಅವರ ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ. ಅದು ಜೂನ್ 10ರ […]

Advertisement

Wordpress Social Share Plugin powered by Ultimatelysocial