ಈ ಹಣ್ಣಿನ ಮಹತ್ವ ಅಪರಿಮಿತ ????

ನೋಡೋಕೆ ಮುಳ್ಳುಮುಳ್ಳಿನಂತೆ ಇರುತ್ತೆ. ಒಳಗಡೆಯ ತಿರುಳನ್ನು ತಿನ್ನಬೇಕು.. ಹಣ್ಣನ್ನ ಎರಡು ಭಾಗ ಮಾಡಿದ್ರೆ ಒಳಗಡೆಯ ತಿರುಳು ನೋಡೋಕೆ ಸೂಪರ್ ಆಗಿರುತ್ತೆ. ನೋಡೋಕೆ ಮಾತ್ರವಲ್ಲ ತಿನ್ನೋಕು ಸಖತ್ ಟೇಸ್ಟಿ.

ಡ್ರ್ಯಾಗನ್‌ ಫ್ರೂಟ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌ ಇರುತ್ತೆ. ದೇಹ ತೂಕ ಇಳಿಸ್ಬೇಕು ಅಂದುಕೊಂಡಿರುವವರಿಗೆ ಡಯಟ್ ಮಾಡಲು ಹೇಳಿ ಮಾಡಿಸಿದ ಹಣ್ಣಿದು.. ಅಷ್ಟೇ ಅಲ್ಲ ಆರೋಗ್ಯಯುತವಾಗಿ ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿ. ಅದೇ ಕಾರಣಕ್ಕೆ ಚೆರ್ರಿ ಹಣ್ಣಿಗಿಂತ ಇದು ಬೆಟರ್ ಆಗಿರುವ ಹಣ್ಣು ಅಂತ ಹೇಳಲಾಗುತ್ತೆ.
ಇತ್ತೀಚೆಗೆ ಹೆಚ್ಚಿನವ್ರಿರಲ್ಲಿ ಹೃದಯದ ಸಮಸ್ಯೆ ಕಾಡುತ್ತೆ. ಲೋ ಬಿಪಿ, ಹೈ ಬಿಪಿಯಂತ ಸಮಸ್ಯೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಈ ಡ್ರ್ಯಾಗನ್‌ ಫ್ರೂಟಿಗೊಂದು ಸೂಪರ್‌ ಪವರ್‌ ಇದೆ. ಅದೇ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ತೆಗೆದುಹಾಕುವ ಸಾಮರ್ಥ್ಯ.. ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ಅಂದ್ರೆ ಕರಗದ ಕೊಬ್ಬಿನ ಪ್ರಮಾಣವನ್ನು ತಗ್ಗಿಸಿ ಹಾರ್ಟ್‌ ಕಂಡೀಷನ್‌ ಅಂದ್ರೆ ಹೃದಯದ ಸ್ವಾಸ್ಥ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತೆ ಡ್ರ್ಯಾಗನ್ ಪ್ರೂಟ್
ನಿಮ್ಮ ಸ್ಕ್ಯಾಲ್ಪ್‌ ಗೆ ಡ್ರ್ಯಾಗನ್‌ ಫ್ರೂಟ್‌ನಿಂದ ತಯಾರಿಸಿದ ಜ್ಯೂಸ್‌ನ್ನು ಆಗಾಗ ಅಪ್ಲೈ ಮಾಡಿಕೊಳ್ಳೋದ್ರಿಂದ ನಿಮ್ಮ ಕೂದಲು ಕಪ್ಪಾಗಿ , ಶೈನಿಯಾಗಿ ಇರುತ್ತೆ. ಇದೊಂದು ಬೆಸ್ಟ್‌ ಕಂಡೀಷನರ್‌ ಆಗಿ ನಿಮ್ಮ ಕೂದಲಿಗೆ ವರ್ಕ್ ಮಾಡುತ್ತೆ. ಕಲರಿಂಗ್ ಮಾಡಿ ಕೆಮಿಕಲ್್‌ಮಯಗೊಂಡಿರುವ ಕೂದಲನ್ನು ಮತ್ತೆ ಪುನಃ ಯಥಾಸ್ಥಿತಿಗೆ ಮರಳುವಂತೆ ಮಾಡಲು ಕೂಡ ಈ ಡ್ರ್ಯಾಗನ್‌ ಫ್ರೂಟ್ ಸಹಾಯ ಮಾಡಲಿದೆ… ಕೂದಲು ಚೆನ್ನಾಗಿ ಉಸಿರಾಡುವಂತೆ ಮಾಡಿ ಹೆಲ್ತಿಯಾಗಿರುವಂತೆ ನೋಡಿಕೊಳ್ಳುತ್ತೆ.
ಡ್ರ್ಯಾಗನ್‌ ಫ್ರೂಟ್ ಮತ್ತು ಸೌತೆ ಮತ್ತು ಒಂದೆರಡು ಹನಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ನಿಮ್ಮ ಚರ್ಮದಲ್ಲಿ ಸನ್‌ ಬರ್ನ್‌ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ.. ನಿಮ್ಮ ಚರ್ಮವನ್ನು ಮಾಯ್ಚರೈಸ್ ಮಾಡಿ. ಸನ್ ಬರ್ನ್ ಆಗಿರುವ ಜಾಗವನ್ನು ಸರಿಪಡಿಸುವ ಸಾಮರ್ಥ್ಯ ಡ್ರ್ಯಾಗನ್‌ ಫ್ರೂಟ್‌ಗಿದೆ.. ಒಟ್ಟಿನಲ್ಲಿ ವಿದೇಶದ ಹಣ್ಣಾದ್ರೂ ತಿನ್ನಲು ಟೇಸ್ಟಿಯಾಗಿರುವ ಈ ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೂಜಾ ಹೆಗಡೆ ಹಾಟ್‌ ವರ್ಕ್‌ಔಟ್‌ ವಿಡಿಯೋ | Pooja Hegde | Pooja Hegde Workl Out Vidoe | Speed News |

Wed Jan 12 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial