ದ್ರಾವಿಡ್, ಗಂಗೂಲಿ ಮೇಲೆ ಅಸಮಾಧಾನ ಹೊರಹಾಕಿ ಸಂಕಷ್ಟಕ್ಕೀಡಾದ ವೃದ್ಧಿಮಾನ್ ಸಹಾ

ಮುಂಬೈ: ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿ ವಿಕೆಟ್ ಕೀಪರ್ ವೃದ್ಧಿ ಮಾನ್ ಸಹಾ ಸಂಕಷ್ಟಕ್ಕೀಡಾಗಿದ್ದಾರೆ.
ತಮ್ಮನ್ನು ತಂಡದಿಂದ ಅವಗಣಿಸಿರುವುದಕ್ಕೆ ದ್ರಾವಿಡ್ ಮತ್ತು ಗಂಗೂಲಿ ವಿರುದ್ಧ ಸಹಾ ಅಸಮಾಧಾನ ಹೊರಹಾಕಿದ್ದರು. ದ್ರಾವಿಡ್ ಪರೋಕ್ಷವಾಗಿ ನಿವೃತ್ತಿಗೆ ಸೂಚಿಸಿದ್ದರು. ಗಂಗೂಲಿ ನನ್ನ ಕೈ ಬಿಟ್ಟರು ಎಂದು ಸಹಾ ನೇರ ಆರೋಪ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಸಹಾಗೆ ವಿವರಣೆ ಕೋರಿದೆ. ಇದು ಬಿಸಿಸಿಐ ಕೇಂದ್ರ ಗುತ್ತಿಗೆ ನಿಯಮಗಳ ಉಲ್ಲಂಘನೆಯಾಗಿದೆ. ಈ ನಿಯಮದ ಪ್ರಕಾರ ಆಟಗಾರರು ಬಿಸಿಸಿಐ ಯಾವುದೇ ನಿರ್ಧಾರವನ್ನು, ನಿಯಮಗಳನ್ನು, ಮ್ಯಾನೇಜ್ ಮೆಂಟ್ ಬಗ್ಗೆಅಥವಾ ಪಂದ್ಯದ ಬಗ್ಗೆ ಮಾಧ್ಯಮಗಳ ಮುಂದೆ ದೂರುವಂತಿಲ್ಲ. ಆದರೆ ಸಹಾ ಈ ನಿಯಮವನ್ನು ಮೀರಿರುವುದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RUSSIA:30 ವರ್ಷಗಳ ನಂತರ ವ್ಲಾಡಿಮಿರ್ ಪುಟಿನ್ ಪತ್ನಿಯಿಂದ ಬೇರ್ಪಟ್ಟರು!

Fri Feb 25 , 2022
ಪುಟಿನ್ ಅವರ ಪ್ರಸ್ತುತ ಸಂಬಂಧದ ಸ್ಥಿತಿಯು 30 ವರ್ಷಗಳ ನಂತರ ಅವರ ಮೊದಲ ಹೆಂಡತಿಯಿಂದ ಬೇರ್ಪಟ್ಟ ನಂತರ ಒಗಟಿಗಿಂತ ಕಡಿಮೆಯಿಲ್ಲ. ಪ್ರಸ್ತುತ ರಷ್ಯಾದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಅವರ ಜೀವನವು ರಹಸ್ಯಕ್ಕಿಂತ ಕಡಿಮೆಯಿಲ್ಲ. ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಪುಟಿನ್ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಯಾವುದೇ ಹೇರಿಕೆಗಳಿಂದ ದೂರವಿಟ್ಟಿದ್ದಾರೆ. ತನ್ನ ರಹಸ್ಯ ವ್ಯವಹಾರಗಳ ಹೊರತಾಗಿಯೂ, ವ್ಲಾಡಿಮಿರ್ ಪುಟಿನ್ ತನ್ನ […]

Advertisement

Wordpress Social Share Plugin powered by Ultimatelysocial