ಮನೆ ಮನೆ ಕಸ ಸಂಗ್ರಹಣೆಗಾಗಿ ಡಬ್ಬಗಳ ವಿತರಣೆ !

ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುರಹಟ್ಟಿ ಗ್ರಾಮದಲ್ಲಿ ಮನೆ ಮನೆಗೆ ಪ್ಲಾಸ್ಟಿಕ್ ಬಕೆಟ್ ವಿತರಣೆ ಮಾಡಲಾಯಿತು

ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಬಸಪ್ಪ ಅವರು ಗ್ರಾಮದ ಪ್ರತಿ ಮನೆಗೂ ಬಕೆಟ್ ವಿತರಿಸಿದರು

ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರಿಗೆ ಸಾಥ್ ನೀಡಿದರು

ಗ್ರಾಮಗಳ ಸ್ವಚ್ಛತೆ ದೃಷ್ಟಿಯಿಂದ ಮನೆಯಲ್ಲಿಯ ಒಣ ಮತ ಹಸಿ ಕಸಗಳನ್ನು ಬೇರ್ಪಡಿಸಿ ಪಂಚಾಯತಿಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ನೀಡುವಂತೆ ಇದೇ ಸಂದರ್ಭ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು

ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿರುವ ಗ್ರಾಮದ ಎಲ್ಲಾ ಮನೆಯವರಿಗೂ ಉಚಿತವಾಗಿ ಬಕೆಟ್ಗಳನ್ನು ವಿತರಿಸಲಾಯಿತು

ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಶಾಂತಮಲ್ಲಪ್ಪ ಮಾತನಾಡಿ ಗ್ರಾಮಗಳಲ್ಲಿ ಎಲ್ಲಿಂದರಲ್ಲಿ ಕಸವನ್ನು ಬಿಸಾಡಿ ಆ ನೈರ್ಮಲ್ಯ ಉಂಟಾಗುತ್ತಿತ್ತು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪಂಚಾಯಿತಿ ವತಿಯಿಂದ ಪ್ರತಿ ಮನೆಮನೆಗೆ ಉಚಿತವಾಗಿ ಬಕೆಟ್ ಗಳನ್ನು ನೀಡಿ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಪಂಚಾಯಿತಿಯಿಂದ ಸಾಗಿಸುವ ವಾಹನಕ್ಕೆ ಕಸವನ್ನು ನೀಡಿ ನೈರ್ಮಲ್ಯ ಕಾಪಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಉಪಾಧ್ಯಕ್ಷೆ ಸುಮಾ ರಂಗಸ್ವಾಮಿ ಸದಸ್ಯೆ ನಾಗಮ್ಮ ಅಭಿವೃದ್ಧಿ ಅಧಿಕಾರಿ ಸಭಾನ ಕಾರ್ಯದರ್ಶಿ ಸಿದ್ದಪ್ಪಾಜಿ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಚುವರಿ ಭದ್ರತಾ ಠೇವಣಿ ತುಂಬಿಸಿಕೊಳ್ಳುವುದು ತಡೆಯುವ ಸಲುವಾಗಿ ಮನವಿ ̤̤̤

Mon Jul 4 , 2022
ವಿದ್ಯುತ್ತ ಬಿಲ್ ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯನ್ನು ಬಿಲ್ ಎಂದು ಹೇಳು ಹೆಚ್ಚುವರಿ ಆಗಿ ಗ್ರಾಹಕರ ಬಿಲ್ ನಲ್ಲಿ ನಮೂದಿಸಿ ಹೆಸ್ಕಾಂ ಗೆ ಬಂದು ತುಂಬಲು ಹೇಳುತ್ತಾ ಇದ್ದರಿ ಇದನ್ನ ನಿಲ್ಲಿಸಬೆಕು ಎಂದೂ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಆಕ್ರೋಶ ವ್ಯಕ್ತ ಪಡಿಸಿದರು ಹೇಳಿದರು ಅವರು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಂಘದಿಂದ ಶಾಖಾ ವ್ಯವಸ್ಥಾಪಕರಾದ ಎಮ್ ಟಿ ದೊಡ್ಡಮನಿ […]

Advertisement

Wordpress Social Share Plugin powered by Ultimatelysocial