ಡಾ.ಮಲ್ಲಿಕಾ ಘಂಟಿ:ಘರ್‌ ವಾಪಸಿಯಾದರೆ ನಮ್ಮನ್ನು ಎಲ್ಲಿ ಇಡುತ್ತೀರಿ?

ಹಾವೇರಿ: ‘ ಮತಾಂತರ ಆದವರು ಘರ್‌ ವಾಪಸಿಯಾಗಿ ಎಂದು ಯುವ ಸಂಸದರೊಬ್ಬರು ಕರೆ ನೀಡಿದ್ದಾರೆ.

ನಾವು ಘರ್‌ ವಾಪಸಿಯಾದರೆ ನೀವು ನಮ್ಮನ್ನು ಎಲ್ಲಿ ಇಡುತ್ತೀರಿ? ತಲೆಯಲ್ಲಾ? ಅಥವಾ ಕಾಲಲ್ಲ? ಎಂಬುದನ್ನು ಸ್ಪಷ್ಟಪಡಿಸಿ’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಖಾರವಾಗಿ ಪ್ರಶ್ನಿಸಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ನಿಮಿತ್ತ ‘ಶರಣ ಸಂಸ್ಕೃತಿ ಉತ್ಸವ-2021’ ಹಾಗೂ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಡಾ.ಶಿಮುಶ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಘರ್‌ ವಾಪಸಿ’ ಮಾತನ್ನು ಜನತಾ ನ್ಯಾಯಾಲಯದೊಳಗೆ ಇಟ್ಟು, ಜನರ ತೀರ್ಪು ಏನಿದೆ ಎಂಬುದನ್ನು ಕೇಳಬೇಕಿದೆ. 12ನೇ ಶತಮಾನದಲ್ಲಿ ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣನನ್ನು ಬ್ರಾಹ್ಮಣ ಎಂದು ಆ ಸಮಾಜ ಇಂದಿಗೂ ಒಪ್ಪಿಕೊಂಡಿಲ್ಲ. ಕಾರಣ ಆ ಸಮಾಜದೊಳಗಿದ್ದ ಕಂದಾಚಾರವನ್ನು ಬಯಲಿಗೆಳೆದು, ಶ್ರೇಣೀಕರಣ ವ್ಯವಸ್ಥೆಯನ್ನು ವಿರೋಧಿಸಿದ್ದರು ಎಂದರು.

ಹಿಂದೂ ಧರ್ಮದ ಕಂದಾಚಾರ ಖಂಡಿಸಿದ ಶರಣರಾದ ಬಸವಣ್ಣ, ಕಾಳವ್ವೆ, ಗೊಗ್ಗವ್ವೆ ಅವರನ್ನು ಎಲ್ಲಿ ಇಡುತ್ತೀರಿ? ಬೌದ್ಧ ಧರ್ಮ ಸ್ವೀಕರಿಸಿದ ಡಾ.ಅಂಬೇಡ್ಕರ್‌ ಅವರನ್ನು ವಾಪಸ್‌ ಕರೆ ತರುತ್ತೀರಾ? ಎಂದು ಸವಾಲೆಸೆದರು.

ಆಹಾರ ಸಂಸ್ಕೃತಿ ಬಗ್ಗೆ ದೊಡ್ಡ ರಾಜಕಾರಣ ನಡೆಯುತ್ತಿದೆ. ನಮ್ಮ ಮನೆಯಲ್ಲಿ ಇರುವುದನ್ನು ನಾವು ತಿನ್ನುತ್ತೇವೆ. ರಾಜಕಾರಣ ಮತ್ತು ಹಿಂದುತ್ವಕ್ಕೆ ನನ್ನ ಪ್ರಶ್ನೆ ಇಷ್ಟೆ. ಇದನ್ನೇ ತಿನ್ನಿ ಎಂದು ತಾಕೀತು ಮಾಡಲು ನಿಮಗೆ ಯಾವ ಅಧಿಕಾರವಿದೆ. ಅಂಬೇಡ್ಕರ್‌ ಅವರು ಅಕ್ಷರ, ಸ್ವಾಭಿಮಾನ ನೀಡದಿದ್ದರೆ ನಾನು ಇಂದು ತಲೆಯ ಮೇಲೆ ಹೂ ಹಾಕಿಸಿಕೊಂಡು ಪ್ರಶಸ್ತಿ ಪಡೆಯುತ್ತಿರಲಿಲ್ಲ ಎಂದರು.

ಮಾಧ್ಯಮಗಳ ವಿರುದ್ಧ ಕಿಡಿ

70-80ರ ದಶಕದಲ್ಲಿ ಮಾತನ್ನು ಕೇಳುವ ವ್ಯವಧಾನವಿತ್ತು. ಇಂದು ಮಾತನ್ನು ತಿರುಚುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮಾತನಾಡಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. 21ನೇ ಶತಮಾನದಲ್ಲಿ 12 ಶತಮಾನದ ನೆಮ್ಮದಿಯ ಬದುಕು ಮರುಕಳಿಸುವುದಕ್ಕಾಗಿ ನಮ್ಮಂಥವರು ಮಾತನಾಡುವ ಅಗತ್ಯತೆ ಇದೆ ಎಂದು ಮಾಧ್ಯಮಗಳ ವಿರುದ್ಧ ಡಾ.ಮಲ್ಲಿಕಾ ಘಂಟಿ ಕಿಡಿಕಾರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿ ಕೊರೋನಾ ಹೆಚ್ಚಳ: ಯೆಲ್ಲೋ ಅಲರ್ಟ್ ಘೋಷಣೆ, ನಿರ್ಬಂಧ ಹೇರಲಾಗುವುದು ಎಂದ ದೆಹಲಿ ಸಿಎಂ ̤

Tue Dec 28 , 2021
ರಾಷ್ಟ್ರ ರಾಜಧಾನಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.   ಯೆಲ್ಲೋ ಅಲರ್ಟ್ ಘೋಷಣೆಯು ರಾತ್ರಿ ಕರ್ಫ್ಯೂ, ಶಾಲೆಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡುವುದು, ಸಮ-ಬೆಸ ಆಧಾರದ ಮೇಲೆ ಅನಿವಾರ್ಯವಲ್ಲದ ಅಂಗಡಿಗಳನ್ನು ತೆರೆಯುವುದು. ಮೆಟ್ರೋ ರೈಲುಗಳು ಮತ್ತು ಬಸ್‌ಗಳಲ್ಲಿ […]

Advertisement

Wordpress Social Share Plugin powered by Ultimatelysocial