ವಿಕ್ಕಿ-ಕತ್ರಿನಾ ಮೊದಲ ಕ್ರಿಸ್ಮಸ್ ಹೇಗಿತ್ತು ಗೊತ್ತಾ..? ಫೋಟೋ ವೈರಲ್

ಮುಂಬೈ : ಬಾಲಿವುಡ್‌ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೀವನ ಆರಂಭವಾದ ಬಳಿಕ ಇಬ್ಬರು ಒಟ್ಟಾಗಿ ಮೊದಲ ಬಾರಿ ಕ್ರಿಸ್‍ಮಸ್ ಸಂಭ್ರಮದಿಂದ ಆಚರಿಸಿದ್ದಾರೆ.

ಈ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕತ್ರಿನಾ ವಿಕ್ಕಿಯ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದರು. ಅಭಿಮಾನಿಗಳ ಮನಗೆದ್ದ ಈ ಚಿತ್ರಕ್ಕೆ ವಿಶೇಷ ಕಾರಣವೊಂದಿದೆ.

ಕ್ರಿಸ್‍ಮಸ್. ಕತ್ರಿನಾ ಹಾಗೂ ವಿಕ್ಕಿ ಜೊತೆಯಾಗಿ ಆಚರಿಸುತ್ತಿರುವ ಮೊದಲ ಕ್ರಿಸ್‍ಮಸ್ ಹಬ್ಬವಿದು. ಆದ್ದರಿಂದಲೇ ಕ್ರಿಸ್‍ಮಸ್ ಟ್ರೀ ಮುಂದೆ ನಿಂತು ಇಬ್ಬರು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ಚಿತ್ರಗಳು ವೈರಲ್ ಆಗಿದ್ದು, ಕತ್ರಿನಾ ಕೈಫ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಈ ಫೋಟೋಗಾಗಿ ನಾವು ಕಾಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ದೂರಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಶಾಸ್ತ್ರದಲ್ಲಿ ತೆಗೆದ ಕೆಲವು ಫೋಟೋಗಳನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರು ಜೊತೆಯಾಗಿ ಕ್ರಿಸ್‍ಮಸ್ ಆಚರಣೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜೀ5 ಅಂಗಳದಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಸೂಪರ್ ಹಿಟ್ ಸಿನಿಮಾ ಸಾಲು!

Mon Dec 27 , 2021
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕುಟುಂಬಸಮೇತ ನೋಡಬಹುದಾದ ಭಜರಂಗಿ-2 ಸಿನಿಮಾಗೆ ಮೆಚ್ಚುಗೆಯೂ ಸಿಗುತ್ತಿದೆ. ಅಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಸಿನಿಮಾ ಕೂಡಾ ಜೀ5ನಲ್ಲಿ ಸೇರ್ಪಡೆಗೊಂಡಿದೆ. ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ವಿಶೇಷ ಗೆಟಪ್ ನಲ್ಲಿ ಗಮನಸೆಳೆದಿದ್ದರು. ವಿಭಿನ್ನ ಚಿತ್ರಪ್ರಕಾರಗಳ ಸಿನಿಮಾ ತಯಾರಿಗೆ ಹೆಸರಾದ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ರಾಜ್ ಶೆಟ್ಟಿ […]

Advertisement

Wordpress Social Share Plugin powered by Ultimatelysocial