ಬಾಲಿವುಡ್‌ ತಾರೆಯರಿಗೆ ಕೊರೊನಾ ಕಂಟಕ, ಏಕ್ತಾ ಕಪೂರ್‌ಗೆ ಕೊರೊನಾ ಪಾಸಿಟಿವ್

ಮುಂಬೈ: ದೇಶದಲ್ಲಿ ಕೊರೊನಾ ರಣಕೇಕೆ ಇನ್ನು ನಿಂತಿಲ್ಲ ದಿನದಿಂದ ದಿನಕ್ಕೆ ಆರ್ಭಟ ಹೆಚ್ಚಾಗುತಿದ್ದು. ಬಾಲಿವುಡ್‌ ಸೆಲೆಬ್ರಿಟಿಗಳಿಗೂ ಕೊರೊನಾ ಬೆಂಬಿಡದ ಕಾಡುತ್ತಿದೆ. ಅದರಲ್ಲೂ ಸದ್ಯ ಬಾಲಿವುಡ್‌ನ ಮೂವರು ಸ್ಟಾರ್‌ಗಳಿಗೆ ಒಂದೇ ದಿನದಲ್ಲಿ ಪಾಸಿಟಿವ್‌ ಎಂದು ಬಂದಿದೆ.

ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ.

ಬಾಲಿವುಡ್ ತಾರೆಯರೂ ಇದರಿಂದ ಹೊರತಾಗಿಲ್ಲ. ಇತ್ತೀಚೆಗಷ್ಟೇ ಕರೀನಾ ಕಪೂರ್ ಸೇರಿದಂತೆ ಹಲವರಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಇಂದು ಮತ್ತೆ ಮೂವರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಪದ್ಮಶ್ರೀ ಪುರಸ್ಕೃತ ಕಿರುತೆರೆ ಹಾಗೂ ಹಿರಿತೆರೆ ನಿರ್ಮಾಪಕಿ, ಏಕ್ತಾ ಕಪೂರ್​​ಗೆ ಸೋಂಕು ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಅದನ್ನು ಖಚಿತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ”ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಾಗ್ಯೂ ಕೋವಿಡ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿ, ಎಚ್ಚರಿಕೆಯಿಂದಿರಿ” ಎಂದಿದ್ದಾರೆ.

ಈ ಪೋಸ್ಟ್​​ಗೆ ಹೀನಾ ಖಾನ್, ವಿಕ್ರಾಂತ್ ಮಸ್ಸಿ, ಮೌನಿ ರಾಯ್‌ ಸೇರಿದಂತೆ ಬಾಲಿವುಡ್ ತಾರೆಯರು ಪ್ರತಿಕ್ರಿಯಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಖ್ಯಾತ ನಟ ಜಾನ್ ಅಬ್ರಹಾಂ ಹಾಗೂ ಅಬವರ ಪತ್ನಿ ಪ್ರಿಯಾ ರುಂಚಾಲ್​ಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಇಬ್ಬರು ಕಳೆದ ಹಲವು ದಿನಗಲ ಹಿಂದೆ ದಿನಗಳ ಹಿಂದೆ ಸೋಂಕಿತನ ಸಂಪರ್ಕದಲ್ಲಿದ್ದ ಕಾರಣ ಈಗ ಕೊರೊನಾ ಪಾಸಿಟಿವ್‌ ಬಂದಿದೆ ಅಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Vinod Raj : ವಿನೋದ್ ರಾಜ್ ಆ ಕೆಲಸ ಮಾಡಿದ್ರೆ ಇವತ್ತಿಗೂ ಲೀಲಾವತಿ ಅಮ್ಮ "..."ಮಗನೆ ಅಂತ ಬೈತಾರಂತೆ!

Wed Jan 5 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial