ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್

ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್

2020 ರಂತೆ 2021 ರಲ್ಲಿಯೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅದರ ಹಲವಾರು ರೂಪಾಂತರಗಳಿಂದ ಜನರು ಕಂಗಾಲಾಗಿದ್ದಾರೆ. ಕೊರೊನಾದಿಂದ ಬಚಾವಾಗಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಹೊಸ ಹೊಸ ಹೆಲ್ತ್ ಪ್ರೊಡಕ್ಟ್ ಗಳನ್ನು ಖರೀದಿಸಿ ಉಪಯೋಗಿಸುತ್ತಿದ್ದಾರೆ.

2021ರಲ್ಲಿ ಅತಿ ಹೆಚ್ಚು ಮಾರಾಟವಾದ ಹೆಲ್ತ್ ಪ್ರೊಡಕ್ಟ್ ಗಳ ಮಾಹಿತಿ ಇಲ್ಲಿದೆ.

ಕೊರೊನಾ ಮಹಾಮಾರಿಯಿಂದ ಬಚಾವಾಗಲು ಮಾಸ್ಕ್ ಬಹಳ ಉಪಯುಕ್ತವಾಗಿದೆ. ಇದನ್ನು ಬಳಸುವುದರಿಂದ ವಾತಾವರಣದಲ್ಲಿನ ವೈರಸ್, ಸೂಕ್ಷ್ಮಜೀವಿಗಳು ಮತ್ತು ಧೂಳಿನ ಕಣಗಳಿಂದ ರಕ್ಷಣೆ ಸಿಗುತ್ತದೆ. ಮಾಸ್ಕ್ ಇವೆಲ್ಲವನ್ನೂ ಫಿಲ್ಟರ್ ಮಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. 2021 ರಲ್ಲಂತೂ ಮಾಸ್ಕ್ ಜೀವನದ ಬಹುಮುಖ್ಯ ಅಂಶವೇ ಆಗಿಹೋಗಿದೆ.

ಮಾಸ್ಕ್ ನಂತೆಯೇ ಹ್ಯಾಂಡ್ ಸ್ಯಾನಿಟೈಸರ್ ಕೂಡ ಬಹಳ ಮುಖ್ಯ. ಕೊರೊನಾ ಸಮಯದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಅಧಿಕ ಪ್ರಮಾಣದಲ್ಲಿ ಮಾರಾಟವಾಯ್ತು. ಇದನ್ನು ಬಳಸುವುದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾ, ಧೂಳು ಎಲ್ಲವೂ ಸ್ವಚ್ಛವಾಗುತ್ತವೆ.

ಕೊರೊನಾ ಸಮಯದಲ್ಲಿ ಜನರಲ್ಲಿ ಆಕ್ಸಿಜನ್ ಲೆವಲ್ ಅನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಆಕ್ಸಿಜನ್ ಲೆವಲ್ ಎಷ್ಟಿದೆಯೆಂದು ತಿಳಿದುಕೊಂಡರೆ ಚಿಕಿತ್ಸೆ ಸುಲಭವಾಗುತ್ತದೆ. ಹಾಗಾಗಿ ಜನರು ತಮ್ಮ ತಮ್ಮ ಮನೆಯಲ್ಲಿಯೇ ಆಕ್ಸಿಜನ್ ಮೀಟರ್ ಇಟ್ಟುಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ಅದರ ಮಾರಾಟದ ಪ್ರಮಾಣ ಹೆಚ್ಚಾಗಿದೆ.

ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಕೇಳಿಬರ್ತಿರುವುದು ರೋಗ ನಿರೋಧಕ ಶಕ್ತಿ. ವೈದ್ಯರು ಇಮ್ಯೂನಿಟಿ ಬೂಸ್ಟ್ ಮಾಡಲು ಸಲಹೆ ನೀಡುತ್ತಿದ್ದಾರೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳನ್ನು ಜನರು ಹೆಚ್ಚು ಹೆಚ್ಚು ಖರೀದಿಸಿದ್ದಾರೆ.

ಆರೋಗ್ಯವಂತ ಶರೀರಕ್ಕೆ ಸಾವಯವ ಆಹಾರ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಇಮ್ಯೂನಿಟಿ ಕೂಡ ಬೇಗನೆ ಹೆಚ್ಚುತ್ತದೆ. ಕೊರೊನಾ ವೈರಸ್ ಕಾಣಿಸಿಕೊಂಡ ಮೇಲೆ ಜನರು ಸಾವಯವ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಸರ್ಕಾರ; ಒಂದೂವರೆಯಿಂದ 3 ದಿನದಲ್ಲಿ ಡಬಲ್ ಆಗುತ್ತೆ ಕೇಸ್

Sat Dec 25 , 2021
ಕೊರೋನಾ, ಒಮಿಕ್ರಾನ್ ಪ್ರಸ್ತುತ ಸ್ಥಿತಿಗತಿಗಳ ಕುರಿತು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದು, ಒಮಿಕ್ರಾನ್ ಪ್ರಕರಣಗಳು 1.5 ರಿಂದ 3 ದಿನಗಳಲ್ಲಿ ಜಗತ್ತಿನಲ್ಲಿ ದ್ವಿಗುಣಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ. ಗಂಭೀರವಾದ ರೋಗಿಗಳಿಗೆ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಕೇವಲ ಬೂಸ್ಟರ್ ಡೋಸ್ ಅನ್ನು ಅನ್ವಯಿಸುವುದು ಕೊರೋನಾ ವೈರಸ್ ತೊಡೆದು ಹಾಕಲು ಮಂತ್ರವಲ್ಲ ಎಂದು WHO ಹೇಳಿದೆ. ವ್ಯಾಕ್ಸಿನೇಷನ್ ಮುಖ್ಯವಾಗಿದೆ, ಜೊತೆಗೆ ಜನದಟ್ಟಣೆಯನ್ನು ತಪ್ಪಿಸಬೇಕಿದೆ, ಕೋವಿಡ್ ಪ್ರೋಟೋಕಾಲ್ ಅನುಸರಿಸುವುದು ಕೂಡ ಅಷ್ಟೇ […]

Advertisement

Wordpress Social Share Plugin powered by Ultimatelysocial