ಇಷ್ಟೆಲ್ಲಾ ಮ್ಯಾಜಿಕ್‌ ಮಾಡಬಲ್ಲದು 1 ಚಮಚ ʼತುಪ್ಪʼ

ತುಪ್ಪ ಭಾರತದ ಸೂಪರ್‌ ಫುಡ್‌ ಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ತುಪ್ಪದ ಘಮ ಮತ್ತು ರುಚಿ ಇಡೀ ವಿಶ್ವವನ್ನೇ ಆವರಿಸಿಕೊಳ್ತಾ ಇದೆ. ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸಿ.ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.ಅನಾರೋಗ್ಯಕರ ತಿನಿಸುಗಳ ಸೇವನೆ, ಮಾನಸಿಕ ಒತ್ತಡ, ನಿದ್ದೆಯ ಕೊರತೆ, ದೈಹಿಕ ಚಟುವಟಿಕೆಯ ಕೊರತೆ, ಆಂಟಿಬಯೊಟಿಕ್ಸ್‌ ಸೇವನೆ ಇವೆಲ್ಲ ಮಲಬದ್ಧತೆಗೆ ಮೂಲಕ ಕಾರಣಗಳು. ಇದನ್ನು ಸರಿಪಡಿಸುವ ಶಕ್ತಿ ತುಪ್ಪಕ್ಕಿದೆ.ತುಪ್ಪದಲ್ಲಿ ಆಂಟಿಒಕ್ಸಿಡೆಂಟ್ಸ್‌ ಮತ್ತು ಒಮೆಗಾ 3 ಹೇರಳವಾಗಿದೆ. ಇನ್ನಷ್ಟು ಯಂಗ್‌ ಆಗಿ ಕಾಣಲು ಸಹ ಇದು ಸಹಾಯ ಮಾಡಬಲ್ಲದು. ತೂಕ ಇಳಿಸಲು ಕೂಡ ತುಪ್ಪ ಸಹಕಾರಿಯಾಗಿದೆ.ನಿಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬಿನಾಂಶ ಬೇಕು. ಎ2 ಹಸುವಿನ ತುಪ್ಪದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್‌ ಇದ್ದು, ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಕೊಬ್ಬನ್ನು ಇದು ಒದಗಿಸಿಕೊಡುತ್ತದೆ.ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲ ಸ್ರವಿಸುವಿಕೆ ಉಂಟಾಗಿ, ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುತ್ತವೆ. ನಿಮಗೆ ಹೊಳೆಯುವ ಮುಖ ಕಾಂತಿ ಹೊಂದಲು ಕೂಡ ತುಪ್ಪ ಸಹಾಯ ಮಾಡುತ್ತದೆ.ಅನಿಯಮಿತ ಕರುಳಿನ ಚಲನೆಯನ್ನು ತುಪ್ಪ ಗುಣಪಡಿಸುತ್ತದೆ. ನಿಮ್ಮ ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಿಸುತ್ತದೆ. ತುಪ್ಪವು ನಮಗೆ ತೃಪ್ತಿಯನ್ನು ನೀಡುತ್ತದೆ ಮತ್ತು ಅನಾರೋಗ್ಯಕರ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.ಸ್ನೇಹಿ ಕಿಣ್ವಗಳೊಂದಿಗೆ ನಿಮ್ಮ ಕರುಳನ್ನು ಸುಧಾರಿಸುತ್ತದೆ. ನಿಮ್ಮ ಮೂಳೆಗಳಲ್ಲಿ ಶಕ್ತಿ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾರ್ಟಿ ನಂತರದ ʼಹ್ಯಾಂಗೋವರ್ʼ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್

Fri Feb 25 , 2022
ರಾತ್ರಿ ಪಾರ್ಟಿಯಲ್ಲಿ ಅಧಿಕವಾಗಿ ಕುಡಿದಿದ್ದರೆ ಮರುದಿನ ಬೆಳಿಗ್ಗೆ ಏನು ಸೇವಿಸುತ್ತೀರೋ ಅದು ಬಹಳ ಮುಖ್ಯವಾದ ಆಹಾರವಾಗಿರುತ್ತದೆ. ಹ್ಯಾಂಗೋವರ್ ನಿವಾರಿಸಲು ಈ ಆಹಾರವೇ ಮದ್ದು. ಅಂತಹ ಕೆಲವು ಮುಖ್ಯವಾದ ಆಹಾರ ಪದಾರ್ಥಗಳು ಇಲ್ಲಿವೆ.ಮುಖ್ಯವಾಗಿ ಎಳನೀರು, ಆಲ್ಕೋಹಾಲ್‌ನಿಂದ ಆದ ಡಿಹೈಡ್ರೇಶನ್ ನಿವಾರಿಸಿ ಅದರಲ್ಲಿನ ಎಲೆಕ್ರೋಲೈಟ್ ಚೈತನ್ಯ ನೀಡುತ್ತದೆ.ಮೊಟ್ಟೆ ಇಲ್ಲವೇ ಬೀನ್ಸ್ ತಿಂದರೆ ದೇಹಕ್ಕೆ ಬೇಕಾಗುವ ಪ್ರೊಟೀನ್ ಸಿಗುತ್ತದೆ.ಶುಂಠಿಯನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ. ಜೇನುತುಪ್ಪ ಸೇವಿಸಿದರೆ ಅದು ದೇಹದಲ್ಲಿನ ಆಲ್ಕೋಹಾಲ್ […]

Advertisement

Wordpress Social Share Plugin powered by Ultimatelysocial