ಕಣ್ಣಿನ ದೃಷ್ಟಿ ಚುರುಕಾಗಿಸಲು ಇಲ್ಲಿದೆ ʼಮನೆ ಮದ್ದುʼEye Care…

ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ.

ನುಗ್ಗೆ ಸೊಪ್ಪಿನ ಪಲ್ಯ, ಸಾಂಬಾರ ಮಾಡಿಕೊಂಡು ತಿನ್ನಿ.

ಹಾಗೇನೇ ನುಗ್ಗೆ ಸೊಪ್ಪಿನ ಕಷಾಯ ಮಾಡಿಕೊಂಡು ಕುಡಿಯಿರಿ.

ಸಬ್ಬಸ್ಸಿಗೆ ಸೊಪ್ಪನ್ನು ಆಹಾರದಲ್ಲಿ ಸೇವಿಸುವುದರಿಂದ ಉತ್ತಮ ದೃಷ್ಟಿ ಪಡೆಯಬಹುದು.

ಪುದೀನಾ ಸೊಪ್ಪಿನ ಕಷಾಯ, ಪುಂಡಿ ಸೊಪ್ಪಿನ ಚಟ್ನಿಯಿಂದ ದೃಷ್ಟಿ ಹೆಚ್ಚುವುದರೊಂದಿಗೆ ಹೆಣ್ಣು ಮಕ್ಕಳ ಋತು ಚಕ್ರದ ಸಮಸ್ಯೆಯೂ ನಿವಾರಣೆ ಆಗುತ್ತದೆ.

ಒಂದೆಲಗ ಸೊಪ್ಪು ಕಷಾಯ ಮಾಡಿಕೊಂಡು ಕುಡಿದರೆ ಬುದ್ದಿ ಶಕ್ತಿ ಹೆಚ್ಚಾಗುತ್ತದೆ.

ವೀಳ್ಯದೆಲೆಯ ತೊಟ್ಟು ತೆಗೆದು ಕಷಾಯ ಮಾಡಿದರೆ, ಸೀಬೆ ಮರದ ಕಷಾಯ ಮಾಡಿ ಕುಡಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಮೇಲೆ ಹೇಳಿದ ಯಾವುದಾದರೊಂದು ಕಷಾಯವನ್ನು ಕನಿಷ್ಠ ಒಂದು ತಿಂಗಳು ಬಳಸಿ ನೋಡಿ. ಎಲ್ಲವನ್ನೂ ಒಮ್ಮೆಗೇ ಪ್ರಯತ್ನಿಸದಿರಿ. ಮೂರು ತಿಂಗಳ ಬಳಿಕ ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಿರುವುದು ನಿಮಗೇ ಅರಿವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಳೆ ಪ್ಯಾಂಟ್‌ ಗೆ ಮನೆಯಲ್ಲೇ ರಿಪ್ಡ್‌ ಜೀನ್ಸ್‌ ಲುಕ್‌

Mon Jan 17 , 2022
ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ ಹಳೆಯ ಪ್ಯಾಂಟ್ ಆಯ್ದುಕೊಳ್ಳುವುದೇ ಒಳ್ಳೆಯದು. ಇದಕ್ಕಾಗಿ ಬ್ಲೇಡ್, ಫ್ಯಾಬ್ರಿಕ್ ಕತ್ತರಿ, ಕಡಿಮೆ ಅಂಚಿನ ಚಾಕುಗಳನ್ನು ತೆಗೆದುಕೊಳ್ಳಿ. ದಾರಗಳನ್ನು ಎಳೆಯಲು ಪ್ಲಕ್ಕರ್ ಬಳಸಿ. ನಿಮ್ಮ ರಿಪ್ಡ್ ಜೀನ್ಸ್ ಹೇಗೆ ಇರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಬಳಿಕ ಕತ್ತರಿಸಬೇಕಾದ ಜಾಗವನ್ನು ಮಾರ್ಕ್ ಮಾಡಿ. […]

Advertisement

Wordpress Social Share Plugin powered by Ultimatelysocial