ಕೊಡಗಿನ ಕಾಫಿ ಬೆಳೆಗಾರರಂತು ತೋಟಗಳನ್ನುನಿರ್ವಹಣೆ ಮಾಡೋದು ಕಷ್ಟ ಅಂತಿದ್ದಾರೆ!

ಕೊಡಗು : ಕೃಷಿ   ಅಂದ್ರೆ ಕಷ್ಟನಪ್ಪ ಎನ್ನೋ ಸ್ಥಿತಿ ಇದೆ. ಕೊಡಗಿನ ಕಾಫಿ ಬೆಳೆಗಾರರಂತು ತೋಟಗಳನ್ನು ನಿರ್ವಹಣೆ ಮಾಡೋದು ಕಷ್ಟ ಅಂತಿದ್ದಾರೆ. ಆದರೆ ಇಲ್ಲೊಬ್ಬ ರೈತ   ಇರುವ ಕಾಫಿ ಬೆಳೆಯನ್ನೇ ಕಸಿ ಮಾಡಿ ಜೊತೆಗೆ ಬುಟ್ಟಿಯಲ್ಲಿ ಭತ್ತ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹಿರಿಕರ ಗ್ರಾಮದ ವಿಕ್ರಮ್ ಮತ್ತು ಅವರ ತಾಯಿ ಪ್ರಮಿಳಾ ಚನ್ನಪ್ಪ ಇಂತಹ ವಿನೂತನ ಕೃಷಿಯಿಂದ ಕೈ ತುಂಬಾ ಆದಾಯ  ಗಳಿಸಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಕೊಡಗಿನ ರೈತರು  ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಅರೆಬಿಕಾ ಕಾಫಿ ನಾಟಿ ಮಾಡಿ ಫಸಲು ಪಡೆಯಬೇಕಾದರೆ 4 ರಿಂದ ಐದು ವರ್ಷ ಕಾಯಬೇಕು. ರೊಬೊಸ್ಟಾ ಕಾಫಿಗೆ ಅರೇಬಿಕಾ ಕಾಫಿಯನ್ನು ಕಸಿ ಮಾಡಿ ಒಂದೇ ವರ್ಷದಲ್ಲಿ ಫಸಲು ಪಡೆಯುತ್ತಿರುವ ಕಸಿ ಕಾಫಿ ಕುರಿತು ಮಾಹಿತಿ ಇಲ್ಲಿದೆ.
ಹಿರಿಕರ ಗ್ರಾಮದ ವಿಕ್ರಂ ಸುಮಾರು ನಾಲ್ಕು ಏಕೆರೆ ಪ್ರದೇಶದಲ್ಲಿ ರೊಬೊಸ್ಟಾ ಕಾಫಿಯನ್ನು ಬೆಳೆದಿದ್ದರು. ಆದರೆ ಅತೀ ಶೀತದಿಂದಾಗಿ ಗಿಡ ಚೆನ್ನಾಗಿದ್ದರೂ ಇಳುವರಿ ತೀರಾ ಕಡಿಮೆಯಾಗಿತ್ತು. ಹೀಗಾಗಿ ರೊಬೊಸ್ಟಾ ತೆಗೆದು ಅರೆಬಿಕಾ ಕಾಫಿ ಬೆಳೆಯೋದಕ್ಕೆ ನಿರ್ಧರಿಸಿದ್ದರು.
20 ವರ್ಷದ ರೊಬೊಸ್ಟಾ ಕಾಫಿ ಗಿಡಕ್ಕೆ ಅರೇಬಿಕಾ ಕಸಿರೊಬೊಸ್ಟಾ ಗಿಡಗಳನ್ನು ತೆಗೆದು ಹೊಸದಾಗಿ ಅರೆಬಿಕಾ ನಾಟಿ ಮಾಡಿದರೆ ಕೈಗೆ ಫಸಲು ಬರೋದಕ್ಕೆ ಮತ್ತೆ ಐದು ವರ್ಷ ಕಾಯಬೇಕಾಗಿತ್ತು. ಬೇರೆ ಯಾವುದೆಲ್ಲಾ ಗಿಡಗಳ ಕ್ರಾಸಿಂಗ್ ಮಾಡಿದ್ದ ವಿಕ್ರಂ 20 ವರ್ಷದ ರೊಬೊಸ್ಟಾ ಕಾಫಿ ಗಿಡಕ್ಕೆ ಅರೇಬಿಕಾ ಕಸಿ ಮಾಡಿದರೆ ಹೇಗೆ ಎಂದು ಯೋಚಿಸಿ ಆರಂಭಿಕವಾಗಿ ಎರಡು ಗಿಡಗಳಿಗೆ ಆ ಪ್ರಯತ್ನ ಮಾಡಿದ್ದರು.
ಯಾವಾಗ ಎರಡು ಗಿಡಗಳ ಕಸಿ ಯಶಸ್ವಿಯಾಯಿತೋ ಆಗ ತಮ್ಮ ನಾಲ್ಕು ಏಕರೆ ರೊಬೊಸ್ಟಾ ಕಾಫಿ ಗಿಡಕ್ಕೆ ಅರೆಬಿಕಾ ಕಾಫಿ ಗಿಡವನ್ನು ಕಸಿ ಮಾಡಿದ್ದಾರೆ. ಇದು ಒಂದೇ ವರ್ಷದಲ್ಲಿ ಫಸಲು ಬಿಡಲು ಆರಂಭಿಸಿತು ಎನ್ನುತ್ತಾರೆ ವಿಕ್ರಮ್.ಕೇವಲ ಎರಡು ವರ್ಷದಲ್ಲಿ ದೊಡ್ಡ ಗಿಡವಾಗಿ ಯಥೇಚ್ಚವಾಗಿ ಕಾಫಿ ಇಳುವರಿ ಸಿಗುತ್ತದೆ. ಈ ರೀತಿ ಮಾಡುವುದರಿಂದ ಅರೇಬಿಕಾ ಕಾಫಿಯ ಗಾತ್ರ ದೊಡ್ಡದಾಗಿದ್ದು ಉತ್ತಮ ಗುಣಮಟ್ಟದ ಕಾಫಿ ಸಿಗುತ್ತಿದೆ. ಜೊತೆಗೆ ಇಳುವರಿ ಹೆಚ್ಚಾಗಿದ್ದು ಕಾಫಿ ಗಿಡವೂ ಹುಲುಸಾಗಿ ಬೆಳೆಯುತ್ತದೆ ಎಂದಿದ್ದಾರೆ.ಎಕರೆಗೆ ಮೂರು ಲಕ್ಷ ಆದಾಯ
ಇದೀಗ ನಾಲ್ಕು ಎಕರೆ ಕಾಫಿ ತೋಟದಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 25 ಚೀಲದಷ್ಟು ಪಾರ್ಚ್ ​ಮೆಂಟ್ ಕಾಫಿ ಸಿಗುತ್ತಿದೆ. ಒಂದು ಚೀಲಕ್ಕೆ ಈಗ ರೂ 15 ಸಾವಿರ ಬೆಲೆಯಿದೆ. ಖರ್ಚು ಕಳೆದು ಒಂದು ಎಕರೆಗೆ ಸುಮಾರು ಮೂರು ಲಕ್ಷ ಆದಾಯ ಬರುತ್ತಿದೆ ಎನ್ನುತ್ತಾರೆ.ಬುಟ್ಟಿಯಲ್ಲಿ ಭತ್ತದ ಕೃಷಿ
ಈ ಹಿನ್ನಲೆಯಲ್ಲಿ ಕಸಿ ವಿಧಾನದ ಅರೇಬಿಕಾ ಕಾಫಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ತಾಯಿ ಪ್ರಮಿಳಾ ಚನ್ನಪ್ಪ ಕೂಡ ಬುಟ್ಟಿಯಲ್ಲಿ ಭತ್ತದ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮೊದಲು ತಮ್ಮ ಮನೆಯ ತಿಪ್ಪೆ ಮೇಲೆ ಬಿದ್ದಿದ್ದ ಭತ್ತದ ಕಾಳೊಂದು ಬೆಳೆದು ಬಾರಿ ಇಳುವರಿ ನೀಡಿದ್ದನ್ನು ಪ್ರಮೀಳಾ ಅವರು ನೋಡಿದ್ದರಂತೆ. ಇದನ್ನೇ ಮಾದರಿಯಾಗಿಟ್ಟುಕೊಂಡ ಪ್ರಮೀಳಾ ಅವರು ಫಲವತ್ತಾದ ಮಣ್ಣು ಮತ್ತು ಗೊಬ್ಬರ ಮಿಶ್ರಣ ಮಾಡಿ ಚೀಲದ ಬುಟ್ಟಿಗಳಿಗೆ ತುಂಬಿ ಅವುಗಳಲ್ಲಿ ಭತ್ತ ಬೆಳೆದಿದ್ದಾರೆ.
ಒಂದೊಂದು ಬುಟ್ಟಿಯಲ್ಲೂ ಅರ್ಧ ಕೆ ಜಿ ಅಷ್ಟು ಭತ್ತದ ಇಳುವರಿ ಸಿಕ್ಕಿದೆ. ಹೀಗಾಗಿ ಸದ್ಯ ಐದುನೂರು ಬುಟ್ಟಿಗಳಲ್ಲಿ ಭತ್ತ ಬೆಳೆದಿರುವ ಪ್ರಮೀಳಾ ಅವರು 2 ಸಾವಿರ ಬುಟ್ಟಿಯಲ್ಲಿ ಕನಿಷ್ಟ 10 ಕ್ವಿಂಟಲ್ ಭತ್ತ ಬೆಳೆಯಬಹುದು. ಇದರಿಂದ ಗದ್ದೆಬೇಕು, ನಾಟಿ ಮಾಡೋದಕ್ಕೆ ಆಳುಬೇಕು ಎನ್ನೋ ಸಮಸ್ಯೆಗಳೇ ಇರೋದಿಲ್ಲ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

Fri Feb 4 , 2022
ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರು ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.ಸಿಎಂ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿ ಸತೀಶ್ ಜಾರಕಿಹೊಳಿ ಅವರು ಬಿಜೆಪಿಯಲ್ಲಿ ವಕ್ತಾರರಾಗಿದ್ದಾರಾ.? ಅವರು ಭವಿಷ್ಯ […]

Advertisement

Wordpress Social Share Plugin powered by Ultimatelysocial