ಸಮರ್ಪಕ ವಿದ್ಯುತ್ ಗೆ ಆಗ್ರಹಿಸಿ ರೈತ ಸಂಘ ದಿಂದ ಪ್ರತಿಭಟನೆ.

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಸುತ್ತಲಿನ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್  ಪೂರೈಸಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರುಸಂತೇಮರಹಳ್ಳಿ ಸೆಸ್ಕ್ ಕಚೇರಿ ಎದುರು ಧರಣಿ ನಡೆಸಿದರುಸಂತೇಮರಹಳ್ಳಿಯ ಪ್ರವಾಸಿಮಂದಿರದಿಂದ ರೈತ ಮುಖಂಡರು ಅಧಿಕಾರಿಗಳ ವಿರುದ್ಧಘೋಷಣೆಗಳನ್ನು ಕೂಗಿದರು.ಮೆರವಣಿಗೆಯಲ್ಲಿ ಸೆಸ್ಟ್ ಕಚೇರಿಗೆ ತೆರಳಿದರುನಂತರ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ರವರು ಮಾತನಾಡಿ ಸೆಸ್ಕ್ ನವರು ಇತ್ತೀಚೆಗೆ ಬೆಳಗಿನ ಸಮಯ 4 ಗಂಟೆತ್ರಿಪಿಜ್ ವಿದ್ಯುತ್ ನೀಡಿದರೂ ಪದೇ ಪದೇ ಸ್ಥಗಿತ ಮಾಡುತ್ತಿದ್ದಾರೆ.ರಾತ್ರಿ ವೇಳೆ 3 ಗಂಟೆ ತ್ರಿಫೇಸ್ನೀಡುತ್ತಿದ್ದು ಯಾವಾಗ ವಿದ್ಯುತ್ ಬರುತ್ತದೆ ಎಂಬುದೇ
ಗೊತ್ತಾಗುತ್ತಿಲ್ಲ ಎಂದು ದೂರಿದರು ಸಂತೇಮರಳ್ಳಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಕಾಟವಿದ್ದು ರಾತ್ರಿ ವೇಳೆ ರೈತರು ಪಂಪ್ ಸೆಟ್ ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ ಸರಿಯಾಗಿ ವಿದ್ಯುತ್‌ ನೀಡದೆ ಫಸಲಿಗೆ ನೀರು ಹಾಯಿಸಲು ಸಮಸ್ಯೆಯಾಗುತ್ತಿದೆ. ವಿದ್ಯುತ್ ನೀಡಿದರೆ ಪದೇ ಪದೇ ಕಡಿತ ಮಾಡುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಬೆಳಗಿನ ಸಮಯವೇ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಖಚಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ ಇದೆಯಾ?

Wed Jan 18 , 2023
ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆ ಎನ್ನುವ ವರದಿಯನ್ನು ಕೇಂದ್ರ ಸಚಿವಾಲಯ ತಳ್ಳಿಹಾಕಿದೆ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆರ್‌ಟಿಐ ವಿಚಾರಣೆಯಲ್ಲಿ ಕೋವಿಡ್ ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ವರದಿ ಮಾಡಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಐಸಿಎಂ ಆರ್ ಮತ್ತು ಸಿಡಿಎಸ್‌ಸಿಒ ಅಧಿಕಾರಿಗಳು ವರದಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿದೆ. ಕೋವಿಡ್ ವ್ಯಾಕ್ಸಿನ್ ನಂತರ ನೋವು, […]

Advertisement

Wordpress Social Share Plugin powered by Ultimatelysocial