ರೈತರ ಪರಿಹಾರ ಹಣವನ್ನು ನೇರವಾಗಿ ರೈತರಿಗೆ ಮುಟ್ಟಿಸಿ: ಸೋಮಣ್ಣ ಬೆಟಗೇರಿ ರೈತ ಮುಖಂಡ ಅಗ್ರಹ

ಲಕ್ಷ್ಮೇಶ್ವರ: ರೈತರಿಗಾಗಿ ಸರಕಾರದಿಂದ ಬಂದ ಪರಿಹಾರ ಹಣವನ್ನುರೈತರಿಗೆ ನೇರವಾಗಿ ಸಿಗಬೇಕು ಎಂದು ರಾಮಗೇರಿ ಗ್ರಾಮದ ರೈತರಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಅನೂಪ ಸ್ಥಿತಿಯಲ್ಲಿ ಕಂದಾಯ ನಿರೀಕ್ಷಕ ಬಸವರಾಜ, ಎಮ್, ಕಾತ್ರಾಳ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸೋಮಣ್ಣ ಬೆಟಗೇರಿ ಸರ್ಕಾರದಿಂದ ಬಂದಂತಹ ಪರಿಹಾರವಾದ ಬೆಳೆ ಹಾನಿ, ಮಳೆಯ ಅತಿವೃಷ್ಠಿಗೆ ಮನೆ ಬಿದ್ದ ಪರಿಹಾರ, ಹಾಗೂ ರೈತರಗೆ ದೊರಕಿರುವ ಅನೇಕ ಪರಿಹಾರದ ಹಣವನ್ನು ಬ್ಯಾಂಕ್ ನವರು ರೈತರ ಹಳೆಯ ಕೃಷಿ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದು ಇದರಿಂದ ರೈತರಿಗೆ ತುಂಬಾ ತೊಂದರೆ ಉಂಟಾಗುತ್ತದೆ ರೈತರ ಉಪಜೀವನ ನಡೆಸುವುದೇ ಕಷ್ಟವಿರುವಾಗ ಸರ್ಕಾರದಿಂದ ಬಂದಂತ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಂಡು ತಮ್ಮ ಬ್ಯಾಂಕಿನ ಸಾಲ ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆದಕಾರಣ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿ ಹಳೆಯ ಸಾಲಕ್ಕೆ ಜಮಾ ಮಾಡಿಕೊಳ್ಳದೆ ಬ್ಯಾಂಕಿನವರಿಗೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಹೇಳಬೇಕು, ಇಲ್ಲವಾದರೆ ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸಬೇಕು ಇಲ್ಲವಾದಲ್ಲಿ ಸಮಸ್ತ ರಾಮಗಿರಿ ಗ್ರಾಮದ ರೈತಬಾಂಧವರು ರೋಡಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಅದಲ್ಲದೆ ರಾಮಗೇರಿ ಗ್ರಾಮ ಅಲ್ಲದೇ ತಾಲೂಕಿನ ಅನೇಕ ಗ್ರಾಮದ ಕೆಲವು ರೈತರ, ಬಡವರ ಮಾಸಾಶನವನ್ನು ಕಳೆದ ಮೂರು ತಿಂಗಳಿಂದ ತಡೆಹಿಡಿದು ಕೊಂಡಿದ್ದಾರೆ ಅದನ್ನು ಸಹ ಹಳೆಯ ಸಾಲಕ್ಕೆ ಜಮಾ ಮಾಡುತ್ತಿವೆ ಎಂದು ಬ್ಯಾಂಕಿನ ಸಿಬ್ಬಂದಿಗಳು ರೈತರಿಗೆ ಅವಾಜ್ ಹಾಕುತ್ತಿದ್ದಾರೆ, ಗ್ರಾಮದ ಗಿರಿಜಮ್ಮ ಕುಮಸಿ ಎಂಬ ವೃದ್ದೆ ಯ ಮಾಸಾಶನವನ್ನ ಅವರ ಮೊಮ್ಮಗ ಈರಣ್ಣ ಕುಮಸಿ ಎಂಬುವರ ಕೇಳಲಿಕ್ಕೆ ಹೋದಾಗ ಬ್ಯಾಂಕಿನವರು ಅರ್ಧ ಅಮೌಂಟ್ ಅನ್ನು ಹಳೆಯ ಸಾಲಕ್ಕೆ ಮುರಿದುಕೊಳ್ಳುತೇವೆ ಎಂದು ಹೇಳಿದ್ದಾರೆ. ಬ್ಯಾಡ್ರಿ ಸರ್ ನಮಗೆ ಕಷ್ಟ ಇದೆ ಕೊಡ್ರಿ ಅಂತ ಕೇಳಿದ್ರೆ, ಬ್ಯಾಂಕಿನವರು ಉಡಾಫೆ ಉತ್ತರ ಕೊಟ್ಟು ಕಳಿಹಿಸುತ್ತಾರೆ. ಇದೇ ತರಹ ಊರಿನ ರೈತರಿಗೆ ಅನ್ಯಾಯವಾಗುತ್ತಿದೆ ಇದನ್ನು ಸರಿಪಡಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಮದುವೆ ವಯಸ್ಸು ಹೆಚ್ಚಳ ಮಸೂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡನೆ

Thu Dec 23 , 2021
ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಮಂಡಿಸಿದರು.ಈ ಮಸೂದೆಗೆ ವಿರೋಧ ಪಕ್ಷಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಸಮಗ್ರ ಪರಿಶೀಲನೆಗಾಗಿ ಮಸೂದೆಯನ್ನು ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು.ವಿರೋಧ ಪಕ್ಷಗಳ ಕೆಲ ಸದಸ್ಯರು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಈ ಮಸೂದೆಯಿಂದ ಕೆಲ ವೈಯಕ್ತಿಕ ಕಾಯ್ದೆಗಳು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ವಾದಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial