ಕರಾವಳಿಯಾದ್ಯಂತ ಮಂಜು ಮುಸುಕಿದ ವಾತಾವರಣ.

ಕಾಪು: ಕರಾವಳಿಯಾದ್ಯಂತ ಗುರುವಾರ ಮುಂಜಾನೆ ಭಾರೀ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಈ ಬಾರಿ ಚಳಿಗಾಲದುದ್ದಕ್ಕೂ ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದ್ದು ಚಳಿಯ ಕಾರಣದಿಂದಾಗಿ ಎಲ್ಲೆಡೆ ಮುಸುಕಿದ ವಾತಾವರಣ ಕಂಡು ಬಂದಿದೆ.ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಡಕುಂಟಾಗಿದೆ.ಸೂರ್ಯೋದಯದ ವೇಳೆಯಲ್ಲಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.ಅನಿರೀಕ್ಷಿತವಾಗಿ ಕಾಣಿಸಿಕೊಂಡಿರುವ ಮಂಜು ಮಲ್ಲಿಗೆ ಬೆಳೆ, ಹೂ ಬಿಟ್ಟಿರುವ ಮಾವು, ಹಲಸು, ಗೇರು ಸಹಿತ ವಿವಿಧ ಬೆಳೆಗಳಿಗೆ ಮಾರಕವಾಗಲಿದ್ದು ಪ್ರಾಕೃತಿಕ ವೈಪರೀತ್ಯಕ್ಕೂ‌ ಕಾರಣವಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಕಟಪಾಡಿ: ಕರಾವಳಿಯ ಪರಿಸರದಲ್ಲಿ ಗುರುವಾರ ಬಹುತೇಕ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಬೆಳಗಾಗುತ್ತಿದಂತೆ ಮತ್ತಷ್ಟು ದಟ್ಟ ಮಂಜು ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡೆ ಓದಾಡುವ ಪ್ರಮೇಯ ಬಂದೋದಾಗಿತ್ತು.ಮಂಜಿನ ದಟ್ಟಣೆಯು ಮತ್ತಷ್ಟು ಹೆಚ್ಚುಗೊಳ್ಳುತ್ತಿದ್ದೂ ಗಾಳಿಯೊಂದಿಗೆ ಚಲಿಸಿ ನೆರೆಹೊರೆಯ ಮನೆಯು ಕಾಣಿಸಷ್ಟು ದಟ್ಟ ಮಂಜು ಮುಸುಕಿತ್ತು.ಕಟಪಾಡಿ ಪರಿಸರದ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಇದೇ ಸ್ಥಿತಿ ಮುಂದುವರೆದಿತ್ತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಭೂಮಾಪನಾ ಇಲಾಖೆ ನೌಕರರ ಸಂಘದಿಂದ ಆಯುಕ್ತ ಸಿ.ಎನ್. ಶ್ರೀಧರ್‌ಗೆ ಸನ್ಮಾನ.

Thu Feb 23 , 2023
ಕರ್ನಾಟಕ ರಾಜ್ಯ ಭೂಮಾಪನಾ ಇಲಾಖೆ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸಿ.ಎನ್.ಶ್ರೀಧರ್ ಐಎಎಸ್ ಅವರನ್ನು ರಾಜ್ಯ ಭೂಮಾಪನ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠ, ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಭೂಮಾಪನಾ ಇಲಾಖೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಜಿ.ಸುರೇಶ್‌ಬಾಬು ಮತ್ತಿತರರು ಸನ್ಮಾನಿಸಿದರು.ಈವರೆಗೂ ಆಯುಕ್ತರಾಗಿದ್ದ ಮನೀಶ್ ಮೌದ್ಗಿಲ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶ್ರೀಧರ್ ಬಂದಿದ್ದು, ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ನೌಕರರ […]

Advertisement

Wordpress Social Share Plugin powered by Ultimatelysocial