ನಾಲ್ಕು ವರ್ಷ ‘ಕೆಜಿಎಫ್ 2’ ಗೆ ಕಾದು ಕೂತಿದ್ದ ಫ್ಯಾನ್ಸ್ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.!

 

ನಾಲ್ಕು ವರ್ಷ ‘ಕೆಜಿಎಫ್ 2’ ಸಿನಿಮಾಗಾಗಿ ಕಾದು ಕೂತಿದ್ದ ಫ್ಯಾನ್ಸ್ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಮಧ್ಯರಾತ್ರಿಯಿಂದಲೇ ‘ಕೆಜಿಎಫ್ 2’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಕೆಲವಡೆ ಒಂದು-ಎರಡು ಎಕ್ಸ್‌ಟ್ರಾ ಶೋಗಳನ್ನು ಹಾಕಲಾಗಿತ್ತು.

ಮೊದಲ ದಿನ ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ‘ಕೆಜಿಎಫ್ 2’ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

‘ಕೆಜಿಎಫ್ 2’ ಬಿಡುಗಡೆ ಆಗೋವರೆಗೂ ಸಿನಿಮಾ ಬಗ್ಗೆ ಕುತೂಹಲವಿತ್ತು. ಈಗ ಸಿನಿಮಾ ರಿಲೀಸ್ ಆಗಿದ್ದು, ‘ಕೆಜಿಎಫ್ 2’ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಯಶ್ ಸಿನಿಮಾ ಯಾವ್ಯಾವ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡುತ್ತೆ? ಬಾಕ್ಸಾಫೀಸ್‌ನಲ್ಲಿ ಯಾವ್ಯಾವ ಹೊಸ ದಾಖಲೆ ಸೃಷ್ಟಿಸುತ್ತೆ? ಎಂದು ತಿಳಿಯಲು ಕಾತುರರಾಗಿದ್ದಾರೆ.

‘ಕೆಜಿಎಫ್ 2’ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಸಿನಿಮಾ ನೋಡಿದ ಬಹುತೇಕ ಮಂದಿಗೆ ‘ಕೆಜಿಎಫ್ 2’ ಇಷ್ಟ ಆಗಿದೆ. ಆದರೆ ಈ ಸಿನಿಮಾ ರಾಜಮೌಳಿ ನಿರ್ದೇಶಿಸಿದ RRR ಚಿತ್ರದ ಮೊದಲ ದಿನದ ಗಳಿಕೆಯನ್ನು ಬೀಟ್ ಮಾಡುತ್ತಾ ಎಂಬ ಕುತೂಹಲವಿದೆ. ಆದರೆ, ಅದು ಸಾಧ್ಯವಾಗಿಲ್ಲ. ಹಾಗಿದ್ದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ಮೊಲದ ವಿಶ್ವದಾದ್ಯಂತ ಗಳಿಸಿದ್ದು ಎಷ್ಟು ತಿಳಿಯಲು ಮುಂದೆ ಓದಿ.

‘ಕೆಜಿಎಫ್ 2’ ಕರ್ನಾಟಕ ಕಲೆಕ್ಷನ್ ಎಷ್ಟು?
‘ಕೆಜಿಎಫ್ 2’ ಕರ್ನಾಟಕದಲ್ಲಿ ಫಸ್ಟ್ ಡೇ ಫುಲ್ ಪ್ಯಾಕ್ ಪ್ರದರ್ಶನ ಕಂಡಿದೆ. ಶೇ. 90ರಷ್ಟು ಚಿತ್ರಮಂದಿರಗಳು ಮೊದಲ ಉತ್ತಮ ಕಲೆಕ್ಷನ್ ಮಾಡಿದೆ ಎಂಬುದನ್ನು ವಿತರಕರು ಹೇಳುತ್ತಾರೆ. ಸುಮಾರು 400ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್ 2’ ಬಿಡುಗಡೆಯಾಗಿತ್ತು. ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲೂ ರಿಲೀಸ್ ಆಗಿದ್ದು, ಎಲ್ಲಾ ಕಡೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಈ ಕಾರಣಕ್ಕೆ ಕರ್ನಾಟಕದಲ್ಲಿ ಮೊದಲ ದಿನ ಬರೋಬ್ಬರಿ 38 ಕೋಟಿ ಗಳಿಸಿದೆ ಎಂದು ವಿತರಕರ ವಲಯ ಹೇಳುತ್ತಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?

‘ಕೆಜಿಎಫ್ 2’ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲೂ ಅದ್ಭುತ ಗಳಿಕೆ ಕಂಡಿದೆ. ಬಿಡುಗಡೆಗೂ ಮುನ್ನ ಕನ್ನಡಕ್ಕಿಂತ ಹಿಂದಿ, ತೆಲುಗು ಭಾಷೆಯಲ್ಲಿ ಹೆಚ್ಚು ಕ್ರೇಜ್ ಇದೆ ಎಂದು ಅಂದಾಜಿಸಲಾಗಿತ್ತು. ಅದಂತೆ ಉಳಿದ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ ಕಲೆಕ್ಷನ್ 80 ಕೋಟಿ ದಾಟಿದೆ ಎನ್ನಲಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 40 ರಿಂದ 45 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ತೆಲುಗು ಬಾಕ್ಸಾಫೀಸ್‌ನಲ್ಲಿ 25 ಕೋಟಿ, ತಮಿಳಿನಲ್ಲಿ 6 ರಿಂದ 7 ಹಾಗೂ ಮಲಯಾಳಂನಲ್ಲಿ 5 ಕೋಟಿ ದಾಟಿದೆ ಎನ್ನಲಾಗಿದೆ.

‘ಕೆಜಿಎಫ್ 2’ ಹವಾ ವಿದೇಶದಲ್ಲೂ ಜೋರು

ಭಾರತದ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ದಾಖಲೆ ಬರೆದಿದೆ. ಕೇವಲ ಭಾರತದಲ್ಲೇ 100 ಕೋಟಿ ಕ್ಲಬ್ ಸೇರಿದೆ. ಹಾಗೇ ವಿದೇಶದಲ್ಲೂ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ಈ ಸಿನಿಮಾ ವಿದೇಶದಲ್ಲಿ ಸುಮಾರು 25 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಕರ್ನಾಟಕದ ವಿತರಕರ ಪ್ರಕಾರ, ‘ಕೆಜಿಎಫ್ 2’ ಮೊದಲ ಗಳಿಸಿದ ಒಟ್ಟು ಲೆಕ್ಕಚಾರ ಹೀಗಿದೆ.

ಕರ್ನಾಟಕ 38 ಕೋಟಿ (ಅಂದಾಜು)
ಹಿಂದಿ 40-45 ಕೋಟಿ (ಅಂದಾಜು)
ಆಂಧ್ರ, ತೆಲಂಗಾಣ 25 ಕೋಟಿ (ಅಂದಾಜು)
ತಮಿಳು ನಾಡು 6-7 ಕೋಟಿ (ಅಂದಾಜು)
ಕೇರಳ 5 ಕೋಟಿ (ಅಂದಾಜು)
ವಿದೇಶ 25 ಕೋಟಿ (ಅಂದಾಜು)
ಒಟ್ಟು 139-145 ಕೋಟಿ (ಅಂದಾಜು)

RRR ದಾಖಲೆ ಮುರಿಯಲಿಲ್ಲ

‘ಕೆಜಿಎಫ್ 2’ ರಾಜಮೌಳಿ ನಿರ್ದೇಶನದ RRR ಸಿನಿಮಾದ ದಾಖಲೆಯನ್ನು ಮುರಿಯುತ್ತೆ ಎಂದು ನಂಬಲಾಗಿತ್ತು. ಆದರೆ, ವಿತರಕರು ನೀಡಿದ ಅಂಕಿ ಅಂಶಗಳ ಪ್ರಕಾರ, RRR ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಭಿನಯದ RRR ಮೊದಲ 223 ಕೋಟಿ ಗಳಿಕೆ ಮಾಡಿತ್ತು. ಅಸಲಿಗೆ ‘ಕೆಜಿಎಫ್ 2’ ಹಲವು ವಿತರಕರಿಂದ ಪಡೆದ ಮಾಹಿತಿಯಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಇನ್ನೂ ಮಾಹಿತಿ ಹೊರ ಹಾಕಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಾಹದ ಬಳಿಕ ಆಲಿಯಾ ಭಟ್​ ಜೊತೆ ರಣಬೀರ್​ ಪೋಸ್​ ನೀಡಿದ್ದಾರೆ.!

Fri Apr 15 , 2022
  ಬಾಲಿವುಡ್​ ಸೆಲೆಬ್ರಿಟಿಗಳಾದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್  ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಇವರ ಮದುವೆ ಬಗ್ಗೆ ಸಿಕ್ಕಾಪಟ್ಟೆ ರಹಸ್ಯ ಕಾಯ್ದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು ಇತ್ತೀಚೆಗೆ ತಮ್ಮ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದರು. ಆದರೆ ಮದುವೆ ದಿನಾಂಕವನ್ನು ಗೌಪ್ಯವಾಗಿ ಇಟ್ಟಿದ್ದರು. ಅಂತೂ ಇಂತೂ ಏ.14ರಂದು ಆಪ್ತರ ಸಮ್ಮುಖದಲ್ಲಿ ಆಲಿಯಾ ಭಟ್ ​ ಮತ್ತು ರಣಬೀರ್​ ಕಪೂರ್​ ಹಸೆಮಣೆ ಏರಿದರು. ಈ […]

Advertisement

Wordpress Social Share Plugin powered by Ultimatelysocial