ʼತುಪ್ಪʼ ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು.

ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು.ತುಪ್ಪ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಪ್ ಬಾಮ್ ಅಥವಾ ಜೆಲ್ ಗಳಿಗಿಂತ ಉತ್ತಮವಾದುದು. ತುಟಿ ಒಡೆದಾಗ, ಸಿಪ್ಪೆ ಎದ್ದು ಬಂದಾಗ, ಕಳಾಹೀನವಾಗಿದೆ ಎನಿಸಿದಾಗ ಎರಡು ಹನಿ ತುಪ್ಪ ಸವರಿಕೊಳ್ಳಿ, ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಮತ್ತೂ ಒಳ್ಳೆಯದು.ವಾರದೊಳಗೆ ಅದರ ಪರಿಣಾಮವನ್ನು ನೀವು ಕಾಣಬಹುದು.ಇದು ತುಟಿಗೆ ಮೃದುತ್ವ ಕೊಡುತ್ತದೆ ಮಾತ್ರವಲ್ಲ ನಿಮ್ಮ ಕಾಲಿನ ಹಿಮ್ಮಡಿ ಒಡೆದಿದ್ದರೆ ಅದಕ್ಕೂ ತುಪ್ಪ ಅತ್ಯುತ್ತಮ ಮದ್ದು. ತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಂಡು ಒಡೆದ ಜಾಗಕ್ಕೆ ನಯವಾಗಿ ಹಚ್ಚಿ. ಎರಡೇ ದಿನದಲ್ಲಿ ಒಡೆದ ಭಾಗ ಸ್ವಚ್ಛವಾಗುತ್ತದೆ.ದೇಹಕ್ಕೆ ಮಾಯಿಸ್ಚರೈಸರ್ ಆಗಿಯೂ ತುಪ್ಪವನ್ನು ಬಳಸಬಹುದು. ಸ್ನಾನಕ್ಕೆ ಮುಂಚೆ ದೇಹಕ್ಕೆ ತುಪ್ಪದ ಪಸೆ ಸವರಿ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಮೃದುವಾಗಿಯೇ ಉಳಿಯುತ್ತದೆ. ಒಣ ತ್ವಚೆಯವರು ಇದನ್ನು ಪ್ರಯತ್ನಿಸಿ ನೋಡಿ.ಮಂಡಿ, ಮೊಣಕೈ ಕಾಲಿನ ಭಾಗ ಕಪ್ಪಾಗಿದ್ದರೆ ಅದಕ್ಕೆ ತುಪ್ಪದೊಂದಿಗೆ ಟೀಟ್ರೀ ಎಣ್ಣೆ ಬೆರೆಸಿ ಹಚ್ಚಿ. ಒಂದು ತಿಂಗಳಲ್ಲಿ ನಿಮ್ಮ ಸಮಸ್ಯೆ ದೂರವಾಗುತ್ತದೆ.ಮೇಕಪ್ ಹಾಕಿ ಕಾರ್ಯಕ್ರಮ ಮುಗಿಸಿ ಮರಳಿ ಬಂದ ಬಳಿಕ ಅದನ್ನು ಹೇಗೆ ತೆಗೆಯುವುದು ಎಂಬ ಚಿಂತೆಯೂ ಬೇಡ. ತುಪ್ಪವನ್ನು ರಿಮೂವರ್ ಆಗಿಯೂ ಬಳಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಡಿಯೊ: ವಿರಾಟ್‌, ಬಾಬರ್‌ ಮತ್ತಿತರರ ಅಂದು ಮತ್ತು ಇಂದಿನ ಬ್ಯಾಟಿಂಗ್‌ ಶೈಲಿ ನೋಡಿ

Fri Feb 4 , 2022
ಬೆಂಗಳೂರು: ವಿರಾಟ್‌ ಕೊಹ್ಲಿ, ಬಾಬರ್‌ ಆಜಮ್‌, ಸ್ಟೀವ್‌ ಸ್ಮಿತ್‌ ಮತ್ತಿತರ ದಿಗ್ಗಜ ಆಟಗಾರರ ’19 ವರ್ಷದೊಳಗಿನವರ ಕ್ರಿಕೆಟ್‌’ ದಿನಗಳ ಬ್ಯಾಟಿಂಗ್‌ ಶೈಲಿಯನ್ನು ಇಂದಿನ ಆಟಕ್ಕೆ ಪರಸ್ಪರ ಹೋಲಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ವಿಡಿಯೊ ಹಂಚಿಕೊಂಡಿದೆ.ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ಬಾಬರ್‌ ಆಜಮ್‌, ಜೋ ರೂಟ್‌, ಸ್ಟೀವ್‌ ಸ್ಮಿತ್‌ ಮತ್ತು ಬೆನ್‌ ಸ್ಟೋಕ್‌ ಅವರ ಅಂದಿನ ಮತ್ತು ಇಂದಿನ ಬ್ಯಾಟಿಂಗ್‌ ಶೈಲಿಯನ್ನು ಹೋಲಿಸಿದ ವಿಡಿಯೊ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ. […]

Advertisement

Wordpress Social Share Plugin powered by Ultimatelysocial