‘ಒಂದಂಕೆ ಕಾಡು’ ಮೋಷನ್ ಪೋಸ್ಟರ್ ರಿಲೀಸ್… ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಿರ್ದೇಶಕ ರಾಮಚಂದ್ರ ವೈದ್ಯ!

ಜೊತೆ ಜೊತೆಯಲಿ, ಶುಭ ವಿವಾಹ, ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳ ನಿರ್ದೇಶಿಸಿ.. ಕಳೆದ ಹದಿನೈದು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಛಾಪೂ ಮೂಡಿಸಿರುವ ನಿರ್ದೇಶಕ ರಾಮಚಂದ್ರ ವೈದ್ಯ ಈಗ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಒಂದಂಕೆ ಕಾಡು ಸಿನಿಮಾ ಮೂಲಕ ಚಂದನವನದ ಅಂಗಳ ಪ್ರವೇಶಿಸಿದ್ದಾರೆ. Note that unlike the free chip, this offer is specific to slots and https://teyasilk.com/how-to-open-a-mills-slot-machine-without-a-key/ the other games in that family. ಒಂದಂಕೆ ಕಾಡು ಮೋಷನ್ ಪೋಸ್ಟರ್ ರಿಲೀಸ್

ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಒಂದಂಕೆ ಕಾಡು ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ದಟ್ಟ ಅರಣ್ಯ…ಮರದ ಬೇರಿನಿಂದ ಸೃಷ್ಟಿಸಿರುವ ಒಂದಾಕೃತಿ, ಅರಣ್ಯದಲ್ಲಿ ಕುಳಿತಿರುವ ಎರಡು ಜೋಡಿ…ಹೀಗೆ ಸಾಕಷ್ಟು ಸ್ಪೆಷಾಲಿಟಿಯಿಂದ ಮೋಷನ್ ಪೋಸ್ಟರ್ ಕೂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ..

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಒಂದಂಕೆ ಕಾಡು ಸಿನಿಮಾದಲ್ಲಿ ಪ್ರಜ್ವಲ್ ಪೊನ್ನನ್ನ ಸೋನಿ ಮುಲೇವ , ನೀರ್ನಳ್ಳಿ ರಾಮಕೃಷ್ಣ, ಕಿರಣ್ ನಾಯಕ್, ಮಧು ಹೆಗಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಒಂದಂಕೆ ಕಾಡು ಸಿನಿಮಾಗೆ ಶ್ರಾವಣಿ ಶಿವ್ ಕಥೆ, ರಾಮಚಂದ್ರ ವೈದ್ಯ ಚಿತ್ರಕಥೆ ಬರೆದಿದ್ದು, ಟಿಜಿ ನಂದೀಶ್ ಸಂಭಾಷಣೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಉಗ್ರಂ, ಕೆಜಿಎಫ್ ಚಾಪ್ಟರ್-1 ಸಿನಿಮಾ ಖ್ಯಾತಿ ಶ್ರೀಕಾಂತ್ ಸಂಕಲನ, ಮಧು ಹೆಗ್ಡೆ ಮ್ಯೂಸಿಕ್ ಸಿನಿಮಾದಲ್ಲಿದೆ. ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದ ಹಾಡುಗಳಿಗೆ ಹೃದಯ ಶಿವ ಹಾಗೂ ಡಾಕ್ಟರ್ ಉಮೇಶ್ ಸಾಹಿತ್ಯ ಬರೆದಿದ್ದು, RRR ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ವರದರಾಜು ಚಿಕ್ಕಬಳ್ಳಾಪುರ ತೆಲುಗಿನಲ್ಲಿ ಈ ಸಿನಿಮಾಗೆ ಸಾಹಿತ್ಯ ಬರೆದಿದ್ದಾರೆ. ಶ್ರೀಮಹಾಕಾಳಿ ಪ್ರೊಡಕ್ಷನ್ ನಡಿ ಸಿನಿಮಾ ಮೂಡಿ ಬರ್ತಿದ್ದು, ಪಶ್ಚಿಮ ಘಟ್ಟ ಭಾಗದ ಕಾರವಾರ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,067 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ!

Wed Apr 20 , 2022
ಕಳೆದ 24 ಗಂಟೆಗಳಲ್ಲಿ 2,067 ಹೊಸ ಸೋಂಕುಗಳು ವರದಿಯಾಗಿರುವುದರಿಂದ ಭಾರತವು ತನ್ನ ದೈನಂದಿನ COVID-19 ಕ್ಯಾಸೆಲೋಡ್‌ನಲ್ಲಿ ಹೆಚ್ಚಳವನ್ನು ದಾಖಲಿಸುವುದನ್ನು ಮುಂದುವರೆಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಮಂಗಳವಾರಕ್ಕೆ ಹೋಲಿಸಿದರೆ ಭಾರತದಲ್ಲಿ ಇಂದು ಒಟ್ಟು 820 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಮಂಗಳವಾರ ದೇಶದಲ್ಲಿ 1,247 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12,340 ಕ್ಕೆ ಏರಿದೆ, ಇದು ಒಟ್ಟು ಪ್ರಕರಣಗಳಲ್ಲಿ ಶೇಕಡಾ […]

Advertisement

Wordpress Social Share Plugin powered by Ultimatelysocial