ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17 ರಿಂದ 21 ಸೀಟುಗಳು.

ರಾಜ್ಯದ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವಾರಗಳು ಉಳಿದಿವೆ. ಈಗ ನಡೆದಿರುವ ಚುನಾವಣಾ ಸಮೀಕ್ಷೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.ಫೆಬ್ರವರಿ 14ರಂದು 40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದ ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.ಭಾನುವಾರ -Ground Zero ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಲಿದೆ. ಜಿಎಫ್‌ಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ.ಗೋವಾ ಚುನಾವಣೆ. ಫೆ. 2ಕ್ಕೆ ರಾಹುಲ್‌ ಗಾಂಧಿಯಿಂದ ಪ್ರಣಾಳಿಕೆ ಬಿಡುಗಡೆರಾಜ್ಯದ 40 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 37 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಿಎಫ್‌ಪಿಗೆ 3 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. 2017ರ ಚುನಾವಣೆ ಬಳಿಕ ಮನೋಹರ್ ಪರಿಕ್ಕರ್‌ಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಜಿಎಫ್‌ಪಿ ಬೆಂಬಲ ನೀಡಿತ್ತು. ಆದರೆ 2022ರಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಜೊತೆ ಪಕ್ಷ ಕೈ ಜೋಡಿಸಿದೆ.ರಾಹುಲ್‌ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ, ಅಮಿತ್‌ ಶಾ ಇನ್ನು ಮೊದಲ ಬಾರಿಗೆ ಗೋವಾ ಚುನಾವಣಾ ಕಣಕ್ಕಿಳಿದಿರುವ ಟಿಎಂಸಿ ಪಕ್ಷ ಎಂಜಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಎಎಪಿ ಪಕ್ಷ ಸಹ ರಾಜ್ಯದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ.ಗೋವಾ ಚುನಾವಣೆ; ಭಂಡಾರಿ ಸಮುದಾಯದ ರಾಜಕೀಯ ಮಹತ್ವ ಯಾರಿಗೆ ಎಷ್ಟು ಸೀಟು ಸಿಗಲಿದೆ?ಗೋವಾದ 40 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 17 ರಿಂದ 21 ಸ್ಥಾನ. ಬಿಜೆಪಿಗೆ 14 ರಿಂದ 18 ಸ್ಥಾನ, ಟಿಎಂಸಿ & ಎಂಜಿಪಿ ಮೈತ್ರಿಕೂಟಕ್ಕೆ 2-4 ಸ್ಥಾನ, ಎಎಪಿಗೆ 02-2 ಸ್ಥಾನ ಸಿಗಲಿದೆ, ಇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21.2017ರ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನದಲ್ಲಿ ಗೆಲುವು ಸಾಧಿಸಿದ್ದವು. ಆದರೆ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ ನಾಗರಿಕರ ಉಳಿತಾಯ ಯೋಜನೆ ನಿಮಗೆಷ್ಟು ಗೊತ್ತು.

Mon Jan 31 , 2022
  ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು (Public) ಹಿರಿಯ ನಾಗರಿಕರ ಉಳಿತಾಯ ಯೋಜನೆ(Senior Citizen Saving Scheme) ಯಲ್ಲಿ ಹೂಡಿಕೆ (Investment) ಮಾಡುತ್ತಿದ್ದಾರೆ. ವಿಶೇಷವಾಗಿ ಈ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ಪ್ರಾರಂಭಿಸಲಾಗಿದೆ. ಇದರಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದು. ಪ್ರಸ್ತುತ, ಈ ಯೋಜನೆಯು ಶೇಕಡಾ 7.4 ರ ಬಡ್ಡಿದರವನ್ನು ಪಡೆಯುತ್ತಿದೆ. ಇದು ಬ್ಯಾಂಕ್ FD (Fixed Deposit) ಗಳಲ್ಲಿ ಲಭ್ಯವಿರುವ […]

Advertisement

Wordpress Social Share Plugin powered by Ultimatelysocial