ಬಂಗಾರದ ದರದಲ್ಲಿ 330 ರೂ. ಏರಿಕೆ

ಬಂಗಾರದ ದರದದಲ್ಲಿ ಸೋಮ ವಾರ 330 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 56340 ರೂ.ಗೆ ವೃದ್ಧಿಸಿದೆ.‌22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 300 ರೂ.ಏರಿಕೆಯಾಗಿದ್ದು, 51,650 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 500 ರೂ. ಹೆಚ್ಚಳವಾಗಿದ್ದು, 74,900 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರದಲ್ಲಿ 30 ರೂ. ಇಳಿಕೆಯಾಗಿದ್ದು, 28,800 ರೂ.ಗೆ ಇಳಿಕೆಯಾಗಿದೆ.ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಬಂಗಾರದ ದರದದಲ್ಲಿ ಮಂಗಳವಾರ 530 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 55,630 ರೂ.ಗೆ ವೃದ್ಧಿಸಿದೆ.‌22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 500 ರೂ. ಏರಿಕೆಯಾಗಿದ್ದು, 51,000 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1,000 ರೂ. ಹೆಚ್ಚಳವಾಗಿದ್ದು, 75,500 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರದಲ್ಲಿ 470 ರೂ. ಏರಿಕೆಯಾಗಿದ್ದು, 28,880 ರೂ.ಗೆ ಹೆಚ್ಚಳವಾಗಿದೆ.ಬಂಗಾರದ ದರ 2023ರಲ್ಲಿ 61,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು (Gold price) ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸೋಮವಾರ ಒಂದೇ ದಿನ 22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಬಂಗಾರದ ದರದಲ್ಲಿ 5,000 ರೂ. ಏರಿಕೆಯಾಗಿದೆ. 24 ಕ್ಯಾರಟ್‌ ಚಿನ್ನದ ದರ ಯಥಾಸ್ಥಿತಿಯಲ್ಲಿ ಇತ್ತು. ಬೆಳ್ಳಿಯ ದರ ಕೆ.ಜಿಗೆ 74,300 ರೂ.ನಷ್ಟಿತ್ತು.ಪ್ಲಾಟಿನಮ್‌ ದರ ಪ್ರತಿ 10 ಗ್ರಾಮ್‌ಗೆ 28,430 ರೂ.ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ದರ 2022ರ ಮಧ್ಯಭಾಗದಲ್ಲಿ 1615 ಡಾಲರ್‌ ಇತ್ತು. ಅದು ಈಗ 1800 ಡಾಲರ್‌ಗೆ ಏರಿದೆ. ಇನ್ನೂ ಏರಿಕೆ ನಿರೀಕ್ಷಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೆನ್ಸೆಕ್ಸ್‌ 650 ಅಂಕ ಜಿಗಿತ, 18,000 ಅಂಕಗಳ ಗಡಿ ದಾಟಿದ ನಿಫ್ಟಿ

Mon Jan 9 , 2023
  ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಮಧ್ಯಂತರದಲ್ಲಿ 650 ಅಂಕ ಜಿಗಿಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 18,000 ಅಂಕಗಳ ಮೈಲುಗಲ್ಲನ್ನು ಮತ್ತೆ ದಾಟಿತು. (Stock Market) ಟಿಸಿಎಸ್‌ ಷೇರು ದರ 3% ಏರಿತು.ಅಮೆರಿಕದಲ್ಲಿ ಸದ್ಯಕ್ಕೆ ಬಡ್ಡಿ ದರ ಏರಿಕೆಯ ಸಾಧ್ಯತೆ ಕ್ಷೀಣಿಸಿರುವುದು ಜಾಗತಿಕ ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಹೂಡಿಕೆದಾರರ ಸಂಪತ್ತಿನಲ್ಲಿ 3.45 ಲಕ್ಷ ಕೋಟಿ ರೂ. ಏರಿತು. ಬಿಎಸ್‌ಟಿ ಷೇರುಗಳ ಒಟ್ಟು […]

Advertisement

Wordpress Social Share Plugin powered by Ultimatelysocial