ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ ಹಣ ದೋಚುವ ಖತರ್ನಾಕ್​ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ: ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ ಹಣ ದೋಚುವ ಖತರ್ನಾಕ್​ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಡಿಪಾಯ ತೆಗೆಯುವಾಗ ಚಿನ್ನ ಸಿಕ್ಕಿದೆ. ಅದನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿ ಆರೋಪಿಗಳು ವಂಚನೆ ಮಾಡುತ್ತಿದ್ದರು.ಯಲಬುರ್ಗಾ ತಾಲೂಕಿನ ವಣಗೇರಿಯ ವೆಂಕಟೇಶ ಎಂಬುವರನ್ನ ನಂಬಿಸಿ 5 ಲಕ್ಷ ಹಣ ದೋಚಿದ್ದರು. ನನ್ನ ಹೆಸರು ರಮೇಶ. ಚಿಕ್ಕಮಗಳೂರಿನ ನಿವಾಸಿ ಎಂದು ಹೇಳಿ ವೆಂಕಟೇಶ್​ಗೆ ಆರೋಪಿಗಳು ಫೋನು‌ ಮಾಡಿದ್ದರು. ಹಲಗೇರಿ ಬಳಿ ಹಣ ತಂದರೆ ನಿಮಗೆ ಚಿನ್ನವನ್ನು ಕೊಡುತ್ತೇವೆ ಎಂದು ಹೇಳಿದ್ದರು.ಆರೋಪಿಗಳ ಮಾತನ್ನು ನಂಬಿ ವೆಂಕಟೇಶ್​ ಹಲಗೇರಿಗೆ ಬಂದಾಗ ಅವರಿಂದ 5 ಲಕ್ಷ ರೂ. ಹಣವನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಫೆ.1 ರಂದು 6 ಜನರ ಗ್ಯಾಂಗ್​ನಿಂದ ಈ ಕೃತ್ಯ ನಡೆದಿತ್ತು. ಪರಾರಿಯಾಗಿದ್ದ 6 ಜನರ ಪೈಕಿ 4 ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಕೊಪ್ಪಳ ತಾಲೂಕು ಅಳವಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಸಕಾರಾತ್ಮಕತೆಯ ದರವು 7.9% ಕ್ಕೆ ಇಳಿಯುತ್ತದೆ, 1,27,952 ಹೊಸ ಪ್ರಕರಣಗಳು ಪತ್ತೆಯಾಗಿವೆ

Sat Feb 5 , 2022
  ಭಾರತದಲ್ಲಿ ಇಂದು 1,27,952 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಿನ್ನೆಗಿಂತ 14% ಕಡಿಮೆಯಾಗಿದೆ. ಸಕಾರಾತ್ಮಕತೆಯ ಪ್ರಮಾಣವು 7.9% ಕ್ಕೆ ಕುಸಿದಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 3.16 ಪ್ರತಿಶತವನ್ನು ಹೊಂದಿದ್ದರೆ, ರಾಷ್ಟ್ರೀಯ COVID-19 ಚೇತರಿಕೆ ದರವು 95.64 ಪ್ರತಿಶತಕ್ಕೆ ಇಳಿದಿದೆ. ಡಿಸೆಂಬರ್‌ನಿಂದ, ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ವೇಗವಾಗಿ ಏರುತ್ತಿದೆ. ಭಾರತದ ಸಕ್ರಿಯ ಕ್ಯಾಸೆಲೋಡ್ ಪ್ರಸ್ತುತ 13,31,648 ರಷ್ಟಿದೆ.ಕಳೆದ 24 ಗಂಟೆಗಳಲ್ಲಿ 1,059 ಹೊಸ ಕೋವಿಡ್ ಸಂಬಂಧಿತ […]

Advertisement

Wordpress Social Share Plugin powered by Ultimatelysocial