ಗೋವಿಂದ್ ನಿಹಲಾನಿ

ಗೋವಿಂದ ನಿಹಲಾನಿ ಭಾರತೀಯ ಚಿತ್ರರಂಗ ಕಂಡ ಮಹಾನ್ ಚಲನಚಿತ್ರ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾ ಲೇಖಕ ಮತ್ತು ನಿರ್ಮಾಪಕ. ಅವರದ್ದು ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಐದು ಫಿಲಂಫೇರ್ ಪ್ರಶಸ್ತಿ ಗಳಿಸಿದ ಸಾಧನೆ.ಗೋವಿಂದ ನಿಹಲಾನಿ 1940ರ ಡಿಸೆಂಬರ್ 18ರಂದು ಕರಾಚಿಯಲ್ಲಿ ಜನಿಸಿದರು.ಗೋವಿಂದ ನಿಹಲಾನಿ ಸಿನಿಮಾ ಕ್ಷೇತ್ರಕ್ಕೆ ಬಂದದ್ದು ಕನ್ನಡ ನಾಡಿನ ಮೂಲಕ. 1962ರಲ್ಲಿ ಅವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಮೂಲಕ ಸಿನಿಮಾ ಛಾಯಾಗ್ರಹಣದ ಪದವಿ ಪಡೆದರು. ವಿ. ಕೆ. ಮೂರ್ತಿ ಅವರಿಗೆ ಸಹಾಯಕ ಛಾಯಾಗ್ರಾಹಕರಾದರು. ಗಿರೀಶ್ ಕಾರ್ನಾಡರು ದ. ರಾ. ಬೇಂದ್ರೆ ಕುರಿತು ನಿರ್ಮಿಸಿದ ಕಿರುಚಿತ್ರಕ್ಕೆ ಛಾಯಾಗ್ರಹಣ ನೀಡಿದ ಗೋವಿಂದ ನಿಹಲಾನಿ ಕಾರ್ನಾಡರು ನಿರ್ದೇಶಿಸಿದ ‘ಕಾಡು’ ಚಿತ್ರಕ್ಕೂ ಛಾಯಾಗ್ರಹಣ ಮಾಡಿದರು. ಮುಂದೆ ಶ್ಯಾಮ್ ಬೆನೆಗಲ್ ಅವರ ಬಹುತೇಕ ಪ್ರಸಿದ್ಧ ಚಿತ್ರಗಳಾದ ಅಂಕುರ್, ನಿಶಾಂತ್, ಮಂಥನ್, ಜುನೂನ್, ಕಲ್ಯುಗ್ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಗೋವಿಂದ ನಿಹಲಾನಿ, ಆಸ್ಕರ್ ಪ್ರಶಸ್ತಿ ಪುರಸ್ಕೃತ ರಿಚರ್ಡ್ ಅಟೆನ್ಬರೊ ಅವರ ಗಾಂಧೀ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರು. 1979ರಲ್ಲಿ ‘ಜುನೂನ್’ ಚಿತ್ರದ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು.

ಮುಂದೆ ಗೋವಿಂದ ನಿಹಲಾನಿ ಚಿತ್ರರಂಗದ ಮಹತ್ವಪೂರ್ಣ ನಿರ್ದೇಶಕರಲ್ಲೊಬ್ಬರೆನಿಸಿದರು. ಗೋವಿಂದ ನಿಹಲಾನಿ ಅವರ ಪ್ರಥಮ ನಿರ್ದೇಶನದ ಚಿತ್ರ 1980ರ ‘ಆಕ್ರೋಶ್’. ಇದರಲ್ಲಿ ಓಂ ಪುರಿ, ನಸೀರುದ್ದೀನ್ ಶಾ, ಸ್ಮಿತಾ ಪಾಟೀಲ್ ಮತ್ತು ಅಮರೀಶ್ ಪುರಿ ನಟಿಸಿದರು. ವಿಜಯ್ ತೆಂಡುಲ್ಕರ್ ಚಿತ್ರಕಥೆ ರಚಿಸಿದ್ದರು. 1981ರಲ್ಲಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗಳಿಸಿತು. ಅವರ ಎರಡನೇ ಚಿತ್ರ ‘ಅರ್ಧ್ ಸತ್ಯ’ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆಯಿತು. 1988ರಲ್ಲಿ ‘ತಮಸ್’ ನಿರ್ದೇಶಿಸಿದರು. 1990ರಲ್ಲಿ ‘ದೃಷ್ಟಿ’ ನಿರ್ದೇಶಿಸಿದರು. 1997ರಲ್ಲಿ ಮಹಾಶ್ವೇತಾದೇವಿ ವರ್ಮ ಅವರ ಕಥೆಯಾಧಾರಿತ ‘ಹಜಾರ್ ಚೌರಾಸಿಯಾ ಕಾ ಮಾ’ ನಿರ್ದೇಶಿಸಿದರು. ಇವೆಲ್ಲ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದ ಚಿತ್ರಗಳು.
ಗೋವಿಂದ ನಿಹಲಾನಿ ಅವರ ಇತರ ಚಿತ್ರಗಳಲ್ಲಿ ವಿಜೇತಾ, ಪಾರ್ಟಿ, ಆಘಾತ್, ಪಿತಾ, ರುಕ್ಮಾವತಿ ಕಿ ಹವೇಲಿ, ಜಸೀರೆ, ದ್ರೋಹ್ ಕಾಲ್, ಸಂಶೋಧನ್, ಕುರುಥಿಪೂನಲ್ (ದ್ರೋಹಕಾಲ್ ತಮಿಳು ರೀಮೇಕ್) , ತಕ್ಷಕ್, ದೇಹಮ್, ದೇವ್, ತಿ ಅನಿ ಇತರ್, ಹಾಗೂ 3 ಡಿ ಅನಿಮೇಷನ್ ಚಿತ್ರ ‘ಅಪ್ ಅಪ್ ಅಂಡ್ ಅಪ್’ ಸೇರಿವೆ.
ಗೋವಿಂದ ನಿಹಲಾನಿ ಅವರು ಗುಲ್ಜಾರ್ ಮತ್ತು ಸೈಬಲ್ ಚಟರ್ಜಿ ಅವರೊಂದಿಗೆ ಎನ್ಸೈಕ್ಲೋಪೀಡಿಯಾ ಆಫ್ ಹಿಂದಿ ಸಿನಿಮಾ ಕೃತಿ ರಚಿಸಿದ್ದಾರೆ.
ಗೋವಿಂದ ನಿಹಲಾನಿ ಅವರಿಗೆ ಪದ್ಮಶ್ರೀ ಪುರಸ್ಕಾರವೂ ಸಂದಿದೆ.
ಪ್ರತಿಭಾವಂತ ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ತಂತ್ರಜ್ಞರಾದ ಗೋವಿಂದ ನಿಹಲಾನಿ ಅವರಿಗೆ ಜನ್ಮದಿನದ ಶುಭ ಹಾರೈಸೋಣ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಕ್ಷಣ ಬೇಕಾಗಿದ್ದರೆ...

Mon Dec 19 , 2022
  ತಕ್ಷಣ ಬೇಕಾಗಿದ್ದರೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details… Please follow and like us:

Advertisement

Wordpress Social Share Plugin powered by Ultimatelysocial